ಆಧಾರ್ ಕಾರ್ಡ್ ನ ಮೊಬೈಲ್ ಸಂಖ್ಯೆ ಬದಲಾವಣೆಗೆ ಅನುಕೂಲವಾಗುವಂತೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಹಾಗೂ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಐಪಿಪಿಬಿ ಮುಖ್ಯ ಕಾರ್ಯ ನಿರ್ವಾಹಕ ಜೆ.ವೆಂಕಟರಾಮು, ಯುಐಡಿಎಐನ ಮೊಬೈಲ್ ನಂಬರ್ ಅಪ್ಡೇಟ್ ಸೇವೆ ಬ್ಯಾಂಕಿಂಗ್ ಸೇವೆಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ಅಂಚೆ ಕಚೇರಿಗಳು, ಪೋಸ್ಟ್ ಮೆನ್ ಮತ್ತು ಜಿಡಿಎಸ್ ಮೂಲಕ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪೆಗಾಸಸ್ ನನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ,ಇದು ನಿಜವಾದ ದೇಶದ್ರೋಹ : ರಾಹುಲ್ ಗುಡುಗು
ಪ್ರಸ್ತುತ ಮೊಬೈಲ್ ನವೀಕರಣ ಸೇವೆಯನ್ನು ಮಾತ್ರ ಐಪಿಪಿಬಿ ಒದಗಿಸುತ್ತಿದ್ದು, ಶೀಘ್ರದಲ್ಲೇ ಇದು ತನ್ನ ನೆಟ್‌ವರ್ಕ್ ಮೂಲಕ ಎನ್ ರೋಲ್ ಮೆಂಟ್ ಸೇವೆಯನ್ನು ಕೂಡ ಆರಂಭಿಸಲಿದೆ ಎಂದು ಹೇಳಲಾಗಿದೆ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಬದಲಾಯಿಸಿದ್ದರೆ, ಅದನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡಿ. ಯಾವುದೇ ಪರಿಶೀಲನೆ ಪ್ರಕ್ರಿಯೆಗೆ ನೀವು ಆಧಾರ್ ಸಂಖ್ಯೆಯನ್ನು ಬಳಸಿದರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಗೆ ಬರುತ್ತದೆ. ಹಳೆಯ ಮೊಬೈಲ್ ಸಂಖ್ಯೆಯನ್ನೇ ನೀವು ಬಳಸುತ್ತಿದ್ದರೇ, ಒಟಿಪಿ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೂಡ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : ಆಸ್ಕರ್ ಫೆರ್ನಾಂಡೀಸ್ ಶೀಘ್ರ ಚೇತರಿಕೆಗೆ ಹಾರೈಸಿ ಕಾಪು ತಾಲೂಕಿನಲ್ಲಿ ಪ್ರಾರ್ಥನೆ