ನೆಲಮಂಗಲ: ಸಿದ್ಧಗಂಗಾ ಶ್ರೀಗಳ ಹುಟ್ಟೂರು ವೀರಾಪುರ ಗ್ರಾಮವನ್ನು ಪಾರಂ ಪರಿಕ ಕೇಂದ್ರವಾಗಿಸಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ 25 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಆದರೆ ಘೋಷಣೆಯಾಗಿ 8 ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ವಿಶೇಷ ಅನುದಾನ ಕೇವಲ ಘೋಷಣೆಗೆ ಮಾತ್ರವೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದುರಾಗಿದೆ.
ಶ್ರೀಗಳ ಪ್ರತಿಮೆ ನಿರ್ಮಾಣ ಹಾಗೂ ಗ್ರಾಮದ ಅಭಿವೃದ್ಧಿಗೆ ಸಿಎಂ ಬಿ.ಎಸ್.ಯಡಿ ಯೂರಪ್ಪ ಶಂಕುಸ್ಥಾಪನೆ ಮಾಡಿದ ಬಳಿಕ ಈವರೆಗೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿಲ್ಲ. ಜತೆಗೆ ಸರ್ಕಾರ ಅಭಿವೃದ್ಧಿ ಮಾತುಗಳನ್ನಾಡುತ್ತಿದೆಯೇ ವಿನಾ, ಗ್ರಾಮದ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮುರಿದು ಬಿದ್ದ ನಾಮಫಲಕ: ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಅದೂಟಛಿರಿ ಶಂಕುಸ್ಥಾಪನೆ ನಡೆದ ನಂತರ ಬಾಣವಾಡಿ ಗ್ರಾಪಂ ನಿಂದ ವೀರಾಪುರಕ್ಕೆ ಬರುವ ಮಾರ್ಗದಲ್ಲಿ ನಿರ್ಮಾಣವಾಗಿದ್ದ ನಾಮಫಲಕ ಮುರಿದು ಚರಂಡಿಯಲ್ಲಿ ಬಿದ್ದಿದೆ. ಆದರೆ ಅದನ್ನು ಸರಿಪಡಿಸುವುದಾಗಲಿ, ತೆರವುಗೊಳಿಸುವುದಾಗಲಿ ಮಾಡಿಲ್ಲ. ಗ್ರಾಮಕ್ಕೆ ಬರುವ ಜನರು ಮುರಿದ ನಾಮಫಲಕ ಕಂಡು ಇದೇ ವೀರಾಪುರ ಮಾರ್ಗ ಎಂದು ತಿಳಿಯಬೇಕಾಗಿದೆ.
ಪಾಚಿಕಟ್ಟಿದ ಟ್ಯಾಂಕ್: ಶ್ರೀಗಳ ಪ್ರತಿಮೆ ನಿರ್ಮಾಣ ಘೋಷಣೆಯಾದ ನಂತರ ನೂರಾರು ಜನರು ಬರುತ್ತಿದ್ದಾರೆ. ಆದರೆ ಗ್ರಾಮ ದಲ್ಲಿ ಪಾಚಿಕಟ್ಟಿದ ಹಳೆಯ ನೀರಿನ ಟ್ಯಾಂಕ್‌ಗಳನ್ನೇ ಬಳಸುತ್ತಿರುವುದು ಶೋಚ ನಿಯ. ಶ್ರೀಗಳ ಹಳೆಮನೆ, ಗ್ರಾಮದ ರಸ್ತೆ, ಚರಂಡಿ, ಸರಕಾರಿ ಶಾಲೆ ಸೇರಿದಂತೆ ಅಭಿವೃದ್ಧಿ ಕೆಲಸಗಳು ಆರಂಭವಾಗಿಲ್ಲ ಎಂದು ದೂರುಗಳು ಕೇಳಿದೆ.
ಕುಡುಕರ ಅಡ್ಡ: ಪ್ರತಿಮೆ ನಿರ್ಮಾಣ ಮಾಡುವ ಬಂಡೆ ಜಾಗಕ್ಕೆ ರಸ್ತೆ ಮಾಡಿದ ನಂತರ ಕಾಮಗಾರಿ ಆರಂಭವಾಗಿಲ್ಲ. ಆದರೆ ಕುಡುಕರು,ಪುಂಡರ ಹಾವಳಿ ಹೆಚ್ಚಾಗಿದ್ದು ಬಂಡೆಯ ಸಮೀಪದ ಮರಗಳ ಕೆಳಗೆ ಕುಳಿತು ಪುಂಡಾಟವಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳಿಗೂ ತಿಳಿದಿದ್ದು ಕಾಮಗಾರಿ ಆರಂಭವಾದ ನಂತರ ನಿಲ್ಲುತ್ತದೆ ಬಿಡಿ ಎನ್ನುತ್ತಾರೆ.
ವಿಶೇಷ ಅನುದಾನದ ಬಗ್ಗೆ ಗ್ರಾಪಂಗಳಿಗೆ ತಿಳಿಸಿಲ್ಲ. ಕಂದಾಯ ಇಲಾಖೆಗೆ ಅನುದಾನ ಬಿಡುಗಡೆಯಾಗಿರು ವುದು. ಅವರಿಂದಲೇ ನೇರ ಕೆಲಸವಾಗಬೇಕು. ಈವರೆಗೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಮಾಹಿತಿ ನೀಡುತ್ತೇವೆ.
-ಉಷಾ ಮಾಳಗಿಮನಿ, ಬಾಣವಾಡಿ ಗ್ರಾಪಂ ಪಿಡಿಒ
ಕಾಮಗಾರಿ ಮಾಡುವುದೆಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಡಲಾಗುತ್ತದೆ. ಕಂದಾಯ ಇಲಾಖೆಯಿಂದ ಏನು ಮಾಡುತ್ತಿಲ್ಲ. ನಾನು ವೀರಾಪುರಕ್ಕೆ ಹೋಗಿದ್ದೆ. ಈವರೆಗೂ ಏನು ಕೆಲಸವಾಗಿಲ್ಲ.
-ಶ್ರೀನಿವಾಸ್ ಪ್ರಸಾದ್, ಮಾಗಡಿ ತಾಲೂಕು ತಹಶೀಲ್ದಾರ್
* ಕೊಟ್ರೇಶ್ ಆರ್.