Advertisement

ಒಂದು ವರ್ಷದ ಯಾವುದೇ ಹೊಸ ಯೋಜಬೆಯಿಲ್ಲ? ನಿಮ್ಮ ಅಭಿಪ್ರಾಯವೇನು ?

03:54 PM Jun 07, 2020 | keerthan |

ಮಣಿಪಾಲ: ಮುಂದಿನ ಒಂದು ವರ್ಷದವರೆಗೂ ಯಾವುದೇ ಹೊಸ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ

Advertisement

ಚಿ. ಮ. ವಿನೋದ್ ಕುಮಾರ್:  ಕೈಯಲ್ಲಿ ಕಾಸಿಲ್ಲದಿರುವಾಗ ಅವರು ತಾನೇ ಸುಮ್ಮನೆ ಹೊಸ ಯೋಜನೆಗಳನ್ನು ಘೋಷಣೆ ಮಾಡಿದರೆ ಏನು ಪ್ರಯೋಜನವಾಗುತ್ತದೆ.ವಿತ್ತ ಸಚಿವಾಲಯದ ಹೇಳಿಕೆ ಸರಿಯಾಗಿದೆ.

ಸತೀಶ್ ರಾವ್:  ಇಂತಹ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ನಾವು ದೇಶದ ಪರಿಸ್ಥಿತಿಯಲ್ಲಿ ಕೈ ಜೋಡಿಸಬೇಕು. ಒಳ್ಳೆಯ ದಿನಗಳು ಬಂದೆ ಬರುವುದು. ಮೋದಿ ಅಂಥ ಪ್ರಧಾನಿ ಇರುವಾಗ .ಜೈ ಭಾರತ್, ಜೈ ಮೋದಿಜಿ

ಸಣ್ಣಮಾರಪ್ಪ. ಚಂಗಾವರ:  ಇರುವ ಯೋಜನೆಗಳನ್ನೆ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಹೊಸ ಯೋಜನೆಗಳ ಅವಶ್ಯಕತೆ ಇಲ್ಲ. ನಿಷ್ಠೆಯಿಂದ ಸರ್ಕಾರ, ಅಧಿಕಾರಿಗಳು ಕೆಲಸ ಮಾಡಿದರೆ ದೇಶದ ಹಾಗೂ ಜನರಲ್ಲಿ ಅಭಿವೃದ್ಧಿ ಕಾಣಬಹುದು

ಇಬ್ರಾಹಿಂ ಸಯೀದ್ ವಿಕೆ: 20 ಲಕ್ಷ ಕೋಟಿ ಏನೋ ಈಗಾಗಲೇ ಬಿಡುಗಡೆ ಯಾಗಿದೆ ಅಲ್ಲವೇ ಸಧ್ಯಕ್ಕೆ ಅದು ಸಾಕು. ಅದು ಮುಗಿವುವಾಗ ಹೇಳ್ತೀನಿ

Advertisement

ದಯಾನಂದ ಕೊಯಿಲಾ: ಈ ವರೆಗೆ ಜಾರಿಯಲ್ಲಿರುವ ಯೋಜನೆಗಳು ಯಾವುದೆಲ್ಲ ಎಂದು ದಯವಿಟ್ಟು ತಿಳಿಸಿ ಅದನ್ನಾದರೂ ಪಡ್ಕೊಳ್ಳಲು ಪ್ರಯತ್ನಿಸಬಹುದಲ್ಲಾ?

ದಾವೂದ್ ಕೂರ್ಗ್: ಮಾಡಿದ ಘೋಷಣೆಗಳೆಲ್ಲಾ ಘೋಷಣೆಯಾಗೆ ಉಳಿದಿರುವಾಗ ಇನ್ನೂ ಸ್ವಲ್ಪ ಘೋಷಣೆ ಮಾಡಬಹುದಿತ್ತು. ಘೋಷಣೆ ಮಾಡಲು ಖರ್ಚು ಇಲ್ವಲ್ಲಾ.

ರಾಧಿಕ ಮಲ್ಯ: ಆರ್ಥಿಕ ಹಿಂಜರತದಿಂದಾಗಿ ಹಾಗೂ ಕೋವಿಡ್-19ದಿಂದ ಸರ್ಕಾರ ಈ ನಿರ್ಣಯ ತಗೆದುಕೊಳ್ಳಬೇಕಾಗಿದೆ . ಹೊಸ ಯೋಜನೆ ಯು ಬದಲು ಇರುವ ಹಣವನ್ನು ಸರಿಯಾಗಿ ಉಪಯೋಗಿಸಿ ದೇಶವನ್ನು ಸಂಕಷ್ಟ ದಿಂದ ಪಾರು ಮಾಡಬೇಕಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next