Advertisement

ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ

04:55 PM Jan 27, 2018 | |

ದೇವದುರ್ಗ: ಭಾರತದ ಸಂವಿಧಾನವನ್ನು 26 ನವೆಂಬರ್‌ 1949ರಂದು ಅಂಗೀಕರಿಸಿ 26 ಜನವರಿ 1950 ರಂದು ಜಾರಿಗೊಳಿಸಲಾಯಿತು. ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚಸಿದ್ದರು. ಸಂವಿಧಾನ ಮುಂದೆ ಯಾರೂ
ದೊಡ್ಡವರಲ್ಲ ಎಂದು ತಹಶೀಲ್ದಾರ ಶಿವಶರಣಪ್ಪ ಕಟ್ಟೋಳಿ ಹೇಳಿದರು.

Advertisement

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಸಾರ್ವಜನಿಕ ಕ್ಲಬ್‌ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ಪ್ರತಿಯೊಂದು ದೇಶದ ಮೂಲಭೂತ ಕಾನೂನಾಗಿದೆ. ಒಂದು ದೇಶದ ಕಾನೂನುಗಳನ್ನು
ರೂಪಿಸುವುದಕ್ಕೆ ಸಂವಿಧಾನ ತನ್ನದೇ ಆದ ಮೂಲಗಳನ್ನು ಒದಗಿಸಿಕೊಡುತ್ತದೆ. ದೇಶದ ಜನರ ಭಾವನೆ ಮತ್ತು ಅಗತ್ಯಗಳಿಗೆ ತಕ್ಕಂತೆ ಸಂವಿಧಾನಕ್ಕೆ ಹಲವಾರು ತಿದ್ದುಪಡಿ ಮಾಡಿದ್ದೇವೆ. ಅಲ್ಲದೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರಾಜ್ಯ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿದರು. 

ಹಿಂದುಳಿದ ಪ್ರದೇಶಗಳಿಗೆ 371ನೇ(ಜೆ) ಕಲಂ ಮೂಲಕ ವಿಶೇಷ ಸ್ಥಾನಮಾನ ಕೊಟ್ಟಿದ್ದರೂ ವೈವಿಧ್ಯೆತೆಯಲ್ಲಿ ಏಕತೆ ಸಾರಿದ್ದೇವೆ ಎಂಬುದು ನಮ್ಮ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. 

ಸಂವಿಧಾನ ರಚನೆಗಾಗಿ ಶ್ರಮಿಸಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ಇಲ್ಲಿ ಸ್ಮರಿಸಬೇಕಾಗಿದೆ. ದೇಶಕ್ಕಾಗಿ ಸ್ವಾತಂತ್ರ್ಯ ಸೌಲಭ್ಯ ಕಲ್ಪಿಸುವಲ್ಲಿ ತ್ಯಾಗ ಬಲಿದಾನವಾದ ಮಹಾನಾಯಕರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement

ತಾಪಂ ಅಧ್ಯಕ್ಷ ಹನುಮಂತ ಕಟ್ಟಮನಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ ಅನಿಲ ಕುಮಾರ, ಬಿಇಒ ಎಸ್‌.ಎಂ. ಹತ್ತಿ, ತಾಪಂ ಅಧಿಕಾರಿ ಟಿ.ಜಿ. ವೀರನಾಯಕ, ಮುಖ್ಯಾಧಿಕಾರಿ ಫಿರೋಜಖಾನ್‌, ಸಿಪಿಐ ಟ. ಸಂಜೀವಕುಮಾರ, ಆದಿಕಮಲಮ್ಮ, ಶಿವರಾಜ ಬಿರಾದಾರ, ಪ್ರಾಚಾರ್ಯ ಎಂ.ಎಂ. ದೊಡ್ಡಮನಿ, ಇಕ್ಬಾಲ್‌, ರಾಘವೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next