Advertisement
ಕಾರುಗಳ ಸೈಲೆನ್ಸರ್ ಮಟ್ಟಕ್ಕಿಂತ ಹೆಚ್ಚು ನೀರು ನುಗ್ಗಿದರೆ, ಯಾವುದೇ ಕಾರಣಕ್ಕೂ ಕಾರು ಸ್ಟಾರ್ಟ್ ಮಾಡಬಾರದು. ಒಂದು ವೇಳೆ ಕಾರು ಚಲಾವಣೆ ಮಾಡಿದ್ದೇ ಆದರೆ, ಕಾರಿನ ಸೈಲೆನ್ಸರ್ ಮೂಲಕ ನೀರು ಹೋಗಿ, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ನೀರು ತಗುಲಿ ಹಾಳಾಗುತ್ತವೆ. ಈ ವೇಳೆ ಕಾರುಗಳಿಗೆ ವಿಮಾ ಸೌಲಭ್ಯವಿದ್ದರೂ ಸಿಗುವುದಿಲ್ಲ. ಮಾಲಕ ಕೈಯಿಂದವೇ ಹಣ ವಿನಿಯೋಗಿಸಬೇಕಾಗುತ್ತದೆ.ರಸ್ತೆಯಲ್ಲಿ ಕಾರು ಚಲಾಯಿಸುವಾಗ ಕಾರಿನ ಬೇರೆ ಬೇರೆ ಭಾಗಗಳಿಗೆ ಹಾನಿಯಾದರೆ ಮ್ಯೂಸಿಕ್ ಸಿಸ್ಟಮ್, ಎ.ಸಿ.ಗೆ ಹಾನಿ ಉಂಟಾದರೆ ಮೋಟಾರ್ ವಿಮೆ ಪಾಲಿಸಿಯ ಪ್ರಕಾರ ವಿಮಾ ಹಣ ಸಿಗುತ್ತದೆ. ಕಾರು ಸ್ಟಾರ್ಟ್ ಮಾಡುವ ಸಮಯದಲ್ಲಿ ಕಾರು ನೀರಿನಲ್ಲಿ ಮುಳುಗಿದ್ದರೆ ವಿಮಾ ಪಾಲಿಸಿಯ ಪ್ರಕಾರ ಪರಿಹಾರ ಸಿಗುವುದಿಲ್ಲ. ಇತ್ತೀಚೆಗೆ ವಾಹನಗಳಿಗೆ ಇಂಜಿನ್ ಪ್ರೊಟೆಕ್ಷನ್ ಇನ್ಶೂರೆನ್ಸ್ ಎಂಬ ಹೊಸ ಪಾಲಿಸಿಯನ್ನು ಪರಿಚಯಿಸಲಾಗಿದೆ. ಆದರೆ ಈ ಬಗ್ಗೆ ಅನೇಕ ಮಂದಿಗೆ ಇದು ತಿಳಿದಿಲ್ಲ. ಈ ಪಾಲಿಸಿ ಮಾಡಿದ ಮಾಲಕರ ಕಾರಿನ ಬಿಡಿ ಭಾಗಕ್ಕೆ ಯಾವುದೇ ಸಮಯದಲ್ಲಿಯೂ ಹಾನಿಯಾದರೂ ವಿಮೆ ಪಡೆಯಬಹುದು.
– ಕಾರಿನ ಸೈಲೆನ್ಸರ್ ಮಟ್ಟದಲ್ಲಿ ನೀರಿದ್ದರೆ ವಾಹನ ಚಲಾಯಿಸದಿರಿ
– ಮಳೆಗಾಲದಲ್ಲಿ ನಿಧಾನವಾಗಿ ವಾಹನ ಚಲಾಯಿಸಿ
– ವಾಹನಗಳಿಗೂ ಮುಂದಿರುವ ವಾಹನಗಳಿಗೂ ಅಂತರವಿರಲಿ
– ನೀರಿನ ಮಟ್ಟ ಕಡಿಮೆಯಾದ ಬಳಿಕ ಬ್ಯಾಟರಿ ಸಂಪರ್ಕ ತಗೆದು ಬಟ್ಟೆಗಳಿಂದ ಒರೆಸಿ ಶೋ ರೂಂಗೆ ಕರೆ ಮಾಡಿ ಶೋರೂಂಗೆ ಕರೆ ಮಾಡಿ
ಒಂದು ವೇಳೆ ಕಾರಿನ ಸೈಲೆನ್ಸರ್ ಮಟ್ಟಕ್ಕಿಂತ ಹೆಚ್ಚು ನೀರು ನುಗ್ಗಿದರೆ ಕೂಡಲೇ ಹತ್ತಿರ ಕಾರು ಶೋ ರೂಂಗೆ ಕರೆ ಮಾಡಿ ತಿಳಿಸಬೇಕು. ಆ ಸಮಯದಲ್ಲಿ ಟೋ ಮೂಲಕ ಕಾರು ತೆಗೆದುಕೊಂಡು ಹೋಗಲಾಗುತ್ತದೆ. ಒಂದು ವೇಳೆ ಕಾರು ಚಲಾಯಿಸಿದ್ದೇ ಆದಲ್ಲಿ ಕಾರುಗಳಲ್ಲಿನ ಬಿಡಿ ಭಾಗಗಳು ಹಾಳಾಗಿ ವಿಮೆ ಸೌಲಭ್ಯದಿಂದ ವಂಚಿತರಾಗಬಹುದು.
Related Articles
ಕಾರುಗಳ ಸೈಲೆನ್ಸರ್ ಮಟ್ಟಕ್ಕಿಂತ ಹೆಚ್ಚು ನೀರು ಹೋದರೆ ಸ್ಟಾರ್ಟ್ ಮಾಡಿದರೆ ಕಾರಿನ ಬಿಡಿಭಾಗಗಳು ಹಾಳಾಗುತ್ತದೆ. ಈ ಸಮಯದಲ್ಲಿ ವಿಮಾ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಎಚ್ಚರಿಕೆ ವಹಿಸಿ.
– ಸಂತೋಷ್ ಶೆಟ್ಟಿ, ಇನ್ಶೂರೆನ್ಸ್ ಸಂಸ್ಥೆ ಅಧಿಕಾರಿ
Advertisement
ಮಾಹಿತಿ ಇರಲಿಲ್ಲಜೋರಾಗಿ ಸುರಿದ ಮಳೆಗೆ ನೀರು ಸೈಲೆನ್ಸರ್ ಎತ್ತರಕ್ಕೆ ಬಂದರೆ ವಾಹನ ಚಲಾಯಿಸಬಾರದು ಎಂಬ ಮಾಹಿತಿ ನನಗೆ ತಿಳಿದಿರಲಿಲ್ಲ. ಇದೇ ಕಾರಣಕ್ಕೆ ವಿಮಾ ಸೌಲಭ್ಯದಿಂದ ವಂಚಿತವಾಗಿದ್ದೇನೆ.
– ವಿನೋದ್, ವಾಹನ ಚಾಲಕ