ಹೊಸಪೇಟೆ: ದೇಶದಲ್ಲಿ ಹೋಳಿ ಹಬ್ಬಕ್ಕೆ ಮುನ್ನಡಿಬರೆದಿದ್ದ ಪುರಾಣ ಪ್ರಸಿದ್ಧ ಹಂಪಿಯಲ್ಲಿ ಈಬಾರಿಯ ಹೋಳಿ ಸಂಭ್ರಮ ಮಾಯವಾಗಿದ್ದು ಕೋವಿಡ್ ಕರಿನೆರಳು ಆವರಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾದ್ದರಿಂದ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿಹೋಳಿ ಹಬ್ಬದ ಆಚರಣೆಗೆ ಬ್ರೇಕ್ ಹಾಕಿರುವಹಿನ್ನೆಲೆಯಲ್ಲಿ ಸೋಮವಾರ ಹಂಪಿಯಲ್ಲಿಹೋಳಿ ಸಂಭ್ರಮ ಕಡಿವಾಣ ಬಿದ್ದಿದೆ.ವಿಶ್ವ ವಿಖ್ಯಾತ ಹಂಪಿ ಹೋಳಿ ಸಂಭ್ರಮದಲ್ಲಿಭಾಗಿಯಾಗಲು ಕಾತುರದಿಂದ ಎದುರು ನೋಡುತ್ತಿದ್ದ ದೇಶ-ವಿದೇಶಿಯರ ಆಸೆಗೆ ಕೋವಿಡ್ ತಣ್ಣೀರು ಎರಚಿದಂತಾಗಿದೆ.
ಪ್ರತಿವರ್ಷವೂ ಹೋಳಿ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಐತಿಹಾಸಿಕ ವಿರೂಪಾಕ್ಷೇಶ್ವರದೇವಾಲಯದ ರಥ ಬೀದಿಯಲ್ಲಿ ಜನರಿಲ್ಲದೇಭಣಗುಡುತಿತ್ತು. ಹೋಳಿ ಸಂಭ್ರಮದಲ್ಲಿಕುಣಿದು ಕುಪ್ಪಳಿಸುತ್ತಿದ್ದ ಹಂಪಿ ವಾಸಿಗಳಮೊಗದಲ್ಲಿ ನಿರಾಸೆ ಭಾವ ಮೂಡಿದೆ.ಸುಡು ಬಿಸಿಳಿನಲ್ಲಿ ಓಕುಳಿಯ ಜಲಕ್ರೀಡೆಗೆ ಸಾಕ್ಷಿಯಾಗುತ್ತಿದ್ದ ತುಂಗಭದ್ರಾ ನದಿ ತೀರ ಖಾಲಿಖಾಲಿಯಾಗಿತ್ತು.
ಕಾಮದಹನ: ಕೆಲ ಯುವಕರು ಭಾನುವಾರರಾತ್ರಿ ಸಾಮಾಜಿಕ ಅಂತರ ಕಾಯ್ದುಕೊಂಡುಕಾಮದಹನ ನಡೆಸಿ ಹೋಳಿ ಹಬ್ಬದಸಂಪ್ರದಾಯ ಮುಂದುವರೆಸಿದ್ದಾರೆ. ಕೆಲಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡುಹೋಳಿ ಹಬ್ಬದ ನೆನಪಿಗಾಗಿ ವಿರೂಪಾಕ್ಷೇಶ್ವರದೇವಾಲಯದ ರಥ ಬೀದಿಯಲ್ಲಿ ಕುಣಿದು ಕುಪ್ಪಳಿಸಿದರು. ಹೋಳಿ ಆಚರಣೆಯಲ್ಲಿ ಭಾಗಿಯಾಗಲು ಹೊಸಪೇಟೆಯಿಂದ ಬೈಕ್ -ಕಾರು, ಆಟೋ ಮೂಲಕ ಹಂಪಿಗೆ ಆಗಮಿಸಿದ್ದಯುವಕರು ನಿರಾಸೆಯಿಂದ ಮರಳಿದರು. ಸುಡಬಿಸಿಳಿನಲ್ಲಿ ಕಾದು ಕುಳಿತಿದ್ದ ಬಣ್ಣದ ವ್ಯಾಪಾರಿ ಬಳಿ ಯಾರೊಬ್ಬರೂ ಸುಳಿದಾಡಲಿಲ್ಲ.
ಕಳೆದ ವರ್ಷ ನಡೆದಿತ್ತು ಆಚರಣೆ: ಕೋವಿಡ್ ಭೀತಿ ನಡುವೆಯೂ ಕಳೆದ ವರ್ಷ ಹಂಪಿಯಲ್ಲಿ ಹೋಳಿ ಆಚರಣೆ ನಡೆದಿತ್ತು. ವಾಡಿಕೆಯಂತೆದೇಶ-ವಿದೇಶಿ ಪ್ರವಾಸಿಗರೊಂದಿಗೆ ಬಣ್ಣದಓಕುಳಿಯಲ್ಲಿ ಭಾಗವಹಿಸಿದ್ದರು. ಇದಾದಕೆಲ ದಿನಗಳ ಬಳಿಕವಷ್ಟೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗಿದನ್ನು ಸ್ಮರಿಸಬಹುದು.ಪ್ರತಿ ವರ್ಷವೂ ಹೋಳಿ ಹಬ್ಬ ಹೊತ್ತಿಗಾಗಲೇಹಂಪಿಯಲ್ಲಿ ಸೇರಿಕೊಂಡು ಸ್ಥಳೀಯರೊಂದಿಗೆಬಣ್ಣದ ಓಕುಳಿಯಲ್ಲಿ ಭಾಗಿಯಾಗಿಸಂಭ್ರಮಿಸುತ್ತಿದ್ದ ವಿದೇಶಿ ಪ್ರಜೆಗಳಿಗೆ ಹೋಳಿಆಚರಣೆಗೆ ಬ್ರೇಕ್ ಬಿದ್ದಿರುವುದು ನಿಜಕ್ಕೂ ಬೇಸರ ಮೂಡಿಸಿದೆ
ಹಂಪಿಯಲ್ಲಿ ಅದ್ಧೂರಿಯಾಗಿಆಚರಿಸುವುದು ಗಣೇಶ ಉತ್ಸವಹಾಗೂ ಹೋಳಿ ಹಬ್ಬ. ಈ ಎರಡೂ ಹಬ್ಬಗಳ ಸಂಭ್ರಮಕ್ಕೆ ಕೋವಿಡ್ ಅಡ್ಡಿಯಾಗಿರುವುದು ಬೇಸರ ತಂದಿದೆ.
– ಬಿ. ತಿಪ್ಪೇಸ್ವಾಮಿ, ಹಂಪಿ ನಿವಾಸಿ
-ಪಿ.ಸತ್ಯನಾರಾಯಣ