Advertisement
ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಲ್ಲಿ ಮಂಜೂರಾಗಿರುವ ಸುಮಾರು 13 ಸಾವಿರಕ್ಕೂ ಅಧಿಕ ಮನೆಗಳಿಗೆ ನಿವೇಶನದ ಸಮಸ್ಯೆ ಎದುರಾಗಿ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಆಟಕ್ಕೂಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಸಂದರ್ಭದಲ್ಲಿ ಈಗಾಗಲೇ ವಸತಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ಸಮರ್ಪಕವಾಗಿ ಸಹಾಯಧನ ವನ್ನು ಬಿಡುಗಡೆ ಮಾಡದಿರುವುದು ಈಗ ಫಲಾನು ಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಣ ಬಿಡುಗಡೆ ವಿಳಂಬದಿಂದ ಜಿಲ್ಲೆಯಲ್ಲಿ ವಸತಿ ಯೋಜನೆಗಳ ಪ್ರಗತಿ ಕಾರ್ಯ ಪಾತಳಕ್ಕೆ ಕುಸಿಯುವಂತಾಗಿದೆ.
Related Articles
Advertisement
ಆದರೆ 3, 4 ತಿಂಗಳಿಂದ ವಸತಿ ನಿಗಮ ಫಲಾನುಭವಿಗಳ ಖಾತೆಗೆ ಸಹಾಯ ಧನವನ್ನೆ ಮಂಜೂರು ಮಾಡದೇ ರಾಜೀವ್‌ಗಾಂಧಿ ವಸತಿ ನಿಗಮ ಇಲ್ಲಸಲ್ಲದ ಸಾಬೂಬು ಹೇಳುತ್ತಿರುವುದರಿಂದ ಸಾಲ ಮಾಡಿ ಮನೆ ನಿರ್ಮಿಸುತ್ತಿರುವ ಫಲಾನುಭವಿಗಳಿಗೆ ಈ ಖಾಸಗಿ ಸಾಲಗಾರರ ಕಾಟ ಶುರುವಾಗಿದೆ. ಪ್ರತಿ ನಿತ್ಯ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮೆ ಆಗಿದೆಯೆಂದು ತಿಳಿಯಲು ಬ್ಯಾಂಕ್ ಗಳಿಗೆ ಸುತ್ತಾಡುವಂತಾಗಿದೆ.
ತಾಲೂಕುವಾರು ವಸತಿ ಪ್ರಗತಿ ಹೀಗಿದೆ: ಬಾಗೇಪಲ್ಲಿ ತಾಲೂಕಿಗೆ ಮಂಜೂರಾಗಿರುವ ವಸತಿ ಯೋಜನೆ ಯಲ್ಲಿ 2,524 ಪಾಯ ಹಂತದಲ್ಲಿದ್ದರೆ 667 ಮಾತ್ರ ಗೋಡೆ ಹಂತ ತಲುಪಿದೆ. ಇನ್ನೂ 438 ಮನೆಗಳಿಗೆ ಮಾತ್ರ ಮೇಲ್ಛಾವಣಿ ಹಾಕಿದ್ದು, ಬರೋಬ್ಬರೊ 3,764 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 1,632 ಮನೆಗಳು ಪಾಯ ಹಂತದಲ್ಲಿದೆ. 354 ಮನೆಗಳಿಗೆ ಮಾತ್ರ ಗೋಡೆ ಪೂರ್ಣಗೊಂಡಿದೆ. 410 ಮನೆಗಳಿಗೆ ಮೇಲ್ಛಾವಣಿ ಹಾಕಿದ್ದು, 1,772 ಮನೆಗಳ ನಿರ್ಮಾಣ ಕಾರ್ಯ ಆಗಬೇಕಿದೆ.
ಚಿಂತಾಮಣಿ ತಾಲೂಕಿಗೆ ಮಂಜೂರಾಗಿರುವ ಒಟ್ಟಾರೆ ವಸತಿ ಸೌಲಭ್ಯದಲ್ಲಿ 2,941 ಮನೆಗಳಿಗೆ ಪಾಯ ಹಾಕಿದ್ದು, ಅವುಗಳ ಪೈಕಿ 654 ಮನೆಗಳಿಗೆ ಗೋಡೆಗಳು ಪೂರ್ಣಗೊಂಡಿದೆ. 547 ಮನೆಗಳಿಗೆ ಮೇಲ್ಛಾವಣಿ ಹಾಕಿದ್ದು, 3,065 ಮನೆಗಳ ನಿರ್ಮಾಣ ಕಾರ್ಯ ನೆನಗುದಿಗೆ ಬಿದ್ದಿದೆ. ಗೌರಿಬಿದನೂರು ತಾಲೂಕಿಗೆ ಮಂಜೂರಾಗಿರುವ ಒಟ್ಟು ಮನೆಗಳ ಪೈಕಿ 2,564 ಮನೆಗಳಿಗೆ ಮಾತ್ರ ಪಾಯ ಹಾಕಿದ್ದು, ಅದರಲ್ಲಿ 837 ಮನೆಗಳು ಗೋಡೆ ಹಂತ ತಲುಪಿವೆ.
581 ಮನೆಗಳಿಗೆ ಮೇಲ್ಛಾವಣಿ ಹಾಕಿದ್ದು, ಇನ್ನೂ 1,757 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಳ್ಳಬೇಕಿದೆ.ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 453 ಮನೆಗಳಿಗೆ ಪಾಯ ಹಾಕಿದ್ದು 185 ಮನೆಗಳು ಗೋಡೆ ಹಂತಕ್ಕೆ ಬಂದಿದ್ದು, 106 ಮನೆಗಳು ಮೇಲ್ಛಾವಣಿ ಹಾಕಲಾಗಿದೆ. 587 ಕ್ಕೂ ಹೆಚ್ಚು ಮನೆಗಳು ಕಾರ್ಯಾರಂಭಕ್ಕೆ ಎದುರು ನೋಡುತ್ತಿವೆ. ಶಿಡ್ಲಘಟ್ಟ ತಾಲೂಕಿನಲ್ಲಿ 1583 ಮನೆಗಳು ಪಾಯ ಹಂತಕ್ಕೆ ಬಂದಿದ್ದು, 527 ಮನೆಗಳು ಗೋಡೆ ಮುಗಿಸಿ 472 ಮೇಲ್ಛಾವಣಿ ಮುಗಿಸಿವೆ. 1,890ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಕಾರ್ಯದಿಂದ ದೂರ ಉಳಿದಿವೆ. ಕಾಗತಿ ನಾಗರಾಜಪ್ಪ