Advertisement

ಜಿಲ್ಲೆಯಲ್ಲಿ ಹಾಟ್‌ಸ್ಪಾಟ್‌ ಸ್ಥಳಗಳಿಲ್ಲ!

04:10 PM Apr 19, 2020 | Suhan S |

ಮಂಡ್ಯ: ಜಿಲ್ಲೆಯಲ್ಲಿ ಇದುವರೆಗೆ 12  19  ಸೋಂಕು ದೃಢಪಟ್ಟಿವೆ. ತಬ್ಲೀಘಿ  ಜಮಾತ್‌ ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ಮಳವಳ್ಳಿ ತಾಲೂಕೊಂದರಲ್ಲೇ 11 ಕೋವಿಡ್ 19   ಪ್ರಕರಣಗಳು ವರದಿಯಾಗಿದ್ದರೆ, ಮಂಡ್ಯದ 32 ವರ್ಷದ ವ್ಯಕ್ತಿ ನಂಜನಗೂಡಿನ ಜುಬಿಲಿಯೆಂಟ್‌ ಕಾರ್ಖಾನೆ ಉದ್ಯೋಗಿಯಾಗಿಯೊಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಹಾಗಾಗಿ ನಗರ ಕೇಂದ್ರದಲ್ಲಿ ಮತ್ತೂಂದು ಪ್ರಕರಣ ಕಂಡು ಬಂದಿದೆ. ಇದರ ನಡುವೆ ಜಿಲ್ಲೆಯ ಯಾವ ಸ್ಥಳವನ್ನೂ ಹಾಟ್‌ಸ್ಪಾಟ್‌ ಎಂದು ಜಿಲ್ಲಾಡಳಿತ ಘೋಷಿಸಿಲ್ಲ.

Advertisement

2ನೇ ವಾರ್ಡ್‌ ನಿರ್ಬಂಧ ವಲಯ: ಮಂಡ್ಯ ನಗರದಲ್ಲಿ ಸೋಂಕಿತ ವ್ಯಕ್ತಿ ವಾಸವಿದ್ದ ಸ್ವರ್ಣಸಂದ್ರ ಬಡಾವಣೆಯ 32, 33 ಹಾಗೂ 34ನೇ ವಾರ್ಡ್‌ ಚಿಕ್ಕೇಗೌಡನದೊಡ್ಡಿ ನಿರ್ಬಂಧಿತ ವಲಯ (ಕಂಟೈನ್ಮೆಂಟ್‌ ಝೋನ್‌) ಹಾಗೂ ಮಳವಳ್ಳಿ ಪಟ್ಟಣದ 7ನೇ ವಾರ್ಡ್‌ಗೆ ಸೇರಿದ ಈದ್ಗಾ ಮೊಹಲ್ಲಾ ಹಾಗೂ ಪೇಟೆ ಕಾಳಮ್ಮನ ಬೀದಿಯನ್ನೊಳಗೊಂಡಂತೆ ಮುಸ್ಲಿಂ ಬ್ಲಾಕ್‌ ಒಳಗೊಂಡ 2ನೇ ವಾರ್ಡ್‌ನ್ನು ನಿರ್ಬಂಧಿತ ವಲಯವೆಂದು ಘೋಷಿಸಲಾಗಿದೆ. ಈಗಲೂ ಅದೇ ಪರಿಸ್ಥಿತಿಯನ್ನು ಮುಂದುವರಿಸಲಾಗಿದೆ.

