Advertisement

ನನ್ನನ್ನು ಯಾರೂ ಸೈಡ್‌ಲೈನ್‌ ಮಾಡಿಲ್ಲ

07:25 AM Jul 03, 2018 | |

ಬಾಗಲಕೋಟೆ: ವಿಜಯಪುರ ಜಿಲ್ಲೆಯ ಭೀಮಾ ತೀರದ ಶೂಟೌಟ್‌ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ
ಇರಲಿಲ್ಲ. ಈ ವಿಷಯದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಯಾರೂ ಸೈಡ್‌ಲೈನ್‌ ಮಾಡಿಲ್ಲ ಎಂದು ಉತ್ತರ ವಲಯದ ಐಜಿಪಿ ಅಲೋಕ ಕುಮಾರ ಹೇಳಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾಧರ ಚಡಚಣ ಕೊಲೆ ಪ್ರಕರಣ, ಧರ್ಮರಾಜ್‌ ಚಡಚಣ ಶೂಟೌಟ್‌ ಪ್ರಕರಣ ಪತ್ತೆ ಮಾಡಲು ಇಲಾಖೆ ಸಮರ್ಪಕ ತನಿಖೆ ನಡೆಸಿತ್ತು.

ನಾವು ನಡೆಸಿದ ತನಿಖೆಯ ದಾಖಲೆಗಳನ್ನೇ ಸಿಐಡಿಗೆ ಸಲ್ಲಿಸಿದ್ದೇವೆ. ಸಿಐಡಿ ಅಧಿಕಾರಿಗಳು ಮುಂದಿನ ತನಿಖೆ
ನಡೆಸಿದ್ದಾರೆ. ಈಗ ಆರು ತಿಂಗಳಿಂದ ಇಂತಹ ಪ್ರಕರಣಗಳು ಪದೇಪದೆ ನಡೆದಿಲ್ಲ. ಹಿಂದೆ ಆಗಿರಬಹುದು. ಭೀಮಾ
ತೀರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದೇವೆ. ವಿಜಯಪುರ ಜಿಲ್ಲೆಯಾದ್ಯಂತ ಪಿಸ್ತೂಲ್‌
ಬಳಕೆದಾರರ ಮರು ಪರಿಶೀಲನೆ ನಡೆಸುತ್ತಿದ್ದೇವೆ. ಅವಶ್ಯಕತೆ ಇದ್ದವರಿಗೆ ಮಾತ್ರ ಪಿಸ್ತೂಲ್‌ ಇಟ್ಟುಕೊಳ್ಳಲು
ಅವಕಾಶ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next