ರಿಯಾದ್: ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಾಲ ಹಾಗೂ ತೈಲ ಸರಬರಾಜನ್ನು ನಿಲ್ಲಿಸುವುದಾಗಿ ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉಭಯ ದೇಶಗಳ ನಡುವಿನ ದಶಕಗಳ ದೀರ್ಘಾವಧಿ ಗೆಳೆತನ ಕೊನೆಗೂ ಅಂತ್ಯಗೊಂಡತಾಗಿದೆ ಎಂದು ಮಿಡ್ಲ್ ಈಸ್ಟ್ ಮೋನಿಟರ್ ವರದಿ ಮಾಡಿದೆ.
ಏನಿದು ಜಟಾಪಟಿ:
ಕಾಶ್ಮೀರ ವಿಚಾರದಲ್ಲಿ ಇಸ್ಲಾಂ ದೇಶಗಳ ಬೆಂಬಲ ಪಡೆಯಲು ಒಐಸಿ (ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೊ ಆಪರೇಶನ್) ಸದಸ್ಯ ರಾಷ್ಟ್ರಗಳ ಸಭೆ ಕರೆದು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ಕೆಲವು ತಿಂಗಳುಗಳಿಂದ ಸೌದಿ ಅರೇಬಿಯಾಕ್ಕೆ ಒತ್ತಾಯಿಸುತ್ತಿತ್ತು. ಆದರೆ ಪಾಕ್ ಒತ್ತಡಕ್ಕೆ ಸೌದಿ ಅರೇಬಿಯಾ ಮಣಿದಿರಲಿಲ್ಲವಾಗಿತ್ತು.
ಏತನ್ಮಧ್ಯೆ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ “ಕಾಶ್ಮೀರದ ವಿಚಾರದಲ್ಲಿ ಸೌದಿ ಸರ್ಕಾರ ನಮಗೆ ಬೆಂಬಲ ನೀಡದಿದ್ದರೆ ಪಾಕಿಸ್ತಾನಕ್ಕೇನೂ ನಷ್ಟವಿಲ್ಲ, ಪಾಕಿಸ್ತಾನವೇ ಒಐಸಿ ರಾಷ್ಟ್ರಗಳ ಬೃಹತ್ ಸಮ್ಮೇಳನವನ್ನು ಆಯೋಜಿಸಿ, ಅವುಗಳ ಬೆಂಬಲ ಕೇಳಲಿದೆ ಎಂದಿದ್ದರು.”
ಕಾಶ್ಮೀರ ವಿಚಾರದಲ್ಲಿ ಸೌದಿ ಅರೇಬಿಯಾವನ್ನು ಪಾಕಿಸ್ತಾನ ಟೀಕಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು. ಸೌದಿಗೆ ನೀಡಲಿರುವ ಸಾಲ ಮತ್ತು ತೈಲ ಸರಬರಾಜನ್ನು ನಿಲ್ಲಿಸುವುದಾಗಿ ತಿಳಿಸಿದೆ.
ಕಾಶ್ಮೀರ ವಿಚಾರದಲ್ಲಿ ಒಐಸಿ ರಾಷ್ಟ್ರಗಳ ಸಮ್ಮೇಳನ ನಡೆಸುವುದಾಗಿ ಪಾಕಿಸ್ತಾನ ಹಠಕ್ಕೆ ಬಿದ್ದ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾಕ್ಕೆ ಕೊಡಬೇಕಾಗಿದ್ದ 1 ಬಿಲಿಯನ್ ಡಾಲರ್ ಹಣವನ್ನು ವಾಪಸ್ ಕೊಡುವಂತೆ ಪಾಕಿಸ್ತಾನಕ್ಕೆ ಸೂಚಿಸಿರುವುದಾಗಿ ವರದಿ ವಿವರಿಸಿದೆ. 2018ರ ನವೆಂಬರ್ ತಿಂಗಳಿನಲ್ಲಿ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದ್ದರು. ಇದರಲ್ಲಿ ತೈಲ ಸರಬರಾಜಿನ ಸಾಲ 3 ಬಿಲಿಯನ್ ಡಾಲರ್ ಮೊತ್ತ ಕೂಡಾ ಸೇರಿತ್ತು.
ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ನೀಡಿದ್ದ ವೇಳೆಯಲ್ಲಿ ಪಾಕಿಸ್ತಾನದ ಜತೆ ಈ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ. ಭಾರತದ ಜತೆ ಗೆಳೆತನ ಮುಂದುವರಿಸಲು ಇಚ್ಛಿಸಿರುವ ಸೌದಿ ಅರೇಬಿಯಾ, ಕಾಶ್ಮೀರದ ವಿಚಾರದಲ್ಲಿ ಸೌದಿ ಯಾವುದೇ ಆಸಕ್ತಿ ತೋರಿಸದ ನಿಟ್ಟಿನಲ್ಲಿ ಪಾಕಿಸ್ತಾನ ವಿಶ್ವಸಮುದಾಯದ ಎದುರು ಏಕಾಂಗಿಯಾಗಿದೆ ಎಂದು ವರದಿ ತಿಳಿಸಿದೆ.