Advertisement
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ನಾಯಕರ ಪರಸ್ಪರ ಆರೋಪ- ಪ್ರತ್ಯಾರೋಪ, ರಿಮೋಟ್ ಕಂಟ್ರೋಲ್ ಆಡಳಿತ, ಎಚ್.ಡಿ.ರೇವಣ್ಣ ಹಸ್ತಕ್ಷೇಪದಿಂದ ಬೇಸತ್ತ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರಕಾರ ಪತನಗೊಂಡಿತು. ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಕಾಂಗ್ರೆಸ್‌ನವರು ತಮ್ಮನ್ನು ಗುಲಾಮರಂತೆ ನಡೆಸಿಕೊಂಡಿದ್ದು, ಅದರಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಿದ್ದರು.
Related Articles
Advertisement
ಮೂರು ಪಟ್ಟು ಶಾಸಕರು ಬರುತ್ತಿದ್ದರು!ಕೆಟ್ಟ ಸರಕಾರವಿದ್ದು, ರಾಜೀನಾಮೆ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಅವರಿಗೆ ಹೇಳಿದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಪಕ್ಷೇತರ ಸಹಿತ 26 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, 177 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತ ಪಡೆದಿದೆ. ಹೀಗಿರುವಾಗ ಅವರು ಅಂಥ ಸಲಹೆ ನೀಡುವುದು ಸಹಜ. ಬಿಜೆಪಿ ಏನಾದರೂ ಆಮಿಷ ಒಡ್ಡಿದ್ದರೆ ಇನ್ನೂ ಮೂರು ಪಟ್ಟು ಶಾಸಕರು ಖಾಲಿ ಮಾಡಿಕೊಂಡು ಬರುತ್ತಿದ್ದರು ಎಂದು ಸಚಿವ ಸಿ.ಟಿ.ರವಿ ಹೇಳಿದರು. ಮಹಾರಾಷ್ಟ್ರದಲ್ಲಿ ಶಿವಸೇನೆಯು ಎನ್‌ಸಿಪಿ- ಕಾಂಗ್ರೆಸ್ ಕೂಟದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದ ಬಿಜೆಪಿಗೆ ಒಳ್ಳೆಯದೆ ಆಗಲಿದೆ. ಬಿಜೆಪಿಯದ್ದು ಮೃದು ಹಿಂದುತ್ವವಾದರೆ, ಶಿವಸೇನೆಯದ್ದು ಕಠೊರ ಹಿಂದುತ್ವ. ಇದೀಗ ಶಿವಸೇನೆಯು ಜಾತ್ಯತೀತವಾಗಿದೆ. ಈ ಕೂಟ ಎಷ್ಟು ದಿನ ಎಂದು ನೋಡೋಣ. ಮುಂದಿನ ದಿನಗಳಲ್ಲಿ ಪಾಲುದಾರಿಕೆ ಪಕ್ಷವಿಲ್ಲದೆ ಬಿಜೆಪಿಗೆ ಸಾರ್ವಭೌಮತ್ವ ಸಿಗಲಿದೆ. ಕರ್ನಾಟಕದಲ್ಲಿ ಏನಾಯಿತೋ, ಅದೇ ಆಗಲಿದೆ ಎಂದು ಸಿ.ಟಿ.ರವಿ ತಿಳಿಸಿದರು.