Advertisement

Maternity: ಮಹಿಳಾ ಯೋಧರಿಗೂ ಇನ್ನು ಹೆರಿಗೆ ರಜೆ

01:00 AM Nov 06, 2023 | Team Udayavani |

ಹೊಸದಿಲ್ಲಿ: ದೇಶದ ಮೂರು ಸಶಸ್ತ್ರ ಸೇನೆಯಲ್ಲಿರುವ ಮಹಿಳಾ ಯೋಧರಿಗೆ ಇನ್ನು ಮುಂದೆ ಹೆರಿಗೆ ರಜೆ, ಶಿಶು ಆರೈಕೆ ರಜೆ ಮತ್ತು ಮಗು ದತ್ತು ರಜೆ ಸೌಲಭ್ಯ ಸಿಗಲಿದೆ. ಇದುವರೆಗೆ ಈ ಸೌಲಭ್ಯ ಕೇವಲ ಭೂ, ವಾಯು ಮತ್ತು ನೌಕಾ ಸೇನೆಯಲ್ಲಿನ ಹಿರಿಯ ಅಧಿಕಾರಿಗಳಿಗೆ ಮಾತ್ರ ಇತ್ತು. ಉಳಿದ ಮಹಿಳಾ ಯೋಧರಿಗೂ ನೀಡುವ ಪ್ರಸ್ತಾವನೆಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಒಪ್ಪಿಗೆ ನೀಡಿದ್ದಾರೆ.

Advertisement

ಈ ನಿಯಮಾವಳಿಗಳ ಬದಲಾವಣೆಯಿಂದಾಗಿ ಇನ್ನು ಮುಂದೆ ಸೇನೆಯಲ್ಲಿರುವ ಎಲ್ಲ ಮಹಿಳೆಯರೂ ಒಂದೇ ರೀತಿಯ ಸೌಲಭ್ಯ ಪಡೆಯಲಿದ್ದಾರೆ. ಅದು ಅಧಿಕಾರಿ ಶ್ರೇಣಿಯಿಂದ ಇತರ ಎಲ್ಲ ಶ್ರೇಣಿಗೆ ಸಮಾನ ಸೌಲಭ್ಯ ಸಿಗಲಿದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.  ಸದ್ಯ ಮಹಿಳಾ ಅಧಿಕಾರಿಗಳಿಗೆ 180 ದಿನ ವೇತನ ಸಹಿತ ರಜೆ ಸಿಗುತ್ತಿದೆ. ಇದು ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಶಿಶು ಆರೈಕೆಗಾಗಿ ಒಟ್ಟಾರೆ ಸೇವಾ ಅವಧಿಯಲ್ಲಿ 360 ದಿನಗಳ ಕಾಲ ರಜೆ ನೀಡಲಾಗುತ್ತದೆ. ಅಂದರೆ ಆ ಮಗುವಿಗೆ 18 ವರ್ಷ ತುಂಬುವ ಮುನ್ನ ಬಳಕೆ ಮಾಡಿಕೊಳ್ಳಬೇಕು. ಉಳಿದಂತೆ  ಒಂದು ವರ್ಷದೊಳಗಿನ ಮಗುವೊಂದನ್ನು ದತ್ತು ಪಡೆದ ಪ್ರಕ್ರಿಯೆ ಮುಗಿದ ಅನಂತರ 180 ದಿನಗಳ ಕಾಲ ರಜೆ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next