Advertisement
ಕಂಪೆನಿಯನ್ನು ಖರೀದಿಸಲು ಜಾಲಾನ್ ಕಲಾಕ್ ಕನ್ಸಾರ್ಶಿಯಂ ಬಿಡ್ ಮಾಡಿದ್ದ 200 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲೂ ಆದೇಶ ನೀಡಿದೆ. ಅದರ ಪೈಕಿ 150 ಕೋಟಿ ರೂ. ಮೊತ್ತವನ್ನು ಎಸ್ಬಿಐ ನೇತೃತ್ವದ ಬ್ಯಾಂಕ್ಗಳು ಬಳಕೆ ಮಾಡಿಕೊಳ್ಳಬಹುದು ಎಂದಿದೆ. ವಿಶೇಷ ಸಾಂವಿಧಾನಿಕ ಅಧಿಕಾರ ಬಳಸಿಕೊಂಡು ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಉದ್ಯಮಿ ನರೇಶ್ ಗೋಯಲ್ರಿಂದ 1992ರಲ್ಲಿ ಶುರುವಾಗಿದ್ದ ಸಂಸ್ಥೆ 2019ರ ವರೆಗೆ ಕಾರ್ಯಾಚ ರಣೆ ನಡೆಸುತ್ತಿತ್ತು. ಬ್ಯಾಂಕ್ಗಳಿಗೆ 8,000 ಕೋಟಿ ರೂ.ಗೂ ಅಧಿಕ ಸಾಲ ಬಾಕಿ ಉಳಿಸಿಕೊಂಡಿದೆ. ಕಂಪೆನಿ ಸುಮಾರು 1,500 ಕೋ. ರೂ. ಮೌಲ್ಯದ 10 ವಿಮಾನ ಹೊಂದಿದೆ. ಮುಂಬಯಿಯಲ್ಲಿ 245 ಕೋಟಿ ರೂ. ಮೌಲ್ಯದ ಕಾಂಪ್ಲೆಕ್ಸ್, ವಾಹನಗಳು, ವಿಮಾನಗಳ ಬಿಡಿಭಾಗ, ಜೆಟ್ ಏರ್ವೆàಸ್ ಬ್ರಾಂಡ್ ನೇಮ್ ಮಾರಾಟಕ್ಕೆ ಇರಿಸಲಾಗಿದೆ.