Advertisement

ಬೀಜಿಂಗ್‌ ಬಾರ್‌: 10ಕ್ಕಿಂತ ಹೆಚ್ಚು ವಿದೇಶೀಯರಿಗೆ ಪ್ರವೇಶ ಇಲ್ಲ

03:27 PM Mar 15, 2018 | Team Udayavani |

ಬೀಜಿಂಗ್‌ : ಬೀಜಿಂಗ್‌ ಪೊಲೀಸರು ನಗರ ಒಂದು ಭಾಗದಲ್ಲಿನ ಬಾರ್‌ ಮತ್ತು ರೆಸ್ಟೋರಾಂಟ್‌ಗಳಿಗೆ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದಾರೆ. ಹತ್ತಕ್ಕಿತ ಹೆಚ್ಚು ವಿದೇಶಿಗರನ್ನು ಬಾರಿಗೆ ಒಳ ಬಿಡಕೂಡದು; ಶನಿವಾರ ಮತ್ತು ಭಾನುವಾರಗಳಲ್ಲಿ ಹತ್ತಕ್ಕಿಂತ ಹಚ್ಚು ವಿದೇಶೀಯರು ಇರುವುದು ಕಂಡು ಬಂದಲ್ಲಿ ಅಂತಹ ಬಾರ್‌ ಮತ್ತು ರೆಸ್ಟೋರಾಂಟ್‌ಗಳನ್ನು ಒಡನೆಯೇ ಮಚ್ಚಲಾಗುವುದು ಎಂದು ಬಾರ್‌, ರೆಸ್ಟೋರಾಂಟ್‌ ಮಾಲಕರಿಗೆ ಪೊಲೀಸರು ಕಟ್ಟಪ್ಪಣೆ ಮಾಡಿದ್ದಾರೆ.

Advertisement

ಚೀನ ಸರಕಾರದ ಎರಡು ಅಧಿವೇಶನಗಳ ವಾರ್ಷಿಕ ಸಭೆ ನಡೆಯಲಿರುವ ಕಾರಣ ಬಾರ್‌ ಮತ್ತು ರೆಸ್ಟೋರಾಂಟ್‌ಗಳ ಮೇಲೆ ಈ ನಿರ್ಬಂಧವನ್ನು ಹೇರಲಾಗಿದೆ ಎಂದು ತಿಳಿದು ಬಂದಿದೆ. 

ಚೀನದ ಕಮ್ಯುನಿಸ್ಟ್‌ ಪಾರ್ಟಿಯ ವಾರ್ಷಿಕ ಎರಡು ಅಧಿವೇಶನಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ದೇಶಾದ್ಯಂತದ ಪಕ್ಷದ ಸದಸ್ಯರು ಬೃಹತ್‌ ಸಂಖ್ಯೆಯಲ್ಲಿ ಬೀಜಿಂಗ್‌ಗೆ ಬರುತ್ತಾರೆ. ಸರಕಾರದ ಮುಂದಿನ ವರ್ಷದ ಗುರಿಗಳು ಮತ್ತು ಆದ್ಯತೆಗಳಿಗೆ ಸಂಬಂಧಿಸಿದಂತೆ ಸೂಚನೆಗಳು ಮತ್ತು ಆದೇಶಗಳನ್ನು ಪಡೆಯಲು ಅವರು ಬೀಜಿಂಗ್‌ ಸಮಾವೇಶಕ್ಕೆ ಬರುವುದು ಕಡ್ಡಾಯವಾಗಿದೆ. 

ಚೀನ ಕಮ್ಯುನಿಸ್ಟ್‌ ಪಕ್ಷದ ಈ ಬಾರಿಯ ವಾರ್ಷಿಕ ಅಧಿವೇಶನದ 2 ಸಮಾವೇಶಗಳು ಅತ್ಯಂತ ಮಹತ್ವದ್ದಾಗಿವೆ. ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಅಜೀವ ಅವಧಿ(ಅನಿರ್ದಿಷ್ಟಾವಧಿ) ಗೆ ದೇಶದ ಅಧ್ಯಕ್ಷರಾಗಿರುವುದೇ ಇದಕ್ಕೆ ಕಾರಣವಾಗಿದೆ. 

ಈ ಹಿನ್ನೆಲೆಯಲ್ಲಿ ಕೆಲವು ಸಮೂಹದವರಲ್ಲಿ ಅತೃಪ್ತಿ, ಅಸಮಾಧಾನ ವ್ಯಕ್ತವಾಗುವ ನಿರೀಕ್ಷೆ ಇದೆ. ಹಲವು ದಶಕಗಳ ಹಿಂದೆ ಚೀನದ ತಿಯನಾನಮನ್‌ ಚೌಕದಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಬೃಹತ್‌ ಪ್ರಜಾಸತ್ತೆ ಪರ ಆಂದೋಲನವನ್ನು ನಿರ್ದಯವಾಗಿ ನಿಷ್ಕರುಣೆಯಿಂದ ಹತ್ತಿಕ್ಕಲಾಗಿತ್ತು.

Advertisement

ಇಂತಹ ಸ್ಥಿತಿ ಪುನಃ ಬಾರದಿರಲೆಂಬ ಕಾರಣ ಈ ಬಾರಿ ಬೀಜಿಂಗ್‌ ಬಿಗಿ ಭದ್ರತೆಗೆ ಒಳಪಡಲಿದೆ. ವಿದೇಶೀಯರ ಕರಾಮತ್ತು ನಡೆಯುವ ಸಾಧ್ಯತೆಯನ್ನು ಹತ್ತಿಕ್ಕಲು ಬಾರ್‌ ಮತ್ತು ರಸ್ಟೋರೆಂಟ್‌ಗಳ ಮೇಲೆ ವಿದೇಶೀಯರ ಪ್ರವೇಶಕ್ಕೆ ನಿರ್ಬಂಧಲಾಗಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next