Advertisement

ಪಾಲಕ್ಕಾಡ್‌ ಜಿಲ್ಲೆಯ ಮತೂರ್‌ ಗ್ರಾ.ಪಂ.ನ ವಿಶೇಷ ನಿರ್ಣಯ : ಸರ್‌, ಮ್ಯಾಡಮ್‌ಗೆ ನಿಷೇಧ

11:42 PM Sep 02, 2021 | Team Udayavani |

ಪಾಲಕ್ಕಾಡ್‌: ದೇಶದಿಂದ ಬ್ರಿಟಿಷರು ತೊರೆದಿದ್ದರೂ, ಅಲ್ಲಲ್ಲಿ ವಸಾಹತು ಶಾಹಿ ವ್ಯವಸ್ಥೆಗಳ ಪ್ರಾತಿನಿಧಿಕ ಅಂಶಗಳು ನಮ್ಮಲ್ಲಿವೆ. ಅದನ್ನು ಮರೆತೇ ಬಿಡುವ ನಿಟ್ಟಿನಲ್ಲಿ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಮತೂರ್‌ ಗ್ರಾಮ ಪಂಚಾಯತ್‌ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು.

Advertisement

ಅದರ ಅನ್ವಯ ಗ್ರಾ.ಪಂ. ಸಿಬಂದಿ, ಅಧಿಕಾರಿಗಳಿಗೆ “ಸರ್‌’, “ಮ್ಯಾಡಮ್‌’ ಎಂದು ಕರೆಯುವಂತೆಯೇ ಇಲ್ಲ. ಮತ್ತೂಂದು ಗಮನಾರ್ಹ ವಿಚಾರ ವೆಂದರೆ ಇಂಥ ನಿರ್ಣಯ ಕೈಗೊಂಡ ದೇಶದ ಮೊದಲ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಕೂಡ ಮತೂರ್‌ ಪಾತ್ರವಾಗಿದೆ.

ಸಿಪಿಎಂನ ಏಳು, ಬಿಜೆಪಿಯ ಒಬ್ಬ ಸದಸ್ಯರು ಇರುವ ಗ್ರಾಮ ಪಂಚಾಯತ್‌ನಲ್ಲಿ ವಸಾಹತು ಶಾಹಿ ಪದ್ಧತಿ ಕೈಬಿಡುವ ಬಗ್ಗೆ ಸಭೆ ನಡೆಸಿ, ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಉಪಾಧ್ಯಕ್ಷ ಪಿ.ಆರ್‌.ಪ್ರಸಾದ್‌ “ಗ್ರಾಮದ ಜನರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುವುದೂ ಸೇರಿದೆ. ಸರ್‌ ಅಥವಾ ಮ್ಯಾಡಮ್‌ ಎಂದು ಕರೆಯು ವದರಿಂದ ಅಂತರ ಹೆಚ್ಚುತ್ತದೆ. ಅದನ್ನು ನಿವಾರಿಸುವುದು ನಿರ್ಣಯದ ಹಿಂದಿನ ಆಶಯ’ ಎಂದು ಹೇಳಿದ್ದಾರೆ.

ನಿರ್ಣಯ ಅಂಗೀಕಾರವಾದ ಬಳಿಕ ಪಂಚಾಯತ್‌ ಕಚೇರಿ ಮುಂಭಾಗದಲ್ಲಿ ಈ ಬಗ್ಗೆ ನೋಟಿಸ್‌ ಹಾಕಲಾಗಿದೆ. ಜತೆಗೆ ಅದರಲ್ಲಿ ಪಂಚಾಯತ್‌ನಲ್ಲಿ ಇರುವ ಅಧಿಕಾರಿ ಮತ್ತು ಅವರ ಹುದ್ದೆಯ ವಿವರನ್ನೂ ಪ್ರಕಟಿಸಲಾಗಿದೆ. ಹೊಸ ನಿಯಮ ಪ್ರಕಾರ ಜನರು ಅಧಿಕಾರಿಗಳನ್ನು “ಅಣ್ಣಾ’, ಮಹಿಳಾ ಅಧಿಕಾರಿಗಳನ್ನು “ಅಕ್ಕಾ’ ಎಂದು ಕರೆಯಲೂ ಅವಕಾಶ ಇದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next