Advertisement
“ಕುಷ್ಕ’ ಪಕ್ಕಾ ಮನೋರಂಜನಾತ್ಮಕ ಚಿತ್ರ. ಮನರಂಜನೆಯ ಒಂದಷ್ಟು ಎಳೆಯನ್ನು ಇಟ್ಟುಕೊಂಡು ಅದನ್ನು ನವಿರಾದ ಹಾಸ್ಯದ ಜೊತೆಗೆ ತೆರೆ ಮೇಲೆ ಹೇಳುತ್ತಿದ್ದೇವೆ ಎನ್ನುತ್ತದೆ “ಕುಷ್ಕ’ ಚಿತ್ರತಂಡ. ಯಾವುದೇ ಪಾತ್ರದ ವೈಭವೀಕರಣವಿಲ್ಲದೆ ನಮ್ಮ ನಡುವೆಯೇ ನಡೆಯಬಹುದಾದ ಒಂದಷ್ಟು ಘಟನೆಗಳನ್ನು ಆಧರಿಸಿ ಚಿತ್ರವನ್ನು ತೆರೆಮೇಲೆ ತೆರೆದಿಡಲಿದೆಯಂತೆ. ಇನ್ನು ಈ ಚಿತ್ರದಲ್ಲಿ ಯಾವುದೋ ಒಂದು ಪಾತ್ರ ಹೀರೋ ಅಂತ ಇಲ್ಲವಂತೆ. ಕಥೆಗೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಳ್ಳಲಿವೆಯಂತೆ. ಆದರೆ ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಖಳನಾಯಕನ ಪಾತ್ರವೊಂದು ಇರಲಿದ್ದು ಅದನ್ನು ಮಠ ಗುರು ಪ್ರಸಾದ್ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಒಂದಷ್ಟು ವೆಬ್ ಸೀರಿಸ್‌ಗಳನ್ನು ನಿರ್ದೇಶಿಸುವ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಪರಿಚಿತರಾಗಿರುವ ನವ ಪ್ರತಿಭೆ ವಿಕ್ರಮ್ ಯೋಗಾನಂದ್ “ಕುಷ್ಕ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಪ್ರತಾಪ್ ರೆಡ್ಡಿ, ಮಧು ಗೌಡ, ಕೈಲಾಶ್ ಪಾಲ್ ಮತ್ತು ವಿಕ್ರಮ್ ಯೋಗಾನಂದ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Advertisement
ಹೀರೋ ಇಲ್ಲ ಕಥೆಯೇ ಎಲ್ಲಾ…
06:00 AM Nov 02, 2018 | |
Advertisement
Udayavani is now on Telegram. Click here to join our channel and stay updated with the latest news.