Advertisement

ಯಾರಿಗೂ ಎಸ್‌ ಅಂದಿಲ್ಲ ನೋ ಅಂತಾನೂ ಹೇಳಿಲ್ಲ!

07:50 PM May 01, 2018 | |

ಹುಡುಗ ಹೇಗಿಬೇಕು ಅಂದ್ರೆ, ತುಂಬಾ ಸುಂದರವಾಗಿರೋದೇನ್‌ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್‌ ಮಾಡ್ಸ್‌ಬೇಕಾಗುತ್ತೆ. ಕಲರ್‌ ಕಪ್ಪಿದ್ರೂ ಪರವಾಗಿಲ್ಲ (ಕಂಡಿಷನ್ಸ್ ಅಪ್ಲೈ) ಮನಸ್ಸು ಬೆಳ್ಳಗಿರಬೇಕು…

Advertisement

ರೀ ಇವ್ರೆ , ಕರೆಕ್ಟ್ ಆಗಿ ಕೇಳಿಸ್ಕೋಬಿಡಿ ಸಾರ್‌. ನನ್‌ ಹೆಸ್ರು ಚಂದ್ರಿಕಾ. ಏನ್‌ ಹೇಳಿ… ಚಂದ್ರಿ ಅಲ್ಲ, ಚಂದ್ರಶ್ರೀನೂ ಅಲ್ಲ, ಚಂದ್ರಮ್ಮ ಅಂತೇನಾದ್ರೂ ಕರೆದ್ರೋ- ನಿಮ್ಗೆ ಒದೆ ಗ್ಯಾರಂಟಿ. ಗೊತ್ತಾಯ್ತು ತಾನೆ? ನನ್‌ ಹೆಸರು ಚಂದ್ರಿಕಾ. ಈ ವಾರವಷ್ಟೇ 19ರಿಂದ 20ನೇ ವರ್ಷಕ್ಕೆ ಝಂಯ್ಕ ಅಂತ ಜಂಪ್‌ ಮಾಡ್ತಾ ಇದೀನಿ. ಅಂಗಡಿಗೆ ಹೋದಾಗ ಚಿಲ್ಲರೆ ಕೊಡುವ ನೆಪದಲ್ಲಿ ನನ್ನ ಕೈ ಮುಟ್ಟಲು ಅಲ್ಲಿರುವ ಪುಟ್ಟರಾಜು ಅಂಕಲ್, ಕಾಲ್ ಮಾಡಿದ ತಕ್ಷಣ ಆಟೋ ತಗೊಂಡು ಬಂದೇಬಿಡುವ ಸಯ್ಯದ್‌, ಪಾಠ ಹೇಳಿಕೊಡುವ ವೇಳೆಯಲ್ಲೇ ಅಕಸ್ಮಾತ್‌ ಅನ್ನುವಂತೆ ಕಣ್ಣು ಹೊಡೆಯುವ ವಿಜಿ ಮೇಷ್ಟ್ರು, ದಿನವೂ ಕಲರ್‌ ಕಲರ್‌ ಗುಲಾಬಿ ನಗುವ ವಿನ್ಸೆಂಟ್‌, ಈ ಹುಡುಗಿ ನನಗೇ ಅಂತ ಆಗಲೇ ಐದಾರು ಜನರಿಗೆ ಹೇಳಿರುವ ಅಮ್ಮನ ತಮ್ಮ ಹರೀಶ್‌ ಮಾಮ… ಹೀಗೆ ಸಾಕಷ್ಟು ಜನ ನನ್ನನ್ನು ಕಾಡಲು ಶುರು ಮಾಡಿದ್ರಲ್ಲ- ಅವತ್ತೇ, ನಾನು ಡ್ರೀಂ ಗರ್ಲ್, ನಾನು ಸುಂದರಿ ಅಂತ ಗ್ಯಾರಂಟಿ ಆಗೋಯ್ತು ನನಗೆ .

