ಹೊಸದಿಲ್ಲಿ: ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರಕಾರ ಯಾವುದೇ ಸಮಿತಿ ರಚಿಸುವುದಿಲ್ಲ. ಆದರೆ, ಅದಾನಿ ಸಮೂಹಸಂಸ್ಥೆಯ ವಿರುದ್ಧದ ಮಾರುಕಟ್ಟೆ ಆರೋಪಗಳನ್ನು ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ತನಿಖೆ ನಡೆಸಲಿದೆ ಎಂದು ಸರಕಾರ ಲೋಕಸಭೆಗೆ ಸೋಮವಾರ ತಿಳಿಸಿದೆ.
Advertisement
ಅದಾನಿ ಗ್ರೂಪ್ ಕುರಿತಂತೆ ತನಿಖೆಯ ಸ್ಥಿತಿಗತಿ ಮತ್ತು ಸಮಿತಿ ರಚನೆ ಕುರಿತಂತೆ ಹಲವು ಸಂಸದರು ಸರಕಾರಕ್ಕೆ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಈ ಹಿನ್ನೆಲೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.