Advertisement
ಪಟ್ಟಣದಲ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಕಾರ್ಯಕ್ರಮ ನಿಗದಿಪಡಿಸುವಲ್ಲಿ ಸಹಕಾರಿಗಳು ಸರ್ವ ಸ್ವತಂತ್ರರು. ಸರ್ಕಾರದ ಯಾವುದೇ ನೆರವಿಲ್ಲದೆ ಸ್ವಂತ ಶಕ್ತಿಯ ಮೇಲೆ ಕೆಲಸ ಮಾಡುತ್ತಿರುವ ಸಹಕಾರಿ ಸಂಘಗಳು ಸ್ವತಂತ್ರವಾಗಿರುತ್ತವೆ. ಸರ್ಕಾರ ಮೀಸಲಾತಿ ವಿಷಯದಲ್ಲಿ ಕೆಲವೊಂದು ಮೀಸಲಾತಿ ನಿಯಮ ಹೇಳಿರುತ್ತದೆ. ಅವುಗಳನ್ನು ಸಹಕಾರಿ ಸಂಘಗಳು ಪಾಲಿಸುತ್ತವೆ. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲು ಶಿಷ್ಟಾಚಾರ ಪಾಲಿಸಲು ಹೇಳುವ ಅಧಿಕಾರ ಯಾರಿಗೂ ಇರುವುದಿಲ್ಲ ಎಂದರು.
ಅಧ್ಯಕ್ಷೆ ಮಡಿವಾಳರ ಶಕುಂತಲಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಎಸ್. ಎಂ.ಲಲಿತಾಬಾಯಿ ಸೋಮ್ಯಾನಾಯ್ಕ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಹೇಮಣ್ಣ, ಉಪಾಧ್ಯಕ್ಷೆ ಉಚ್ಚಂಗೆಮ್ಮ, ಟಿಎಪಿಸಿಎಂಎಸ್ ಸಂಸ್ಥಾಪಕ ಅಧ್ಯಕ್ಷ ಎಂ.ಶೇಖರಪ್ಪ, ನಿರ್ದೇಶಕರು ಇದ್ದರು.
Related Articles
ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ ಹಾಗೂ ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಬ್ಬರ ಮುನಿಸು ಟಿಎಪಿಸಿಎಂಎಸ್ ನೂತನ ಕಚೇರಿ ಕಟ್ಟಡ ಕಾರ್ಯಕ್ರಮದಲ್ಲಿ ಮತ್ತೂಮ್ಮೆ ಸಾಬೀತಾಯಿತು. ಇಬ್ಬರು ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡದೆ, ವೇದಿಕೆ ಹಂಚಿಕೊಳ್ಳದೆ ಹೋದರು.
ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ ಕ್ಷೇತ್ರದಲ್ಲಿ ಕೈಗೊಂಡಿದ್ದ ಅನ್ಯ ಕಾರ್ಯದ ನಿಮಿತ್ಯ ಕಾರ್ಯಕ್ರಮದಿಂದ ತೆರಳಿದರೆ, ಮಾಜಿ ಶಾಸಕ ಎಂ.ಪಿ. ರವೀಂದ್ರ ಮಾತ್ರ ವೇದಿಕೆ ಹಂಚಿಕೊಂಡರು.
Advertisement