Advertisement
ನಗರದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲೆಯ ಶಕ್ತಿ ಕೇಂದ್ರಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ ಸದಾ ಮಹಿಳೆಯರನ್ನು ಗೌರವಿಸುವ ಪಕ್ಷವಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ದೇಶದಲ್ಲಿ ರಕ್ಷಣೆ ಹೊಣೆಯನ್ನೇಧೀರ ಮಹಿಳೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡುವ ಮೂಲಕ ಮಹಿಳೆಗೆ ಆಕೆಯ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಮಹಿಳೆಯರ ಸ್ಥಾನಮಾನ ಹೇಗಿದೆ, ಅವರ ವರ್ತನೆ ಹೇಗಿದೆ ಎಂಬುದು ದೇಶದ ಜನರಿಗೆಲ್ಲ ಗೊತ್ತಿದೆ ಎಂದರು.
Related Articles
ನಗರದ ರೈಲ್ವೇ ನಿಲ್ದಾಣ ನವೀಕರಣ ಸೇರಿದಂತೆ ಹಲವು ಯೋಜನೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪರಿಶ್ರಮದಿಂದ ದುಡಿದಿದ್ದೇನೆ ಎಂದರು.
Advertisement
ಕನ್ನಡಿಗರಿಗೆ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಮೋದಿ ಸರ್ಕಾರ ಅವಕಾಶ ಕಲ್ಪಿಸುವ ಮೂಲಕ ಪ್ರಾದೇಶಿಕ ಭಾಷೆಗೆ ವಿಶೇಷ ಗೌರವ ನೀಡಿದೆ. ಸ್ವತ್ಛ ಭಾರತ ಗ್ರಾಮೀಣ ಯೋಜನೆ ಆರಂಭಿಸಿ ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯ ನಿರ್ಮಿಸುವ ಮೂಲಕ ದೇಶದಲ್ಲಿ ಸ್ವತ್ಛತೆಯ ಅಭಿಯಾನ ನಡೆಸಿ ಜನಮನ್ನಣೆ ಗಳಿಸಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿದರು. ಪಕ್ಷದ ಮುಖಂಡರಾದ ವಿಜುಗೌಡ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಕಲಾವತಿ, ಶಕುಂತಲಾ, ವಿಜಯಲಕ್ಷ್ಮೀ ಹಮೀದಖಾನೆ, ಅನುರಾಧಾ ಕಲಾಲ್, ಗೀತಾ ಕುಗನೂರ, ಭಾರತಿ ಭುಯ್ನಾರ, ರಜನಿ ಸಂಬಣ್ಣಿ, ಶಾಂತಾ ಉತ್ಲಾಸ್ಕರ್, ಗುರುದೇವಿ, ಶಾರದಾ, ಪಾರ್ವತಿ, ಸಾವಿತ್ರಿ, ವಾಣಿ, ಕವಿತಾ, ರೇಣುಕಾ ಬಿಜೆಪಿಯ ಹಲವಾರು ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು. ಸಂಕಲ್ಪ ಪಾಟೀಲ ಸ್ವಾಗತಿಸಿದರು. ಸುಮಂಗಲಾ ಕೋಟಿ ನೀರೂಪಿಸಿದರು.