Advertisement

ನ್ಯಾಯಬೆಲೆ ಅಂಗಡಿಗಳಲ್ಲೀಗ ಅನ್ಯಾಯದ್ದೇ ಸದ್ದು

03:32 PM Apr 13, 2020 | mahesh |

ಚಿಕ್ಕಬಳ್ಳಾಪುರ: ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆದ ಉಚಿತ ಹಾಲು ವಿತರಣೆ, ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ಅನ್ಯಾಯದ್ದೇ ಸದ್ದು. ಪಡಿತರ ವಿತರಣೆಗೆ ಕೆಲವು ಕಡೆ ಪಾಲನೆಯಾಗದ ಸಾಮಾಜಿಕ ಅಂತರ ಭರವಸೆಯಾಗಿಯೇ ಉಳಿದ 10 ವೆಂಟಿಲೇಟರ್‌ ಪೂರೈಕೆ.. ಸಮಾಧಾನ ತಂದ ಕೋವಿಡ್-19 ಸೋಂಕಿತರ ಚೇತರಿಕೆ.

Advertisement

ಹೌದು, ಕೋವಿಡ್-19 ಸೋಂಕು ತಡೆಯುವ ಉದ್ದೇಶದಿಂದ ಸರ್ಕಾರ ಕಳೆದ ಮಾ.22ರಿಂದ ಲಾಕ್‌ಡೌನ್‌ ಘೋಷಣೆ ಮಾಡಿದೆ. ಆದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ಏಪ್ರೀಲ್‌ ಅಂತ್ಯದವರೆಗೂ ಲಾಕ್‌ಡೌನ್‌ ಮುಂದುವರಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಹಲವು ಕ್ರಮಗಳು ಸಮರ್ಪಕವಾಗಿ ಪಾಲನೆ ಆಗದಿರುವುದು ಚರ್ಚೆಗೆ ಗ್ರಾಸವಾಗಿದೆ.

10 ನ್ಯಾಯಬೆಲೆ ಅಂಗಡಿ ಅಮಾನತು:
ಜಿಲ್ಲೆಯಲ್ಲಿ ಪಡಿತರ ವಿತರಣೆ ಗೊಂದಲದ ಗೂಡಾಗಿದೆ. ಉಚಿತ ಅಕ್ಕಿಗೆ ಹಣ ವಸೂಲಿ, ಅಕ್ಕಿಯಲ್ಲಿ ಕಡಿತ, ತೂಕದಲ್ಲಿ ಮೋಸ ಹೀಗೆ ಹಲವು ಆರೋಪಗಳು ನಿತ್ಯ ಕೇಳಿ ಬರುತ್ತಿದೆ. ಇದುವರೆಗೂ 10 ನ್ಯಾಯಬೆಲೆ ಅಂಗಡಿಗಳನ್ನು ಅಕ್ರಮದ ಹಿನ್ನೆಲೆಯಲ್ಲಿ ಅಮಾನತುಗೊಳಿ ಸಿರುವುದೇ ಇದಕ್ಕೆ ಸಾಕ್ಷಿ. ಇದುವರೆಗೂ ಶೇ.76  ರಷ್ಟು ಪಡಿತರ ವಿತರಣೆ ಮುಗಿದಿದೆ. ಇನ್ನೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಚಿತ ಹಾಲು ವಿತರಣೆ ನಡೆಯುತ್ತಿದ್ದರೂ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.
ನಗರ ಪ್ರದೇಶದ ಸ್ಲಂಗಳಲ್ಲಿ ಮಾತ್ರ ವಿತರಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಹಳ್ಳಿಗಳಲ್ಲಿ ಹಾಲು ವಿತರಿಸಬೇಕೆಂಬ ಬೇಡಿಕೆಗೆ ಯಾರು ಸ್ಪಂದಿಸುತ್ತಿಲ್ಲ. ಸರ್ಕಾರ ಹೂವು, ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು ಎಪಿಎಂಸಿ ಮಾರುಕಟ್ಟೆಗಳನ್ನು ಸುವ್ಯ ವಸ್ಥಿತವಾಗಿ ನಡೆಸಲಾಗುತ್ತಿದೆ.

ಕೋವಿಡ್‌-19 ಆಸ್ಪತ್ರೆಯಲ್ಲಿ ಸದ್ಯಕ್ಕೆ ಎರಡು ವೆಂಟಿಲೇಟರ್‌ ಇದ್ದು 10ಕ್ಕೆ ಬೇಡಿಕೆ ಇದ್ದರೂ ಪೂರೈಕೆ ಆಗಿಲ್ಲ. 7 ಐಸಿಯು ಬೆಡ್‌ ಇದ್ದು ಇನ್ನೂ ಎರಡಕ್ಕೆ ಅವಕಾಶ ಇದೆ. ಜಿಲ್ಲೆಯಲ್ಲಿ 28 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ಚಿಕ್ಕಬಳ್ಳಾಪುರ ನಗರಕ್ಕೆ ನಿತ್ಯ 8 ಸಾವಿರ ಹಾಲಿನ ಪ್ಯಾಕೆಟ್‌ ಬೇಡಿಕೆ ಇದೆ. ಆದರೆ ಪೂರೈಕೆ ಆಗುತ್ತಿರುವುದು ಬರೀ 6 ಸಾವಿರ ಪ್ಯಾಕೆಟ್‌ ಮಾತ್ರ. ನಗರಸಭೆಗೆ ನೀಡಲಾಗುತ್ತಿರುವ ಉಚಿತ ಹಾಲನ್ನು ಕೊಳಚೆ ಪ್ರದೇಶಗಳಲ್ಲಿ ಸಮರ್ಪಕವಾಗಿ ವಿತರಿಸಲಾಗು ತ್ತಿದೆ. ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆ ಇಲ್ಲ.
ಡಿ.ಲೋಹಿತ್‌ ಕುಮಾರ್‌,  ನಗರಸಭೆ ಆಯುಕ್ತ, ಚಿಕ್ಕಬಳ್ಳಾಪುರ

Advertisement

ಏಪ್ರಿಲ್‌, ಮೇ ತಿಂಗಳ ಪಡಿತರ ವಿತರಿಸಲಾಗುತ್ತಿದೆ. ಶೇ.76 ರಷ್ಟು ಪಡಿತರ ಹಂಚಿಕೆ ಆಗಿದೆ. ಜಿಲ್ಲೆಗೆ ಗೋಧಿ ಪೂರೈಕೆ ತಡವಾಗಿದ್ದರಿಂದ ವಿತರಣೆಯಲ್ಲಿ ವಿಳಂಬವಾಗಿದೆ. ಗ್ರಾಹಕರಿಂದ ಹಣ ಪಡೆದ 10 ನ್ಯಾಯಬೆಲೆ ಅಂಗಡಿ ಅಮಾನತುಗೊಳಿಸಲಾಗಿದೆ.
● ಸೋಮಶೇಖರಪ್ಪ, ಆಹಾರ ಇಲಾಖೆ ಪ್ರಭಾರಿ ಉಪ ನಿರ್ದೇಶಕರು

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next