Advertisement
ಮನವಿ ಸಲ್ಲಿಸಿ: ಪರಿಷ್ಕೃತ ಎಸ್‌ಒಪಿ ಜಾರಿಗೊಳಿಸುವ ಮೊದಲು (ಮೇ 18) ರಾಜ್ಯಗಳು ಅಗತ್ಯ ಬಿದ್ದರೆ ಹೆಚ್ಚುವರಿ ವಿಶೇಷ ರೈಲುಗಳ ಸಂಚಾರಕ್ಕೆ ಮನವಿ ಸಲ್ಲಿಸ ಬಹುದು ಎಂದು ಸೂಚಿಸಲಾಗಿತ್ತು. ಆಯಾ ಜಿಲ್ಲಾಡಳಿತಗಳ ಮೂಲಕವೇ ಹೆಚ್ಚುವರಿ ರೈಲಿನ ಬಗ್ಗೆ ಕೋರಿಕೆ ಸಲ್ಲಿಸಲು ಅವಕಾಶ ಇದೆ ಎಂದು ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಪತ್ರ ಬರೆದಿದ್ದರು.
ಇದೇ ವೇಳೆ ಹಾಲಿ ಇರುವ ರೈಲುಗಳಲ್ಲದೆ ಜೂನ್‌ನಿಂದ 200 ವಿಶೇಷ ರೈಲುಗಳನ್ನು ಪ್ರತಿ ದಿನ ಓಡಿಸಲಾಗುತ್ತದೆ. ಇದು ಹವಾನಿಯಂತ್ರಿತವಲ್ಲದ ರೈಲುಗಳಾಗಿದ್ದು, ಶೀಘ್ರವೇ ಅವುಗಳಿಗಾಗಿ ಆನ್‌ಲೈನ್‌ನಲ್ಲಿ ಬುಕಿಂಗ್ ಶುರು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ವಿವಿಧೆಡೆ 15 ಕಾರ್ಮಿಕರ ಸಾವು
ಮಂಗಳವಾರ ದೇಶದ ಮೂರು ಕಡೆ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 15 ಕಾರ್ಮಿಕರು ಮೃತ ಪಟ್ಟು, ಹಲವರು ಗಾಯಗೊಂಡಿದ್ದಾರೆ. ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತಿದ್ದ ಟ್ರಕ್ ಮತ್ತು ಬಸ್ಸೊಂದರ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿ, 9 ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ಇವರು 6 ದಿನಗಳ ಹಿಂದೆ ಕೋಲ್ಕತಾದಿಂದ ಬಿಹಾರಕ್ಕೆ ಸೈಕಲ್ ಮೂಲಕ ಪ್ರಯಾಣ ಆರಂಭಿಸಿದ್ದರು.
Related Articles
Advertisement
ಹೊಸ ಶಿಷ್ಟಾಚಾರಗಳೇನು?ರಾಜ್ಯ ಹಾಗೂ ರೈಲ್ವೇ ಇಲಾಖೆ ಪರಸ್ಪರ ಸಮನ್ವಯ ಸಾಧಿಸಿ ಹೆಚ್ಚುವರಿ ರೈಲುಗಳನ್ನು ನಿಯೋಜಿಸಬೇಕು.
ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಸ್ಯಾನಿಟೈಸೇಷನ್ ಅಗತ್ಯಗಳು ಮತ್ತು ವಿಶ್ರಾಂತಿ ಸ್ಥಳಗಳ ವ್ಯವಸ್ಥೆ ಮಾಡಬೇಕು.
ರೈಲುಗಳು ಮತ್ತು ಬಸ್ಸುಗಳು ಹೊರಡುವ ಸಮಯದ ಬಗ್ಗೆ ಸ್ಪಷ್ಟತೆ ಇರಬೇಕು.
ಪ್ರಯಾಣಿಕರು ಹೋಗಲಿರುವ ಸ್ಥಳ ಮತ್ತು ವಿಳಾಸದ ವಿವರ ಸಂಗ್ರಹಿಸಬೇಕು.
ಕಾಲ್ನಡಿಗೆಯಲ್ಲಿ ಹೊರಟ ವಲಸಿಗರು ಹತ್ತಿರದ ವಿಶ್ರಾಂತಿ ಸ್ಥಳ, ರೈಲು ಅಥವಾ ಬಸ್ ನಿಲ್ದಾಣಕ್ಕೆ ಹೋಗುವಂತೆ ಜಿಲ್ಲಾಡಳಿತ ಮಾರ್ಗದರ್ಶನ ನೀಡಬೇಕು.
ವಲಸಿಗರ ಬಸ್ಸುಗಳು ಗಡಿ ಮೂಲಕ ರಾಜ್ಯ ಪ್ರವೇಶಿಸಲು ಅಲ್ಲಿನ ಆಡಳಿತ ಅನುಮತಿ ನೀಡಬೇಕು.
ಕಾರ್ಮಿಕರು ಉಳಿದುಕೊಳ್ಳುವ ಸ್ಥಳಗಳಲ್ಲಿ ಅಗತ್ಯ ಆಹಾರ ಮತ್ತು ಆರೋಗ್ಯ ಕಾಳಜಿ ವ್ಯವಸ್ಥೆ ಮಾಡಬೇಕು. 1565 ಮೇ 1ರಿಂದ ಓಡಿರುವ ಶ್ರಮಿಕ ರೈಲುಗಳು
20 ಲಕ್ಷ- ತವರಿಗೆ ಮರಳಿರುವ ವಲಸೆ ಕಾರ್ಮಿಕರು