Advertisement

ಏಕದಿನದಲ್ಲಿ ಸೂಪರ್‌ ಓವರ್‌ ಅಗತ್ಯವಿಲ್ಲ : ರಾಸ್‌ ಟೇಲರ್‌

11:17 PM Jun 26, 2020 | Sriram |

ವೆಲ್ಲಿಂಗ್ಟನ್‌: ಕಳೆದ ವರ್ಷದ ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ನಡುವಿನ ಏಕದಿನ ವಿಶ್ವಕಪ್‌ ಫೈನಲ್‌ ವೇಳೆ ಸಂಭವಿಸಿದ ಎಡವಟ್ಟು ಕ್ರಿಕೆಟಿಗೇ ಒಂದು ಕಪ್ಪುಚುಕ್ಕಿಯಾಗಿ ಅಂಟಿ ಕೊಂಡಿದೆ.

Advertisement

50 ಓವರ್‌ಗಳಲ್ಲಿ ಎರಡೂ ತಂಡ ಗಳು 241 ರನ್‌ ಗಳಿಸಿದಾಗ ಚಾಂಪಿ ಯನ್‌ ತಂಡವನ್ನು ನಿರ್ಧರಿಸಲು ಸೂಪರ್‌ ಓವರ್‌ ಎಸೆಯಲಾಯಿತು. ಗ್ರಹಚಾರಕ್ಕೆ ಅದು ಕೂಡ ಟೈ ಆಯಿತು. ಬಳಿಕ ಬೌಂಡರಿ ಲೆಕ್ಕಾಚಾರದಲ್ಲಿ ಮುಂದಿದ್ದ ಇಂಗ್ಲೆಂಡನ್ನು ಚಾಂಪಿ ಯನ್‌ ಎಂದು ಘೋಷಿಸಿದ್ದು, ಐಸಿಸಿ ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳ ಗಾದದ್ದು ಈಗ ಇತಿಹಾಸ.

ಆದರೆ ಈ ಸೂಪರ್‌ ಓವರ್‌ ಪ್ರಸಂಗ ಅಷ್ಟು ಸುಲಭದಲ್ಲಿ ಮಾಸಿ ಹೋಗುವಂಥದ್ದಲ್ಲ. ಅದರಲ್ಲೂ ಕಿವೀಸ್‌ ಕ್ರಿಕೆಟಿಗರಂತೂ ಜನ್ಮದಲ್ಲಿ ಮರೆಯಲಿಕ್ಕಿಲ್ಲ. ಈ ಕುರಿತು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಶುಕ್ರವಾರ ಪುನಃ ಪ್ರತಿಕ್ರಿಯಿಸಿದ್ದಾರೆ. ಏಕದಿನದಲ್ಲಿ ಸೂಪರ್‌ ಓವರ್‌ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಜಂಟಿ ವಿಜೇತರು…
“ಏಕದಿನ ಕ್ರಿಕೆಟ್‌ ಪಂದ್ಯವನ್ನು ಅದೆಷ್ಟೋ ಸಮಯದಿಂದ ಆಡುತ್ತ ಬರಲಾಗುತ್ತಿದೆ. ಟೈ ಫ‌ಲಿತಾಂಶನ್ನು ಟೈ ಎಂದೇ ಪರಿಗಣಿಸಬೇಕು. ಇಂಥ ಸಂದರ್ಭದಲ್ಲಿ ಜಂಟಿ ವಿಜೇತರೆಂದು ಘೋಷಿಸುವುದು ಸೂಕ್ತ. ಇಲ್ಲಿ 100 ಓವರ್‌ಗಳಷ್ಟು ಆಟ ಸಾಗುತ್ತದೆ. ಅಂದರೆ ಪಂದ್ಯದ ಅವಧಿ ಸುದೀರ್ಘ‌ ವಾಗಿರುತ್ತದೆ. ಹೀಗಾಗಿ ಸ್ಕೋರ್‌ ಸಮನಾದಾಗ ಪಂದ್ಯವನ್ನು ಟೈ ಎಂದು ತೀರ್ಮಾನಿಸುವುದರಲ್ಲಿ ತಪ್ಪೇನಿಲ್ಲ. ಕಿರು ಅವಧಿಯ ಟಿ20 ಪಂದ್ಯ, ಫ‌ುಟ್‌ಬಾಲ್‌ ಪಂದ್ಯಗಳಲ್ಲಿ ಟೈಬ್ರೇಕರ್‌ ಅಳವಡಿಕೆ ತಪ್ಪಲ್ಲ’ ಎಂಬುದಾಗಿ ರಾಸ್‌ ಟೇಲರ್‌ ಅಭಿಪ್ರಾಯಪಟ್ಟರು.

“ವಿಶ್ವಕಪ್‌ ಪಂದ್ಯ ಟೈಗೊಂಡ ಬಳಿಕ ನಾನು ಅಂಪಾಯರ್‌ ಬಳಿ ಹೋಗಿ, ಇದೊಂದು ಗುಡ್‌ ಗೇಮ್‌ ಎಂದೇ ಹೇಳಿದ್ದು. ಆಗ ಸೂಪರ್‌ ಓವರ್‌ ಕಲ್ಪನೆಯೂ ನನಗಿರಲಿಲ್ಲ. ಪಂದ್ಯ ಟೈ ಆಗಿದೆ, ಜಂಟಿ ವಿಜೇತರೆಂದು ತೀರ್ಮಾನಿಸಲಾಗುತ್ತಿದೆ ಎಂದೇ ಭಾವಿಸಿದ್ದೆ…’ ಎಂಬುದಾಗಿ ರಾಸ್‌ ಟೇಲರ್‌ ಹೇಳಿದರು.

Advertisement

“ಐಸಿಸಿ ಈ ನಿಯಮದಲ್ಲಿ ಬದ ಲಾವಣೆ ತರುತ್ತದೋ ಇಲ್ಲವೋ ತಿಳಿಯದು. ಆದರೆ ನಮ್ಮ ನಿರ್ದಿಷ್ಟ ಸಮಯದೊಳಗೆ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುವುದು ಮುಖ್ಯ. ಆಗ ಸೂಪರ್‌ ಓವರ್‌ ಪ್ರಸ್ತಾವವೇ ಇರದು…’ ಎಂದರು ರಾಸ್‌ ಟೇಲರ್‌.

 

Advertisement

Udayavani is now on Telegram. Click here to join our channel and stay updated with the latest news.

Next