Advertisement

ಚಕ್ರ ಬಡ್ಡಿ ಮನ್ನಾಗಾಗಿ ಅರ್ಜಿ ಹಾಕಬೇಕಾಗಿಲ್ಲ: ಕೇಂದ್ರ ವಿತ್ತ ಸಚಿವಾಲಯ

11:32 AM Nov 02, 2020 | Nagendra Trasi |

ನವದೆಹಲಿ: ಮಾರ್ಚ್‌ 1ರಿಂದ ಆಗಸ್ಟ್‌ 31 ನಡುವಿನ ಮೊರೊಟೋರಿಯಂ ಅವಧಿಯಲ್ಲಿನ ಚಕ್ರ ಬಡ್ಡಿ ಮನ್ನಾ ಸೌಲಭ್ಯಕ್ಕಾಗಿ ಯಾವ ಸಾಲದ ಗ್ರಾಹಕರೂ ಅರ್ಜಿ ಹಾಕ ಬೇಕಾಗಿಲ್ಲ. ಅರ್ಹ ಫ‌ಲಾನುಭವಿಗಳ ಖಾತೆಗೆ ಬ್ಯಾಂಕು ಗಳಿಂದ ಆಟೋ ಕ್ರೆಡಿಟ್‌ ಆಗಲಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.

Advertisement

ಈ ಸಂಬಂಧ ಹಣಕಾಸು ಸಚಿವಾಲಯ 20 ಪ್ರಶ್ನೋತ್ತರ ಗ ಳನ್ನು ಸಿದ್ಧಪಡಿಸಿ ವೆಬ್‌ ಸೈಟ್‌ ನಲ್ಲಿ ಹಾಕಿದೆ. ಈ ಪ್ರಕಾ ರ ವಾಗಿ, ಯಾವುದೇ ಗ್ರಾಹಕರು ತಮಗೆ ಮೊರೊಟೋರಿಯಂ ಅವಧಿಯ ಚಕ್ರ ಬಡ್ಡಿ ಮನ್ನಾದ ಸೌಲಭ್ಯ ನೀಡಿ ಎಂದು ಅರ್ಜಿ ಸಲ್ಲಿಸಬೇಕಾಗಿಲ್ಲ.

ಹಾಗೆಯೇ ಬ್ಯಾಂಕುಗಳಿಗೂ ಸುತ್ತ ಬೇಕಾಗಿಲ್ಲ. ಅರ್ಹ ಫ‌ಲಾನುಭವಿಗಳನ್ನು ಆರಿಸಲಿರುವ ಬ್ಯಾಂಕುಗಳು ಅವರ ಖಾತೆಗಳಿಗೆ ಜಮಾ ಮಾಡಲಿವೆ ಎಂದು ಹೇಳಿದೆ. ಜತೆಗೆ, ಮೊರೊಟೋರಿಯಂ ಸೌಲಭ್ಯ ಪಡೆಯದೇ ಇರುವವರಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ಹೇಳಿದೆ.

ಕ್ರಿಸಿಲ್‌ನ ವರದಿ ಪ್ರಕಾರ ಶೇ.75 ಸಾಲಗಾರರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇದರಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಿದೆ

ಸಿಬಿಐ ತನಿಖೆಗೆ ತಡೆಯಾಜ್ಞೆ
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದ ಹೈಕೋರ್ಟ್‌ ಆದೇಶಕ್ಕೆ ಗುರುವಾರ ಸುಪ್ರೀಂಕೋರ್ಟ್‌
ತಡೆಯಾಜ್ಞೆ ನೀಡಿದೆ.

Advertisement

ಅವರು ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ನೇಮಕ ಪ್ರಕರಣವೊಂದರಲ್ಲಿ ಭ್ರಷ್ಟಾಚಾರವೆಸಗಿದ್ದರು ಎಂದು ಪತ್ರಕರ್ತರೊಬ್ಬರು ಆರೋಪಿಸಿ, ಮೊಕದ್ದಮೆ ಹೂಡಿದ್ದರು. ಮುಖ್ಯಮಂತ್ರಿ ಪರವಾಗಿ ವಾದಿಸಿದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ರಾವತ್‌ ಅವರ ವಾದ ಆಲಿಸದೆ ಹೈಕೋರ್ಟ್‌ ಆದೇಶ ಮಾಡಿದ್ದು ಸರಿಯಲ್ಲ ಎಂದು ಅರಿಕೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next