ತುರ್ತು ಪರಿಸ್ಥಿತಿ ಇಲ್ಲ: ಏ.7ರವರೆಗೂ ಒಂದೇ ಒಂದು ಕೋವಿಡ್ 19   ಪ್ರಕರಣಗಳೂ ಜಿಲ್ಲೆಯಲ್ಲಿ ವರದಿಯಾಗಿರಲಿಲ್ಲ. ಕೇವಲ 10 ದಿನಗಳಲ್ಲಿ 12 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಮಂಡ್ಯ ನಗರದ 3 ಹಾಗೂ ಮಳವಳ್ಳಿ ಪಟ್ಟಣದ 2 ವಾರ್ಡ್‌ಗಳನ್ನು ಬಿಟ್ಟರೆ ಉಳಿದ ಯಾವುದೇ ಭಾಗದಲ್ಲೂ ತುರ್ತು ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಮಳವಳ್ಳಿಯಲ್ಲೇ ಹೆಚ್ಚು: ತಬ್ಲೀಘಿ  ಎಫೆಕ್ಟ್ನಿಂದಾಗಿ ಮಳವಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದುವರೆಗೆ ದಾಖಲಾಗಿರುವ 11 ಪ್ರಕರಣಗಳು ತಬ್ಲೀ ಯವರ ಸಂಪರ್ಕದಿಂದಲೇ ಬಂದಿರುವುದು ಜನರ ಭೀತಿಗೆ ಕಾರಣವಾಗಿವೆ. ಈಗ ಸೋಂಕು ದೃಢಪಟ್ಟಿರುವ ಮೂವರ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದವರು ಹಾಗೂ 2ನೇ ಹಂತದಲ್ಲಿ ಇವರ ಸಂಪರ್ಕದಲ್ಲಿ ಯಾರಿದ್ದರು ಎನ್ನುವುದನ್ನು ಪತ್ತೆ ಹಚ್ಚಿ ಐಸೋಲೇಷನ್‌ ವಾರ್ಡ್‌ ಹಾಗೂ ಹೋಂ ಕ್ವಾರೈಂಟೈನ್‌ನಲ್ಲಿ ಇರಿಸಲಾಗಿದೆ.

ಮಂಡ್ಯದಲ್ಲಿ ಪತ್ತೆಯಾಗಿರುವ 32 ವರ್ಷದ ಕೋವಿಡ್ 19   ಸೋಂಕಿತ ವ್ಯಕ್ತಿ ಮೈಸೂರು ಜಿಲ್ಲೆ ನಂಜನಗೂಡಿನ ಜುಬಿಲಿಯೆಂಟ್‌ ಕಾರ್ಖಾನೆಯ ಉದ್ಯೋಗಿಯಾಗಿದ್ದು, ಈತನಿಗೆ ಮತ್ತೂಬ್ಬ ಉದ್ಯೋಗಿ ಸಂಪರ್ಕದಿಂದ ಬಂದಿರುವುದು ದೃಢಪಟ್ಟಿದೆ. ಮಳವಳ್ಳಿ, ಮಂಡ್ಯ ಹೊರತುಪಡಿಸಿದರೆ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಯಾವುದೇ ತಾಲೂಕುಗಳಲ್ಲೂ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಮಂಡ್ಯದ 3 ವಾರ್ಡ್‌ಗಳಿಂದ ಸುಮಾರು 6 ಸಾವಿರ ಜನರಿದ್ದರೆ, ಮಳವಳ್ಳಿಯ 2 ವಾರ್ಡ್‌ಗಳಿಂದ ಸುಮಾರು 4 ಸಾವಿರ ಜನರು ವಾಸವಿದ್ದು, ನಿರ್ಬಂಧಿತ ವಲಯದಲ್ಲಿರುವ ಪ್ರದೇಶಗಳಿಗೆ ತರಕಾರಿಗಳನ್ನು ತಳ್ಳುವ ಗಾಡಿಗಳ ಮೂಲಕ ರವಾನಿಸಲಾಗುತ್ತಿದೆ. ಈ ವಾರ್ಡ್‌ಜನರಿಗೆ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ.

Advertisement

ಮಳವಳ್ಳಿಯಲ್ಲಿ ಒಟ್ಟು 11 ಕೋವಿಡ್ 19   ಪ್ರಕರಣಗಳು ದೃಢಪಟ್ಟಿವೆ. ಆದರೆ ಹಾಟ್‌ ಸ್ಪಾಟ್‌ ಅಲ್ಲ. ಸೋಂಕಿತರ ಪ್ರಮಾಣ 15ರ ಗಡಿ ದಾಟಿದಾಗ ಮಾತ್ರ ಹಾಟ್‌ಸ್ಪಾಟ್‌ ಎಂದು ಪರಿಗಣಿಸಲಾಗುವುದು. ರೆಡ್‌ಝೋನ್‌ ವ್ಯಾಪ್ತಿಗೂ ಮಳವಳ್ಳಿ ಬರುವುದಿಲ್ಲ. ಕಂಟೈನ್ಮೆಂಟ್‌, ಬಫ‌ರ್‌ ಝೋನ್‌ ವ್ಯಾಪ್ತಿಯಲ್ಲೇ ಮುಂದುವರಿಯಲಿದೆ. ಡಾ. ವೆಂಕಟೇಶ್‌, ಜಿಲ್ಲಾಧಿಕಾರಿ

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next