Advertisement

ಕಂಠೀರವದಲ್ಲಿ ಅಥ್ಲೀಟ್‌ಗೆ ಅಡಚಣೆ ಆಗಿಲ್ಲ: ಮಧ್ವರಾಜ್‌

10:15 AM Dec 06, 2017 | Team Udayavani |

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅಡಚಣೆಯಾಗಿಲ್ಲ, ನಿತ್ಯದ ಚಟುವಟಿಕೆ ನಿರಂತರವಾಗಿದೆ ಎಂದು ಯುವಸಬಲೀಕರಣ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Advertisement

ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಂಗಳವಾರ ಮಾತನಾಡಿದರು. ಕಂಠೀರವದಲ್ಲಿ ಅಭ್ಯಾಸ ನಡೆಸುವ ಎಲ್ಲ ಅಥ್ಲೀಟ್‌ಗಳಿಗೂ ಉತ್ತಮ ಭವಿಷ್ಯವಿದೆ. ಇತರೆ ಕ್ರೀಡೆಗಳನ್ನು ಅಭ್ಯಾಸ ನಡೆಸುತ್ತಿರುವಕ್ರೀಡಾಪಟುಗಳಿಗೂ ಭವ್ಯ ಭವಿಷ್ಯ  ವಿದೆ. ಸಣ್ಣಪುಟ್ಟ ಅಡಚಣೆಗಳು ಇವೆ. ಅವನ್ನೆಲ್ಲ ಸರಿ ಮಾಡುತ್ತಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈಗಲೇ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕಂಠೀರವ ಕ್ರೀಡಾಂಗಣವನ್ನು ಫ‌ುಟ್‌ಬಾಲ್‌ ಆಯೋಜಿಸಲು ಖಾಸಗಿ ಕ್ಲಬ್‌ಗ ನೀಡಲಾಗಿದೆ. ಫ‌ುಟ್‌ಬಾಲ್‌ ಹಾವಳಿಯಿಂದಾಗಿ ಅಥ್ಲೀಟ್‌ಗಳ ದೈನಂದಿನ ಅಭ್ಯಾಸಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಕೆಲವು ಸಲ ಕ್ರೀಡಾಪಟುಗಳನ್ನೇ ಟ್ರ್ಯಾಕ್‌ನೊಳಕ್ಕೆ ಬಿಡುವುದಿಲ್ಲ. ಅಥ್ಲೀಟ್‌ ಗಳಿಗಿರುವ ಕ್ರೀಡಾಂಗಣವನ್ನು ಇತರರಿಗೆ ನೀಡಬಾರದು ಎಂದು ಕೋರಿ ಕೋಚ್‌ ಬೀಡು ಸೇರಿದಂತೆ ಹಲವು ಕೋಚ್‌ಗಳು, ರಾಷ್ಟ್ರೀಯ ಅಥ್ಲೀಟ್‌ ಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆಗೆತ್ತಿಕೊಂಡ ನ್ಯಾಯಾಲಯ ಸೋಮವಾರ ಕಾರಣ ಕೇಳಿ ಕ್ರೀಡಾ ಇಲಾಖೆಗೆ ನೋಟಿಸ್‌ ಜಾರಿ ಮಾಡಿದೆ. ಬುಧವಾರ ವಿಚಾರಣೆ ನಡೆಯಲಿದೆ. ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next