Advertisement
ತಾಲೂಕಿನ ಆನಂದ ನಗರದ ಶ್ರೀ ಜಿನ್ನಾಗರದಮ್ಮ ಮತ್ತು ದಂಡಿನ ಮಾರಮ್ಮ ದೇವಿಯ ಪ್ರತಿ ಷ್ಠಾಪನಾ ಮಹೋತ್ಸವ ಹಾಗೂ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯ ಗೆಲುವು ಬಿಜೆಪಿ ಮತ್ತಷ್ಟು ಬಲವರ್ಧನೆಗೆ ಮುನ್ನುಡಿ ಯಾ ಗಿದ್ದು, ರಾಜ್ಯದಲ್ಲಿ ಕಮಲದ ಶಕ್ತಿ ಪ್ರದರ್ಶನವಾಗಿದೆ. ಆನಂದ ನಗರದಲ್ಲಿ ಬಡವರು, ಹಿಂದುಳಿದ ವರ್ಗದವರಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಜನರಿಗೆ ನೆಮ್ಮದಿಯ ತಾಣವಾಗಿದೆ. ದೇವಸ್ಥಾನಗಳಿಂದ ಒತ್ತಡದ ಜನರಿಗೆ ನೆಮ್ಮದಿ ನೀಡಿ ಆತ್ಮಹತ್ಯೆ ಕಡಿಮೆ ಮಾಡುವ ಔಷಧಿಯಾಗಿದೆ ಎಂದರು.
Related Articles
Advertisement
ಗ್ರಾಮಗಳಲ್ಲಿ ಎಲ್ಲರೂ ಒಂದಾಗಲೂ ಇಂತಹ ಕಾರ್ಯಕ್ರಮ ಸಹಕಾರಿ ಯಾಗಿದೆ. ರಾಷ್ಟ್ರೀಯ ಭಾವೈಕ್ಯತೆ ಸಾರಿ ಎಲ್ಲ ಸಮುದಾಯ ದವರು ಗ್ರಾಮದಲ್ಲಿ ಒಂದಾಗಿರುವುದು ಶ್ಲಾಘನಾರ್ಹ ವಿಚಾರ ಎಂದರು.
ಮಹಿಳೆಯರ ಸಮಾನತೆ: ಶಿವಗಂಗೆಯ ಮೇಲಣಗವಿಮಠದ ಶ್ರೀ ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಗ್ರಾಮದಲ್ಲಿ ದೇವಾಲಯಗಳಲ್ಲಿ ಮಹಿಳೆಯರ ಸಮಾನತೆ ಎದ್ದು ಕಾಣುತ್ತಿರುವುದು ಉತ್ತಮ ಬೆಳವಣಿಗೆ. ಜಿನ್ನಾಗರದಮ್ಮ ದೇವಿ ಮತ್ತು ದಂಡಿನಮಾರಮ್ಮದೇವಿಯ ಪೂಜೆ ಮಹಿಳೆಯರ ಸಮಾನತೆಗೆ ಹೊಸ ದಿಕ್ಕನ್ನು ತೋರಿಸಿದೆ. ದೇವರ ಪೂಜೆಯ ಜೊತೆಗೆ ದೇವಿಗೆ ಮಹತ್ವ ನೀಡಿರುವುದು ಸ್ವಾಗತಾರ್ಹ ವಿಚಾರ ಎಂದರು.
ದೇವಿಗೆ ವಿಶೇಷ ಅಲಂಕಾರ, ಪೂಜೆ: ಕಾರ್ಯಕ್ರಮ ದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ, ಹೋಮ ಹವನ, ದೇವಾಲಯಕ್ಕೆ ಬಲಿಹರಣ ಇನ್ನಿತರ ಧಾರ್ಮಿಕ ಕಾರ್ಯಕ್ರಮವನ್ನು ಅರ್ಚಕ ವೆಂಕಟೇಶ್ ಮತ್ತು ಚಂದ್ರ ಹಾಗೂ ಪ್ರಧಾನ ಅರ್ಚಕ ಕೃಷ್ಣಪ್ಪಾಚಾರ್ಯ ನೇತೃತ್ವದಲ್ಲಿ ಜರುಗಿತು. ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ಆಶ್ರಮದ ಶ್ರೀ ರಮಣಾನಂದ ಸ್ವಾಮೀಜಿ, ಜಗಣ್ಣಯ್ಯ ನಮಠದಶ್ರೀ, ವನಕಲ್ಲು ಮಠದ ಶ್ರೀಬಸವರಮಾ ನಂದ ಸ್ವಾಮೀಜಿ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ 20ಕ್ಕೂ ಅಧಿಕಮಠಗಳ ಹರಗುರು ಚರ ಮೂರ್ತಿಗಳು, ಮಾಜಿ ಶಾಸಕ ಎಂ.ವಿ. ನಾಗರಾಜು, ಬೇಗೂರು ಗ್ರಾಪಂ ಅಧ್ಯಕ್ಷ ಬಿ.ಕೆ.ಶ್ರೀನಿವಾಸ್, ಉಪಾಧ್ಯಕ್ಷೆ ಮಮತಾ, ಎನ್‌ಡಿಎ ಅಧ್ಯಕ್ಷ ಮಲ್ಲಯ್ಯ, ಡಾ. ರಮಣ ರಾವ್, ಸುನೀಲ್ ಕುಮಾರ್, ಮುಖಂಡ ಹೊಂಬಯ್ಯ, ಎಂ.ಎನ್.ರಾಮು, ರಾಮಕೃಷ್ಣಯ್ಯ, ಜಗದೀಶ್ ಚೌಧರಿ, ವೆಂಕಟೇಶ್ ದೊಡ್ಡೇರಿ, ವೀಕ್ಷಕ ಶ್ರೀನಿವಾಸ್, ಮಿಲಿ ಮೂರ್ತಿ, ತಾಪಂ ಸದಸ್ಯ ಬಿ. ಕೆ. ಮುನಿರಾಜು, ವೆಂಕಟರಸಪ್ಪ, ಸತೀಶ್, ಮಾರಗೊಂಡನಹಳ್ಳಿ ರಮೇಶ್, ಪುನೀತ್, ಯುವ ಮುಖಂಡ ಹರೀಶ್, ಮುನಿಸ್ವಾಮಿ, ರಂಗನಾಥ್, ಮರಿಯಪ್ಪ, ರಂಗಸ್ವಾಮಿ, ಮಡಿವಾಳ ಸಂಘದ ಮಂಜುನಾಥ್, ಕಲಾವಿದ ಗುರುರಾಜ್ ಹೊಸಕೋಟೆ ಹಾಗೂ ಮತ್ತಿತರರಿದ್ದರು.
ರಾಜ್ಯದಲ್ಲಿ ಹೊಸ ಪರ್ವ ಆರಂಭ: ಗೃಹಸಚಿವರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನವನ್ನು ಗೆದ್ದಿದ್ದು, ಬಿಜೆಪಿ ಬಲವರ್ಧನೆಗೆ ಶಕ್ತಿ ಯಾಗಿದೆ. ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದ್ದು, ವಿಪಕ್ಷಗಳ ಆಟಾಟೋಪ ಕೊನೆ ಯಾಗಿದೆ. ನಮ್ಮ ಮೂರು ಸ್ಥಾನ ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ರಾಜ್ಯಸಭಾ ಚುನಾವಣೆಯಿಂದ ರಾಜ್ಯದಲ್ಲಿ ಹೊಸ ಪರ್ವ ಆರಂಭ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.