  ಇಷ್ಟು ಜನರ ಪ್ರೀತಿಯ(?)ಹೊಳೆಯಲ್ಲಿ ಮುಳುಗದೇ ಇವತ್ತು ಕಾಲೇಜಿನ ಮೆಟ್ಟಿಲ ಮೇಲೆ ಬಂದು ನಿಂತಿದ್ದೀನಿ, ನನ್ನನ್ನ ಅಷ್ಟೊಂದು ಪ್ರೀತಿಸುತ್ತಿದ್ದ ಹುಡುಗರಲ್ಲಿ ಯಾರೊಬ್ಬರಿಗಾದರೂ ಎಸ್‌ ಎಂದುಬಿಡಲೇ ಅಂತ ಸಾವಿರ ಸಲ ಯೋಚಿಸುತ್ತಿದ್ದೆ. ಆಗಲೇ ಆಸೆಬುರುಕ ಮನಸ್ಸು, ಏಯ್ ಸುಮ್ನಿರು, ಸ್ವಲ್ಪ ಕಾದರೆ ಚೆನ್ನಾಗಿರೋ ಹೊಸಾ ಮೊಬೈಲ್ ಸಿಗುತ್ತೆ ನೋಡು, ಅದೇ ಥರಾ, ಸ್ವಲ್ಪ ದಿನ ಕಾದರೆ ಇನ್ನೂ ಚಂದದ ಹುಡುಗ ಸಿಕ್ತಾನೆ ಅಂತ ಪಿಸುಗುಡುತ್ತಿತ್ತು! ಹಾಗಾಗಿ, ತಾಳಿದವಳು ಬಾಳಿಯಾಳು ಅಂದ್ಕೊಂಡು, ಎಲ್ರುನ್ನೂ ಆಟ ಆಡಿಸ್ಕೊಂಡು, ಯಾರಿಗೂ ಎಸ್‌ ಅನ್ನದೆ, ಯಾರಿಗೂ ನೋ ಅನ್ನದೆ ಸುಮ್ನೆ ಉಳಿದಿºಟ್ಟೆ.

ಈಗ, ನನ್‌ ಬಗ್ಗೆ ಎರಡೇ(?) ಸಾಲಲ್ಲಿ ಹೇಳಿºಡ್ತೀನಿ. ಯೆಸ್‌, ನಂಗೆ ಕೋಪ ಬೇಗ ಬರುತ್ತೆ. ಅಳು ಮಾತ್ರ ಶತಾಬ್ಧಿ ಎಕ್ಸ್‌ಪ್ರೆಸ್‌ಗಿಂತಲೂ ಸ್ಪೀಡು, ಅಮ್ಮ ಅಂದ್ರೆ ಇಷ್ಟ, ಅಪ್ಪ ಅಂದ್ರೆ ಪ್ರಾಣ. ಪಟಪಟಾಂತ ಮಾತಾಡ್ತೀನಿ. ಇನ್ನೂ ಹದಿನೈದ್‌ ವರ್ಷ ಬೆಂಗ್ಳೂರ್‌ ಬಿಟ್ಟು ಆಚೆ ಹೋಗಲ್ಲ. ರಸ್ತೆ ಬದಿಯ ಪಾನಿಪುರಿ ಜೊತೆಗೆ, ಮಲ್ಲೇಶ್ವರಂ ಜನತಾ ಹೋಟ್ಲಿನ ಮಸಾಲ ದೋಸೆ, ಸಿ.ಟಿ.ಆರ್‌ ಬೆಣ್ಣೆದೋಸೆ, ವೀಣಾ ಸ್ಟೋರ್ ಇಡ್ಲಿ-ವಡೆ, ಜಯನಗರದ ಕೂಲ್‌ ಜಾಯಿಂಟು, ಸಜ್ಜನ್‌ ರಾವ್‌ ಸರ್ಕಲ್ಲಿನ ವಿ.ಬಿ ಬೇಕರಿ, ಸುಪ್ರಭಾತ ಕಾಫಿ ಹೌಸಿನ ಅನ್ನ ಸಾಂಬಾರ್‌ ಇಲ್ಲಿಗೆಲ್ಲಾ ಹೋಗೋದು ಅಂದ್ರೆ  ಪಂಚಪ್ರಾಣ. ವಾರಕ್ಕೆರಡು ಸಲ ಕರ್ಕೊಂಡ್‌ ಹೋದ್ರು ಸಾಕು.

