Advertisement

ಜೆಡಿಎಸ್ ಗೆ ಬೆಂಬಲ ಕೊಡಬೇಕು ಎಂದು ಯಾರು ನಮ್ಮ ಬಳಿ ಕೇಳಿಲ್ಲ: ಡಿಕೆ ಶಿವಕುಮಾರ್

04:26 PM Jun 05, 2020 | keerthan |

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂದು ಯಾರು ನಮ್ಮ ಬಳಿ ಕೇಳಿಲ್ಲ. ನಮ್ಮ ನಾಯಕರು ಏನು ತೀರ್ಮಾನ ಮಾಡಿರುತ್ತಾರೆ ಅದಕ್ಕೆ ಬದ್ದನಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಕಾಂಗ್ರೆಸ್ ಭವನದ ಬಳಿ ಮಾತನಾಡಿದ ಅವರು, ಈ ವಿಚಾರವಾಗಿ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ಕುಮಾರಸ್ವಾಮಿ ಅವರು ಹಿರಿಯರು, ಅವರ ಅಭಿಪ್ರಾಯ ತಿಳಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆದೇಶ ಪಾಲನೆ ಮಾಡುತ್ತೇನೆ. ಆದರೆ ಕೆಲವರು 50-30-40 ಅಂತ ಏನೇನೊ ಲೆಕ್ಕ ಹಾಕುತ್ತಿದ್ದಾರೆ. ಅದೇನು ಕಡಲೆಕಾಯಿ ವ್ಯಾಪಾರನಾ ಎಂದರು.

ಯಾವ ಹೋಟೆಲ್ ನಲ್ಲಿ ಯಾರು ಸಭೆ ಮಾಡುತ್ತಾರೆ. ಯಾರು ಯಾರಿಗೆ ಕಾವಲು ಕಾಯುತ್ತಿದ್ದಾರೆ ಅದೆಲ್ಲಾ ಗೊತ್ತಿದೆ. ಹಲವಾರು ನಾಯಕರು ನಮ್ಮ ಪಕ್ಷಕ್ಕೆ ಸೇರಲು ಬಯಸಿದ್ದಾರೆ. ಅದಕ್ಕೆ ನಾನು ಒಪ್ಪುವುದಲ್ಲ, ನಮ್ಮ ಸಮಿತಿ ಒಪ್ಪಬೇಕು. ಅಲ್ಲಂ ವೀರಭದ್ರ ಅವರು ಸೇರಿ ಸುಮಾರು ಜನ ಸೇರಿಸಿ ಒಂದು ಸಮಿತಿ ಮಾಡಿದ್ದೇನೆ. ಯಾರು ಪಕ್ಷಕ್ಕೆ ಸೇರಬೇಕು ಅವರು ನಿರ್ಧಾರ ಮಾಡುತ್ತಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಅಭ್ಯರ್ಥಿ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಇದು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ತೆಗೆದುಕೊಂಡಿರುವ ನಿರ್ಧಾರ. ಇದು ರಾಷ್ಟ್ರಮಟ್ಟದಲ್ಲಿ ನಿರ್ಧಾರ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next