Advertisement

ಅದ್ದೂರಿ ಹೊಸ ವರ್ಷ ಆಚರಣೆ ಬೇಡ: ಕೇಂದ್ರ ಸರಕಾರ ಮನವಿ

12:59 AM Dec 18, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಒಮಿಕ್ರಾನ್‌ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಅನಗತ್ಯ ಪ್ರಯಾಣ ಕೈಗೊಳ್ಳಬಾರದು. ಹೊಸ ವರ್ಷದ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಮನವಿ ಮಾಡಿದ್ದಾರೆ.

Advertisement

11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ 113 ಪ್ರಕರಣಗಳು ದೃಢಪಟ್ಟಿವೆ ಎಂದೂ ಅವರು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಶುಕ್ರವಾರ ಸಂಜೆ ಅವರು ಪತ್ರಿಕಾಗೋಷ್ಠಿ ನಡೆಸಿ, ದೇಶದಲ್ಲಿ ಇದುವರೆಗೆ 101 ಒಮಿಕ್ರಾನ್‌ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದಿದ್ದರು. ಆದರೆ ರಾತ್ರಿಯ ವೇಳೆಗೆ ಹೊಸದಾಗಿ 12 ಪ್ರಕರಣಗಳು ದೃಢಪಟ್ಟು ಒಟ್ಟು ಸಂಖ್ಯೆ 113ಕ್ಕೇರಿದೆ.

20 ದಿನಗಳಲ್ಲಿ ದೈನಿಕ ಕೊರೊನಾ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆ ಇದ್ದರೂ ಹೊಸ ರೂಪಾಂತರಿ ಹಿನ್ನೆಲೆ ಯಲ್ಲಿ ಸೋಂಕು ಪ್ರತಿಬಂಧಕ ಕ್ರಮ ಅನುಸರಿ ಸುವುದು ಒಳ್ಳೆಯದು ಎಂದು ಲವ ಅಗರ್ವಾಲ್‌ ಹೇಳಿದ್ದಾರೆ. ಬೂಸ್ಟರ್‌ ಡೋಸ್‌ ಬಗ್ಗೆ ವಿಜ್ಞಾನಿಗಳು ಸಲಹೆ ನೀಡಲಿದ್ದಾರೆ ಎಂದು ನೀತಿ ಆಯೋಗದ ಡಾ| ವಿ.ಕೆ. ಪೌಲ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಬಾಂಗ್ಲಾದಲ್ಲಿ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್‌

Advertisement

Udayavani is now on Telegram. Click here to join our channel and stay updated with the latest news.

Next