ಈಗ, ಮೇನ್‌ ಪಾಯಿಂಟ್‌ಗೆ ಬರ್ತೀನಿ. ಹುಡುಗ ಹೇಗಿಬೇìಕು ಅಂದ್ರೆ, ತುಂಬಾ ಸುಂದರವಾಗಿರೋದೇನ್‌ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್‌ ಮಾಡ್ಸ್‌ಬೇಕಾಗುತ್ತೆ. ಕಲರ್‌ ಕಪ್ಪಿದ್ರೂ ಪರವಾಗಿಲ್ಲ (ಕಂಡಿಷನ್ಸ್ ಅಪ್ಲೈ) ಮನಸ್ಸು ಬೆಳ್ಳಗಿರಬೇಕು…

Advertisement

ನನ್ನನ್ನ, ನನ್ನ ಮನೆಯವರನ್ನ, ಪ್ರೀತಿಸಿ ಗೌರವಿಸುವ ಹೃದಯವಿರಬೇಕು, ಪಾರ್ಕಲ್ಲಿ ಕೂತಿರೋವಾಗ ಒಂದು ಫೀಟ್‌ ದೂರ, ನನಗೆ ತುಂಬಾ ಬೇಜಾರಾದಾಗ ನಾನು ಕರೆದಷ್ಟು ಹತ್ತಿರ ಬಬೇìಕು. ಯಾವುದೇ ಕಾರಣಕ್ಕೂ ನನಗೆ ಬಯ್ಯೋ ಹಾಗಿಲ್ಲ. ಅಕಸ್ಮಾತ್‌ ಹೊಡೆಯೋದಾದ್ರೆ, ನನ್ನಿಂದಾನು ಹೊಡೆತ ತಿನ್ನೋಕೆ ರೆಡಿ ಇಬೇìಕು…

ಏನಪ್ಪ ಈ ಹುಡುಗಿ ಹೀಗೆಲ್ಲಾ ಮಾತಾಡ್ತಾಳೆ  ಅಂತ ಕೋಪ ಮಾಡ್ಕೊತೀರೇನೋ. ನಿಮ್ಮನ್ನ ಸುಮ್ನೆ ಗೋಳು ಹೊಯೊಬೇಕು ಅನ್ನಿಸ್ತು. ಅದ್ಕೆ ಹೀಗೆಲ್ಲ ಮಾತಾಡಿºಟ್ಟೆ. ಕೊನೆಯವರೆಗೂ ನಿನ್‌ ಜೊತೆ ಇರ್ತೀನಿ ಅನ್ನುವ ಸಣ್ಣ ಭರವಸೆಯನ್ನು ನನಗೆ, ಮತ್ತು ಪ್ರಾಮಾಣಿಕವಾಗಿ ಒಂದೊಳ್ಳೇ ಬದುಕನ್ನ ನಿಮ್ಮ ಮಗಳಿಗೆ ಕೊಡ್ತೀನಿ ಅನ್ನುವ ಧೈರ್ಯವನ್ನ ನನ್ನ ಅಪ್ಪ ಅಮ್ಮನಿಗೆ ಕೊಡುವ ಯಾರಾದರೂ ಹುಡುಗ ಇದ್ರೆ ಯಾವುದೇ ಶರತ್ತಿಲ್ಲದೆ ಅವನ ಪ್ರೀತಿಗೆ ಎಸ್‌ ಅನ್ನೋಕೆ ಈ ಚಂದ್ರಿಕಾ ಅನ್ನುವ ಚಾಂದಿನಿ ಕಾಯುತ್ತಿದ್ದಾಳೆ. ನೋಟ್‌ ಮಾಡ್ಕೊಳ್ಳಿ, ನೋಟ್‌ ಮಾಡ್ಕೊಳ್ಳಿ, ನೋಟ್‌ ಮಾಡ್ಕೊಳ್ಳಿ.

ಚಂದ್ರಿಕಾ

Advertisement

Udayavani is now on Telegram. Click here to join our channel and stay updated with the latest news.

Next