ಕ್ರಮ ಕೈಗೊಳ್ಳುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಉಸ್ತುವಾರಿ ಹೊಂದಿರುವ ಕ್ರೀಡಾ ಸಚಿವ ಫ್ರೈಸರ್ ಮುಸ್ತಾ ಪಹ ತಿಳಿಸಿದ್ದಾರೆ.
Advertisement
ಚಂಡಿಮಲ್ ವಿರುದ್ಧ ಆರೋಪ ಕೇಳಿ ಬರುತ್ತಲೇ ಲಂಕಾ ಆಟಗಾರರು ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕೂ ಮುನ್ನ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ,ಪಂದ್ಯವು 2 ಗಂಟೆ ತಡವಾಗಿ ಆರಂಭವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ,ಚಂಡಿಮಲ್, ತಂಡದ ಮುಖ್ಯ ತರಬೇತುದಾರ ಚಂದ್ರಿಕಾ ಹತುರ ಸಿಂಘ ಹಾಗೂ ತಂಡದ ವ್ಯವಸ್ಥಾಪಕ ಗುರುಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಪ್ರತಿ ಕ್ರಿಯಿಸಿರುವ ಸಚಿವರು,”ದಿನದಾಟಕ್ಕೆ ಅಡ್ಡಿಪಡಿಸಿದ್ದು ತಪ್ಪು. ಆದರೆ, ತಪ್ಪಿತಸ್ಥರಿಗೆ ಈಗಾಗಲೇ ಶಿಕ್ಷೆಯಾಗಿದೆ. ಆಗಾಗಿ, ಮತ್ತಷ್ಟು ಶಿಕ್ಷೆ ನೀಡುವ ಇರಾದೆ ಇಲ್ಲ” ಎಂದಿದ್ದಾರೆ.