Advertisement

ಯಾರಿಗೂ ಸಚಿವಗಿರಿ ತಪ್ಪಿಸಿಲ್ಲ

06:25 AM Jun 08, 2018 | Team Udayavani |

ಬೆಂಗಳೂರು: “ಸಚಿವ ಸಂಪುಟ ರಚನೆ ಕೇವಲ ನನ್ನೊಬ್ಬನ ತೀರ್ಮಾನದಿಂದ ಆಗಿಲ್ಲ. ಹೈಕಮಾಂಡ್‌
ಎಲ್ಲ ಮುಖಂಡರೊಂದಿಗೆ ಚರ್ಚಿಸಿಯೇ ಅಂತಿಮಗೊಳಿಸಿದೆ. ಇದರಲ್ಲಿ ಯಾವುದೇ ದುರುದ್ದೇಶ ಅಥವಾ ವೈಯಕ್ತಿಕ ಸೇಡು ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

Advertisement

ನಗರದ ಕುಮಾರ ಕೃಪ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂಪುಟ ರಚನೆಗೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಸೇರಿ ಎಲ್ಲ ನಾಯಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದಾರೆ. ಇದಕ್ಕೂ ಮುನ್ನ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಎಂ. ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರೊಂದಿಗೆ ಪ್ರತ್ಯೇಕವಾಗಿ ಕರೆದು
ಚರ್ಚಿಸಿದ್ದಾರೆ. ಹಾಗಾಗಿ, ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ 15 ಜನರ ಪಟ್ಟಿ ಕೇವಲ ನನ್ನೊಬ್ಬನ ತೀರ್ಮಾನ ಅಲ್ಲ’ ಎಂದು ತಿಳಿಸಿದರು.

ಸೇಡು; ಸತ್ಯಕ್ಕೆ ದೂರ: “ಮೂಲತಃ ನಾನು ಸೇಡಿನ ಮನಸ್ಥಿತಿಯವನಲ್ಲ. ವೈಯಕ್ತಿಕ ದ್ವೇಷ ಅಥವಾ ಸೇಡು ಈ ತೀರ್ಮಾನದಲ್ಲಿಲ್ಲ. ಆದಾಗ್ಯೂ”ಡಾ.ಪರಮೇಶ್ವರ ಸೇಡು ತೀರಿಸಿಕೊಂಡಿದ್ದಾರೆ’ ಎಂದು ಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ಇದರ ಹಿಂದ ಯಾರ ಕೈವಾಡವೂ ಇಲ್ಲ ಎಂದರು.

6 ತಿಂಗಳಿಗೊಮ್ಮೆ ಮೌಲ್ಯಮಾಪನ: ಸಚಿವ ಸ್ಥಾನಕ್ಕೆ ಆಯ್ಕೆಯಾದವರ ಕಾರ್ಯವೈಖರಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಎಐಸಿಸಿ ಮೌಲ್ಯಮಾಪನ ಮಾಡುತ್ತದೆ. ತೃಪ್ತಿಕರವಾಗಿಲ್ಲದಿದ್ದರೆ, ಅಂತಹವರನ್ನು ಕೈಬಿಟ್ಟು ಮತ್ತೂಬ್ಬರಿಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ, ಆಗಾಗ್ಗೆ ಸಚಿವ ಸಂಪುಟ ವಿಸ್ತರಣೆಯೂ ಆಗಲಿದೆ. 82 ನಿಗಮ-ಮಂಡಳಿಗಳಿದ್ದು, ಜೆಡಿಎಸ್‌-ಕಾಂಗ್ರೆಸ್‌ ನಡುವೆ 3ನೇ ಎರಡು ಭಾಗ ಮತ್ತು 3ನೇ 1 ಭಾಗದಷ್ಟು ಹಂಚಿಕೆ ಆಗಲಿವೆ. ಈ ಹುದ್ದೆಗಳಿಗೆ ಶೇ. 50ರಷ್ಟು ಶಾಸಕರು ಮತ್ತು ಉಳಿದ ಶೇ. 50ರಷ್ಟು ಪಕ್ಷದ ಕಾರ್ಯಕರ್ತರಿಗೆ ಅವಕಾಶ
ಕಲ್ಪಿಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ತಿನ ಸಭಾನಾಯಕರಾಗಿ ಸ್ವಾಭಾವಿಕವಾಗಿ ಜಯಮಾಲಾ ಆಯ್ಕೆ ಆಗಿದ್ದಾರೆ ಎಂದರು.

Advertisement

ಪಕ್ಷದ ಶಾಸಕರು ಯಾರೂ ಬಿಜೆಪಿ ಗಾಳಕ್ಕೆ ಬೀಳುವುದಿಲ್ಲ. ಸಚಿವ ಸ್ಥಾನದಿಂದ ವಂಚಿತರಾಗಿದ್ದರಿಂದ ಸಹಜವಾಗಿಯೇ
ಅಸಮಾಧಾನ ಆಗಿರುತ್ತದೆ. ಅಂತಹವರನ್ನು ಬಿಜೆಪಿ ಮುಖಂಡರು ಸಂಪರ್ಕ ಮಾಡಿರುವ ಬಗ್ಗೆ ಮಾಹಿತಿ ಇದೆ.

– ಡಾ.ಜಿ.ಪರಮೇಶ್ವರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next