Advertisement

Maldives: ನಮಗೆ ಬೆದರಿಕೆ ಹಾಕುವ ಪರಾವನಗಿ ಯಾರಿಗೂ ಇಲ್ಲ: ಮುಯಿಜು

11:19 PM Jan 13, 2024 | Team Udayavani |

ಮಾಲೆ/ಬೀಜಿಂಗ್‌: ಭಾರತದ ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸವನ್ನು ಹಾಗೂ ವೈಯಕ್ತಿಕ ನಿಂದನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾದರೂ ಮಾಲ್ಡೀವ್ಸ್‌ ತನ್ನ ಕಿಡಿಗೇಡಿತನ ಬಿಟ್ಟಿಲ್ಲ. ಐದು ದಿನಗಳ ಚೀನಾ ಪ್ರವಾಸ ಮುಕ್ತಾಯಗೊಂಡ ಬಳಿಕ ಶನಿವಾರ ಮಾತನಾಡಿದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಈಗ ಭಾರತಕ್ಕೇ ಸವಾಲೆಸೆದು “ನಮ್ಮ ರಾಷ್ಟ್ರವನ್ನು ಬೆದರಿಸುವ ಪರವಾನಗಿ ಯಾರಿಗೂ ನೀಡಿಲ್ಲ’ ಎಂದು ದಾಷ್ರ್ಟ್ಯತೆ ಪ್ರದರ್ಶಿಸಿದ್ದಾರೆ.

Advertisement

“ನಮ್ಮ ದೇಶ ಗಾತ್ರದಲ್ಲಿ ಸಣ್ಣದಾಗಿರಬಹುದು. ಅದರ ಅರ್ಥ ನಮ್ಮ ಮೇಲೆ ಸವಾರಿ ಮಾಡುವ ಅಥವಾ ಬೆದರಿಸಲು ಪರವಾನಗಿ ನೀಡಿದ್ದೇವೆ ಎಂಬ ಅರ್ಥವಲ್ಲ” ಎಂದು ಹೇಳಿದ್ದಾರೆ. ಚೀನಾ ಕೂಡ ಮಾಲ್ಡೀವ್ಸ್‌ನ ಆಂತರಿಕ ವಿಚಾರದಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡುವುದರ ಬಗ್ಗೆ ವಿರೋಧಿಸುತ್ತದೆ ಎಂದು ಹೇಳಿತ್ತು. ಆ ಭರವಸೆಯಿಂದ ಹುರುಪುಗೊಂಡ ಮುಯಿಜು ಈ ರೀತಿಯ ಮಾತುಗಳನ್ನಾಡಿದ್ದಾರೆ.

ಜ.7ರಂದು ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ತೆರಳಿದ ಬಳಿಕ ಅಲ್ಲಿನ ಬೀಚ್‌ಗಳಿಗೆ ಭೇಟಿ ನೀಡುವ ಬಗ್ಗೆ ಆಹ್ವಾನ ನೀಡಿದ್ದರು. ಇದರಿಂದ ಕ್ರುದ್ಧಗೊಂಡಿದ್ದ ಮಾಲ್ಡೀವ್ಸ್‌ನ ಮೂವರು ಸಚಿವರು ಮೋದಿಯವರ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರು. ಇದರಿಂದಾಗಿ ದೇಶವಾಸಿಗಳೆಲ್ಲ ಆ ದೇಶದ ಸರ್ಕಾರದ ವಿರುದ್ಧ ಸಿಡಿದು ನಿಂತಿದ್ದರು. ಜತೆಗೆ ಅಲ್ಲಿಗೆ ಪ್ರವಾಸ ಬುಕ್‌ ಮಾಡಿದ್ದನ್ನೂ ರದ್ದುಗೊಳಿಸಿದ್ದರು. ಇದರಿಂದ ಆತಂಕಗೊಂಡಿದ್ದ ಮುಯಿಜು ಪ್ರವಾಸಿಗರನ್ನು ತಮ್ಮ ದೇಶಕ್ಕೆ ಕಳುಹಿಸುವಂತೆ ಚೀನಾಕ್ಕೆ ದುಂಬಾಲು ಬಿದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next