Advertisement

ಬಿಜೆಪಿ ಆಡಳಿತವಿರುವಲ್ಲಿ ಆದಾಯ ಮತ್ತು ತೆರಿಗೆ ಇಲ್ಲ: ಸಂಜಯ್ ರಾವುತ್ ಕಿಡಿ

03:29 PM Feb 27, 2022 | Team Udayavani |

ನವದೆಹಲಿ: ಮಹಾರಾಷ್ಟ್ರದ ಸಚಿವರು ಮತ್ತು ರಾಜಕೀಯ ನಾಯಕರ ಮೇಲಿನ ಐಟಿ ದಾಳಿಗಳ ಕುರಿತು ಶಿವಸೇನೆ ನಾಯಕ ಸಂಜಯ್ ರಾವುತ್ ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ರಾವುತ್, “ನನ್ನ ಪ್ರಕಾರ ಮಹಾರಾಷ್ಟ್ರದಲ್ಲಿ ಮಾತ್ರ ಆದಾಯ ಮತ್ತು ತೆರಿಗೆ ಇದೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆದಾಯ ಮತ್ತು ತೆರಿಗೆ ಇಲ್ಲ. ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ಇಲ್ಲಿವೆ, ಆದ್ದರಿಂದ ಕೇಂದ್ರೀಯ ಸಂಸ್ಥೆಗಳು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ, ಭಾರತದ ಉಳಿದ ಕಡೆಗಳಲ್ಲಿ ಕೆಲಸವಿಲ್ಲ, ಅಲ್ಲಿ ಎಲ್ಲವೂ ಚೆನ್ನಾಗಿದೆ.” ಎಂದು ಕಿಡಿ ಕಾರಿದ್ದಾರೆ.

ಏಜೆನ್ಸಿಗಳು ಏನನ್ನೂ ಕಂಡುಹಿಡಿಯುವುದಿಲ್ಲ ಎಂದು ತಿಳಿದು ಕೇಂದ್ರವು ಹುಡುಕಾಟ ನಡೆಸುತ್ತದೆ. ನಾವು ಈ ಎಲ್ಲಾ ವಿಷಯಗಳನ್ನು ಗಮನಿಸುತ್ತಿದ್ದೇವೆ. ನಾವು ನೋಡುತ್ತಿದ್ದೇವೆ, ಸಾರ್ವಜನಿಕರೂ ನೋಡುತ್ತಿದ್ದಾರೆ. ಅವರು ಅದನ್ನು ಮಾಡಲಿ. ಅವರು ಏನು ಹುಡುಕುತ್ತಿದ್ದಾರೆಂದು ಅವರು ಕಂಡುಕೊಳ್ಳಲಿ. ಅವರು ಹುಡುಕುತ್ತಲೇ ಇರುತ್ತಾರೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಶುಕ್ರವಾರ ಮುಂಜಾನೆ, ಆದಾಯ ತೆರಿಗೆ ಇಲಾಖೆಯು ಶಿವಸೇನಾ ಕಾರ್ಪೊರೇಟರ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ್ ಜಾಧವ್ ಅವರ ನಿವಾಸದಲ್ಲಿ ಶೋಧ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next