Advertisement
ಕೊಪ್ಪಳ ಸಮೀಪದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಹಗಲು ರಾತ್ರಿ ಕಷ್ಟಪಟ್ಟು ಕಟ್ಟಿದವರಲ್ಲಿ ನಾನೂ ಒಬ್ಬ. ಇದರಲ್ಲಿ ನನ್ನನ್ನು ಕಡೆಗಣಿಸಲಾಗಿದೆ ಎನ್ನುವ ಮಾತುಗಳಿಗೆ ಅರ್ಥವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಒಂದಾಗಿದ್ದೇವೆ. ನಮ್ಮ ಒಂದೇ ಗುರಿ ಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಂತದ್ದಾಗಿದೆ ಎಂದರು.
Related Articles
Advertisement
ಜನಾರ್ದನ ರೆಡ್ಡಿ ಅವರು ನನಗೆ ಸಿಕ್ಕಿದ್ದರು. ಅವರೊಟ್ಟಿಗೆ ಮಾತನಾಡಿದ್ದೇನೆ. ಪಕ್ಷದ ನಾಯಕರ ಜೊತೆ ಮಾತನಾಡಲಿದ್ದಾರೆ. ಅವರ ಮೇಲೆ ಸಣ್ಣ ಪುಟ್ಟ ಕೇಸ್ ಇವೆ. ಅವುಗಳು ಬಗೆ ಹರಿದ ಮೇಲೆ ಅವರು ನಮ್ಮ ಪಕ್ಷದಲ್ಲೇ ಇರ್ತಾರೆ. ನಮ್ಮ ಜೊತೆಗೆ ಅವರು ಪಕ್ಷ ಕಟ್ಟುವ ಕಡಿಮೆ ಕೆಲಸ ಮಾಡಲಿದ್ದಾರೆ. ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವೆಲ್ಲ ಗೊಂದಲ ಉಂಟಾಗಿವೆ. ಅವರು ಏಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಅವರನ್ನು ನಾವು ಉಪಯೋಗ ಮಾಡಿಕೊಳ್ಳುತ್ತೇವೆ. ಅವರಿಗೂ ಈ ಭರವಸೆ ಕೊಟ್ಟಿದ್ದೇನೆ. ಪಕ್ಷದ ನಾಯಕರೂ ಈ ಬಗ್ಗೆ ತೀರ್ಮಾನ ಕೈಗೊಳ್ತಾರೆ ಎಂದರು.
ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ, ಈ ರೀತಿ ಹೇಳುವ ಮೂಲಕ ಪ್ರಸಿದ್ದಿ ಪಡೆಯುತ್ತೇನೆ ಎನ್ನುವ ಭ್ರಮೆಯಲ್ಲಿ ಹೇಳಿಕೆ ನೀಡಿದ್ದಾರೆ. ಮೂರು ನಾಲ್ಕು ಬಾಗಿಲು ಎಲ್ಲಿದೆ ಎನ್ನುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರೆಲ್ಲರನ್ನು ಒಂದು ಮಾಡಲು ಹರ ಸಾಹಸ ಪಡುತ್ತಿದ್ದಾರೆ. ತಾವು ತಮ್ಮ ಮನೆಯನ್ನ ರಿಪೇರಿ ಮಾಡಿಕೊಳ್ಳುವುದು ಬಿಟ್ಟು ನಾವೆಲ್ಲ ಒಗ್ಗಟ್ಟಾಗಿದ್ದವರ ಬಗ್ಗೆ ಮಾತನಾಡಿ ತಮ್ಮ ದೌರ್ಬಾಗ್ಯ ತೋರುತ್ತಿದ್ದಾರೆ. ಅವರು ನಮ್ಮ ಬಗ್ಗೆ ಇದೇ ರೀತಿ ಮಾತನಾಡುತ್ತಾ ಇರಲಿ. ನಾವು ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಬಸ್ ಯಾತ್ರೆ ಅದು ಅವರಿಗೆ ಬಿಟ್ಟಿದ್ದು ಆ ಪಕ್ಷದ ಬಗ್ಗೆ ನಾನು ಮಾತನಾಡಲ್ಲ ಎಂದರಲ್ಲದೇ, ನಾನು ಸಿಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರ ಬಂದು ನಾನೊಬ್ಬ ಸಾಮಾನ್ಯ ಕಾರ್ಯಕರ್ತನ ತರ ಪಕ್ಷ ಕಟ್ಟು ಕೆಲಸ ಮಾಡುತ್ತಿದ್ದೇನೆ. ನಾನು ಸಿಎಂ ಆಗಿದ್ದಾಗ ತೋರುವ ಗೌರವ ಈಗಲೂ ತೋರುತ್ತಿದ್ದಾರೆ. ನನ್ನ ಆಸೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದಾಗಿದೆ ಎಂದರು.
ವಿಜಯೇಂದ್ರ ಅವರ ಸ್ಪರ್ಧೆ ವಿಚಾರ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಅಲ್ಲಿಂದ ಅವರು ಅಲ್ಲಿಂದ ಸ್ಪರ್ಧೆ ಮಾಡ್ತಾರೆ. ಪಕ್ಷದ ತೀರ್ಮಾನ ಅಂತಿಮವಾಗಿದೆ ಎಂದರು.