Advertisement
ಶಾಸಕ ಮಹೇಶ್ ಕುಮಠಳ್ಳಿ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಅಕ್ರಮಬಂಧನದಲ್ಲಿ ಇಟ್ಟುಕೊಂಡಿದ್ದು, ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅಥಣಿಯ ವಕೀಲ ಪ್ರಮೋದ ದಯಾನಂದ ಹಿರೇಮನಿ ಎಂಬುವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ.ಎನ್.ಫಣೀಂದ್ರ ಹಾಗೂ ನ್ಯಾ.ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶಾಸಕ ಮಹೇಶ್ ಕುಮಠಳ್ಳಿ ಬುಧವಾರ ಖುದ್ದು ಹಾಜರಿದ್ದರು.ಶಾಸಕರ ಪರ ವಕೀಲ ಡಿ.ಎಸ್.ಜೀವನ್‌ಕುಮಾರ್ ನ್ಯಾಯಪೀಠಕ್ಕೆ ಶಾಸಕರ ಅಫಿಡವಿಟ್ ಸಲ್ಲಿಸಿದರು. ಇದರಲ್ಲಿ “ಪ್ರಕರಣದಲ್ಲಿ ಅರ್ಜಿದಾರರು ಹೇಳಿರುವಂತೆ ನನ್ನನ್ನು ಯಾರೂ ಬಂಧನದಲ್ಲಿ ಇಟ್ಟಿಲ್ಲ. ಫೆ.13 ಮತ್ತು 14ರಂದು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದೇನೆ’ ಎಂದು ಮಹೇಶ್ ಕುಮಠಳ್ಳಿ ಹೇಳಿದ್ದಾರೆ. ಈ ಪ್ರಮಾಣಪತ್ರ ದಾಖಲಿಸಿ ಕೊಂಡ ನ್ಯಾಯಪೀಠ, ಶಾಸಕ ಮಹೇಶ್, ರಮೇಶ್ ಜಾರಕಿಹೊಳಿ ಇವರಿಬ್ಬರಿಗೆ ಸೀಮಿತವಾಗಿ ಅನ್ವಯವಾಗುವಂತೆ ಅರ್ಜಿಯನ್ನು ವಜಾಗೊಳಿಸಿ, ಪ್ರಕರಣದ ವಿಚಾರಣೆ ಬಾಕಿ ಇಟ್ಟುಕೊಂಡು ಆದೇಶಿಸಿತು.