Advertisement

ರಿಟರ್ನ್ಸ್ ಸಣ್ಣ ವ್ಯತ್ಯಾಸ ಇದ್ದರೆ ನೋಟಿಸ್‌ ಬರಲ್ಲ

04:20 PM Feb 07, 2018 | |

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ. ನೀವು ಫೈಲ್‌ ಮಾಡಿದ ಐಟಿ ರಿಟರ್ನ್ಸ್ನಲ್ಲಿ ಸಣ್ಣ ಪುಟ್ಟ ತಪ್ಪಾಗಿದೆಯೇ? ಹಾಗಿದ್ದರೆ ಅದಕ್ಕೆ ಐಟಿ ಇಲಾಖೆ ಯಿಂದ ನೋಟಿಸ್‌ ಬರುವುದಿಲ್ಲ. ಹೀಗೆಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ. 

Advertisement

ಹಣಕಾಸು ವಿಧೇಯಕದಲ್ಲಿ ಈ ಅಂಶ ಸೇರಿಸಲಾಗಿದೆ. ಸಣ್ಣ ಮತ್ತು ಸಂಬಳದಾರರಿಗೆ ಉಂಟಾಗುವ ಅನಾನುಕೂಲ ಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫಾರಂ 16 ಮತ್ತು ಫಾರಂ-26ಎಎಸ್‌ನಲ್ಲಿ ಕೆಲವೊಮ್ಮೆ ಮಾಹಿತಿ ವ್ಯತ್ಯಾಸದಿಂದ ಹೀಗಾಗುತ್ತದೆ. ಅದಕ್ಕಾಗಿಯೇ ನೋಟಿಸ್‌ ನೀಡದಿರಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next