ನವದೆಹಲಿ: ಎರಡು ತಾಸಿಗಿಂತ ಕಡಿಮೆ ಅವಧಿಯ ದೇಶೀಯ ವಿಮಾನ ಪ್ರಯಾಣದಲ್ಲಿ ಯಾವುದೇ ಊಟೋಪಾಹಾರದ ವ್ಯವಸ್ಥೆ ಕಲ್ಪಿಸಬಾರದು ಎಂದು ಕೇಂದ್ರ ಸರ್ಕಾರ, ಎಲ್ಲ ನಾಗರಿಕ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.
ಅಲ್ಲದೆ, 2ಕ್ಕಿಂತ ಹೆಚ್ಚು ತಾಸು ಅಥವಾ ಸುದೀರ್ಘ ಪ್ರಯಾಣ ಅವಧಿಯ ದೇಶೀಯ- ಅಂತಾರಾಷ್ಟ್ರೀಯ ವಿಮಾನಸೇವೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದೂ ತಿಳಿಸಿದೆ.
“ಭಾರತೀಯ ಮಹಾನಗರಗಳಲ್ಲಿ ಕೊರೊನಾ ಭಾರೀ ವೇಗದಲ್ಲಿ ಹಬ್ಬುತ್ತಿದೆ. ವಿಮಾನದಲ್ಲಿ ಊಟ, ಉಪಾಹಾರ ಸೇವನೆ ವೇಳೆ ಮಾಸ್ಕ್ ತೆಗೆಯುವುದು ಅನಿವಾರ್ಯವಾಗುತ್ತದೆ. ಇದರಿಂದ ವೈರಸ್ ಹಬ್ಬುವಿಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ದೇಶೀಯ ವಿಮಾನಗಳಲ್ಲಿ ಆಹಾರ ವ್ಯವಸ್ಥೆ ಪೂರೈಕೆ ಇರುವುದಿಲ್ಲ’ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ :ರಫೇಲ್ ಖರೀದಿ ವೇಳೆ ಮಧ್ಯವರ್ತಿಗೆ ಹಣ ನೀಡಿಕೆ ಆರೋಪ : ವಿಚಾರಣೆಗೆ ಸುಪ್ರೀಂ ಅಸ್ತು
ಕಳೆದ ತಿಂಗಳಷ್ಟೇ ದೇಶೀಯ ವಿಮಾನಗಳಲ್ಲಿ ಆಹಾರ ಸೇವೆಗೆ ಕೇಂದ್ರ ಸರ್ಕಾರ ಅನುಮತಿಸಿತ್ತು. ಪ್ರಸ್ತುತ ಪ್ರಯಾಣಿಕರ, ಏರ್ ಲೈನ್ಸ್ ಸಿಬ್ಬಂದಿಯ ಆರೋಗ್ಯ ಸುರಕ್ಷತೆಗಾಗಿ ಈ ನೀತಿ ಅಳವಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.