Advertisement

Muslim League ; ರಾಹುಲ್ ನಾಮಪತ್ರ ಸಲ್ಲಿಕೆ ರ್‍ಯಾಲಿಯಲ್ಲಿ ಐಯುಎಂಎಲ್ ಧ್ವಜಗಳೇ ಇರಲಿಲ್ಲ!

05:55 PM Apr 04, 2024 | Team Udayavani |

ಹೊಸದಿಲ್ಲಿ: 2019ರ ಲೋಕಸಭೆ ಚುನಾವಣೆ ವೇಳೆ ಧ್ವಜ ವಿವಾದ ನಡೆದ ಕಾರಣಕ್ಕಾಗಿ ಈ ಬಾರಿ ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ್‍ಯಾಲಿಯಲ್ಲಿ ಮುಸ್ಲಿಂ ಲೀಗ್ ಧ್ವಜಗಳೇ ಇರಲಿಲ್ಲ. ವಿಶೇಷವೆಂದರೆ ಧ್ವಜಗಳು ಇರದಿರುವುದಕ್ಕೂ ಎಡ, ಬಲದಿಂದ ಟೀಕೆ ವ್ಯಕ್ತವಾಗಿದೆ.

Advertisement

ಬುಧವಾರ ನಡೆದ ರಾಹುಲ್ ಗಾಂಧಿಯವರ ರ್‍ಯಾಲಿಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಧ್ವಜಗಳು ಇಲದಿರುವುದು ಎದ್ದು ಕಂಡು ಕಂಡಿತು. ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಪ್ರಮುಖ ಪಾಲುದಾರ ಪಕ್ಷಗಳಲ್ಲಿ ಐಯುಎಂಎಲ್ ಕೂಡ ಒಂದು. 2019 ರಲ್ಲಿ ನಡೆದ ಭಾರೀ ವಿವಾದದ ನಂತರ ಪಕ್ಷಕ್ಕೆ ಮುಸ್ಲಿಂ ಬಾಹುಳ್ಯವಿರುವ ವಯನಾಡಿನಲ್ಲಿ ಅಲ್ಲದಿದ್ದರೂ ದೇಶದ ಇತರ ಭಾಗಗಳಲ್ಲಿ ಹೊಡೆತ ಬಿದ್ದ ಕಾರಣ ಕಾಂಗ್ರೆಸ್ ಮತ್ತು ಐಯುಎಂಎಲ್ ಕಾರ್ಯಕರ್ತರಿಗೆ ಧ್ವಜಗಳನ್ನು ರ್‍ಯಾಲಿಗೆ ತರದಂತೆ ಸೂಚನೆ ನೀಡಿರುವ ಸಾಧ್ಯತೆಯಿದೆ.

ವಿವಾದವನ್ನು ತಪ್ಪಿಸಲು ಕಾಂಗ್ರೆಸ್ ಈ ಬಾರಿ ಸುರಕ್ಷಿತ ಮಾರ್ಗವನ್ನು ಆರಿಸಿಕೊಂಡಿದ್ದರೂ, ಧ್ವಜಗಳು ಇಲ್ಲದೆ ಇದ್ದರೂ ಟೀಕೆಗಳನ್ನು ಎದುರಿಸಿದೆ. ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ಬಿಜೆಪಿಯ ನಾಯಕಿ ಸ್ಮೃತಿ ಇರಾನಿ ಹೇಳಿದ್ದಾರೆ. ” ಮುಸ್ಲಿಂ ಲೀಗ್ ಧ್ವಜಗಳನ್ನು ಮರೆಮಾಡಿರುವುದು ರಾಹುಲ್ ಗಾಂಧಿಗೆ ಮುಸ್ಲಿಂ ಲೀಗ್‌ನಿಂದ ಬೆಂಬಲ ಪಡೆಯಲು ನಾಚಿಕೆಯಾಗುತ್ತಿದೆ ಅಥವಾ ಉತ್ತರ ಭಾರತಕ್ಕೆ ಭೇಟಿ ನೀಡಿ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಮುಸ್ಲಿಂ ಲೀಗ್ ಜತೆಗಿನ ಒಡನಾಟವನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.” ಎಂದು ವಯನಾಡಿನಲ್ಲಿ ಸ್ಮೃತಿ ಇರಾನಿ ಟೀಕಾ ಪ್ರಹಾರ ನಡೆಸಿದ್ದಾರೆ.

ವಯನಾಡಿನ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ನಾಮ ಪತ್ರ ಸಲ್ಲಿಕೆಗಾಗಿ ವಯನಾಡ್‌ಗೆ ಬಂದಿದ್ದ ಕೇಂದ್ರ ಸಚಿವೆ ಇರಾನಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಎಸ್‌ಡಿಪಿಐ, ನಿಷೇಧಿತ PFI ಬೆಂಬಲವನ್ನು ಪಡೆಯುತ್ತಿರುವುದನ್ನು ನೋಡಿ ಆಘಾತವಾಯಿತು. ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಡಿದ ಸಂವಿಧಾನದ ಪ್ರಮಾಣವನ್ನೂ ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಧೈರ್ಯವಿಲ್ಲ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಟೀಕಾ ಪ್ರಹಾರ ನಡೆಸಿದ್ದು, ಪಕ್ಷದ ಧ್ವಜವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಧೈರ್ಯವಿಲ್ಲ. ಕಾಂಗ್ರೆಸ್ ಕೋಮುವಾದಿ ಶಕ್ತಿಗಳಿಗೆ ಹೆದರುವ ಮಟ್ಟಕ್ಕೆ ಕುಸಿದಿದೆ. ಕಾಂಗ್ರೆಸ್‌ ಪಕ್ಷ ಐಯುಎಂಎಲ್‌ನ ಮತಗಳನ್ನು ಬಯಸುತ್ತದೆ ಆದರೆ ಅವರ ಧ್ವಜವನ್ನು ಅಂಗೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

Advertisement

ಮುಸ್ಲಿಂ ಲೀಗ್ (IUML) ನ ಧ್ವಜಗಳನ್ನು ಪಾಕಿಸ್ಥಾನಿ ಧ್ವಜಗಳೆಂದು ತಿಳಿದು 2019 ರಲ್ಲಿ ದೊಡ್ಡ ವಿವಾದ ಭುಗಿಲೆದ್ದಿತ್ತು. ಇದು ವಯನಾಡ್ ಅಥವಾ ಕರಾಚಿ/ಲಾಹೋರ್?” ಎಂದು ಪ್ರಶ್ನಿಸಿದ್ದರು. ಐಯುಎಂಎಲ್ ಧ್ವಜಗಳ ಬಗ್ಗೆ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಕಾಂಗ್ರೆಸ್ ರ್‍ಯಾಲಿಯಲ್ಲಿ IUML ಧ್ವಜವನ್ನು ಪಾಕಿಸ್ಥಾನದ ಧ್ವಜ ಎಂದು ತಪ್ಪಾಗಿ ಗ್ರಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next