Advertisement

ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ: ಸಚಿವ ಸುನಿಲ್‌ ಕುಮಾರ್‌

11:51 PM Apr 19, 2022 | Shreeram Nayak |

ಬಾಗಲಕೋಟೆ: ರಾಜ್ಯದಲ್ಲಿ ವಿದ್ಯುತ್‌ ಅಭಾವ ಇಲ್ಲ. ಹೆಸ್ಕಾಂ ವ್ಯಾಪ್ತಿಯ ಹಿರಿಯ ಅಧಿಕಾರಿಗಳ ಸಭೆ ಕೂಡ ನಡೆಸಲಾಗಿದೆ. ರಾಜ್ಯದಲ್ಲಿ ಗ್ರಾಹಕಸ್ನೇಹಿ ಇಲಾಖೆ ರೂಪಿಸಲಾಗುತ್ತಿದೆ. ಲೋಡ್‌ಶೆಡ್ಡಿಂಗ್‌ ಕುರಿತು ಕೆಲವೆಡೆ ಸುದ್ದಿಯಾಗಿದ್ದು, ಕಲ್ಲಿದ್ದಲು ಕೊರತೆ ಇದೆ ಎಂದು ಉಲ್ಲೇಖಿಸಲಾಗಿದೆ. ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್‌ ಮಾಡುವ ಕುರಿತ ಚಿಂತನೆ ಅಥವಾ ಅನಿವಾರ್ಯತೆ ಸರಕಾರದ ಮುಂದಿಲ್ಲ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ನವನಗರದಲ್ಲಿ 110 ಕೆವಿ ವಿದ್ಯುತ್‌ ವಿತರಣ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಕೂಡ ಬಹಳಷ್ಟು ಕಡಿಮೆಯಾಗಿದೆ.

ಹೀಗಾಗಿ ರಾಯಚೂರಿನ 2-3 ಯೂನಿಟ್‌ನಲ್ಲಿ ಉತ್ಪಾದನೆ ಕಡಿಮೆ ಮಾಡಲಾಗಿದೆ. ಕಲ್ಲಿದ್ದಲು ಕೊರತೆಯಿಂದ ಉತ್ಪಾದನೆ ನಿಲ್ಲಿಸಿಲ್ಲ. ಈ ಕುರಿತು ರಾಜ್ಯದ ಜನರಿಗೆ ಯಾವುದೇ ಸಂದೇಹ ಬೇಡ ಎಂದರು.

ರಾಜ್ಯದ ಮಠ-ಮಾನ್ಯಗಳಿಗೆ ನೀಡಿದ ಅನುದಾನದಲ್ಲೂ ಶೇ.30 ಕಮಿಷನ್‌ ಕೊಡಬೇಕು ಎಂಬ ಆರೋಪ ಮಾಡಿದ ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಕೂಡಲೇ ಕಮಿಷನ್‌ ಕೊಟ್ಟಿರುವ ಬಗ್ಗೆ ದಾಖಲೆ ಬಿಡುಗಡೆಗೊಳಿಸಬೇಕು. ಇಂತಹ ಕಮಿಷನ್‌ ವ್ಯವಹಾರವನ್ನು ಶೂನ್ಯ ಮಟ್ಟಕ್ಕೆ ತರಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಶತಪ್ರಯತ್ನ ಮಾಡುತ್ತಿದೆ ಎಂದರು.

ಇದನ್ನೂ ಓದಿ:ಪ್ರತಿಭೆಗೆ ವಯಸ್ಸಿಲ್ಲ : ಎಳೆಯ ಹುಡುಗನ ಮೈಕ್, ಲೈಟಿಂಗ್ಸ್ ಕರಾಮತ್ತು

Advertisement

ಕಾಂಗ್ರೆಸ್‌ ತನ್ನ ಕಾಲಾವಧಿ ಸರಕಾರದ ಎಲ್ಲ ಹಂತದಲ್ಲಿ ಇಡೀ ವ್ಯವಸ್ಥೆಯನ್ನು ಹಾಳು ಮಾಡಿದ ಕೀರ್ತಿಗೆ ಭಾಜನವಾಗಿದೆ. ಮೋದಿ ಸರಕಾರ ಅಂತಹ ಭ್ರಷ್ಟಾಚಾರಕ್ಕೆ ಎಂದೂ ಅವಕಾಶ ಕೊಡಲ್ಲ. ಸಿಎಂ ಬೊಮ್ಮಾಯಿ ದೂರ ದೃಷ್ಟಿಯ ಬಜೆಟ್‌ ನೀಡಿದ್ದಾರೆ. ಆ ಮೂಲಕ ನವ ಕರ್ನಾಟಕ ನಿರ್ಮಾಣ ಮಾಡುವ ದೊಡ್ಡ ಆಶಯ ಅವರದ್ದಾಗಿದೆ. ಯಾರು ಕಮಿಷನ್‌ ಆರೋಪಮಾಡಿದ್ದಾರೋ ಅವರು ದಾಖಲೆ ನೀಡಿ
ದರೆ ತತ್‌ಕ್ಷಣ ಕ್ರಮ ಕೈಗೊಳ್ಳುವುದಾಗಿ ಸ್ವತಃ ಸಿಎಂ ಹೇಳಿದ್ದಾರೆ ಎಂದರು.

ನಮಗೆ ಧರ್ಮ ಮತ್ತು ಸಾಧು-ಸಂತರ ಬಗ್ಗೆ ಅಪಾರವಾದ ಗೌರವವಿದೆ. ದಿಂಗಾಲೇಶ್ವರ ಶ್ರೀಗಳು, ಬಹಿರಂಗವಾಗಿ ಕಮಿಷನ್‌ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಬಹಿರಂಗವಾಗಿಯೇ ದಾಖಲೆ ಕೊಡಲಿ. ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ದಾಖಲೆ ತೋರಿಸಲಿ.
-ವಿ. ಸುನಿಲ್‌ ಕುಮಾರ್‌ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next