Advertisement

Sugar factory; ಯಾವುದೇ ಅವ್ಯವಹಾರ ಆಗಿಲ್ಲ, ತನಿಖೆಗೆ ಸಿದ್ಧ: ಸುಪ್ರಸಾದ್‌ ಶೆಟ್ಟಿ

01:02 AM Oct 10, 2023 | Team Udayavani |

ಬ್ರಹ್ಮಾವರ: ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಟೆಂಡರ್‌ ಪ್ರಕ್ರಿಯೆಯನ್ನು ಸರಕಾರದ ಸೂಚನೆಯ ಪ್ರಕಾರವೇ ನಿರ್ವ ಹಿಸಲಾಗಿದೆ. ನಿರುಪಯುಕ್ತ ಯಂತ್ರೋ ಪಕರಣಗಳ ಮಾರಾಟದಿಂದ ಬಂದ ಹಣದಿಂದ ಕಾರ್ಖಾನೆಯ ಎಲ್ಲ ಸಾಲವನ್ನು ಪಾವತಿಸಿದ್ದು ಸಕ್ಕರೆ ಕಾರ್ಖಾನೆ ಸಾಲ ಮುಕ್ತವಾಗಿದೆ. ಯಾವುದೇ ತನಿಖೆಗೆ ಸಹಕಾರ ನೀಡುತ್ತೇವೆ ಎಂದು ಅಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

Advertisement

20 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುಜರಿ ಮಾರಾಟದಿಂದ ಬಂದ ಹಣದಿಂದ ಕಾರ್ಖಾನೆಯ ವಿವಿಧ ಬಾಕಿ ಮತ್ತು ಸಾಲಗಳಾದ ವಾಣಿಜ್ಯ ಇಲಾಖೆಯ ತೆರಿಗೆ ಬಾಕಿ 1,75,65,423 ರೂ., ಕಾರ್ಮಿಕರ ಬಾಕಿ ಪಾವತಿ 3,26,75,866 ರೂ., ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಸಾಲ ಮರುಪಾವತಿ 56 ಲಕ್ಷ ರೂ., ಎಸ್‌ಸಿಡಿಸಿಸಿ ಬ್ಯಾಂಕ್‌ ಸಾಲ ಬಾಕಿ 78.90 ಲಕ್ಷ ರೂ. ಹಾರಾಡಿ ಗ್ರಾ.ಪಂ. ತೆರಿಗೆ ಬಾಕಿ 4,35,350 ರೂ., ಭವಿಷ್ಯ ನಿ ಧಿಯ ಬಾಕಿ 23,71,73 ರೂ. ಪಾವತಿಸಿ ಸಂಪೂರ್ಣ ಸಾಲ ಮುಕ್ತವನ್ನಾಗಿಸಿರುತ್ತೇವೆ. ಕಾಂಗ್ರೆಸ್‌ನ ಆರೋಪ ರಾಜಕೀಯ ಪ್ರೇರಿತ ಎಂದಿದ್ದಾರೆ.

ಈ ಹಿಂದಿನ ಆಡಳಿತ ಮಂಡಳಿ ಮಾಡಿರುವ ಸಾಲ ಮತ್ತು ಬಾಕಿಯನ್ನು ಪಾವತಿಸಿ ಕಾರ್ಖಾನೆಯ ಜಾಗವನ್ನು ಉಳಿಸಿರುವ ತೃಪ್ತಿ ಇದೆ ಎಂದಿದ್ದಾರೆ.

ನಿಮ್ಮದೇ ಸರಕಾರವಿದೆ; ತನಿಖೆ ಮಾಡಿಸಿ: ಶ್ರೀನಿವಾಸ ಪೂಜಾರಿ
ಕುಂದಾಪುರ: ರಾಜ್ಯದಲ್ಲಿ ನಿಮ್ಮದೇ ಸರಕಾರವಿದ್ದು, ಸಕ್ಕರೆ ಕಾರ್ಖಾ ನೆಯಲ್ಲಿ ಭ್ರಷ್ಟಾಚಾರ, ಗೊಂದಲ ಅಥವಾ ತಪ್ಪು ಏನೇ ಆಗಿದ್ದರೂ ತನಿಖೆ ಮಾಡಿ ಬಹಿರಂಗಪಡಿಸಿ. ಸಾರ್ವತ್ರಿಕವಾಗಿ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಆದರೆ ಅಧಿಕಾರದಲ್ಲಿದ್ದವರಿಗೆ ಪಕ್ಷದ ವತಿ ಯಿಂದ ಪ್ರತಿಭಟನೆ ಮಾಡುವ ಅಗತ್ಯ ಇಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಮೂಡ್ಲಕಟ್ಟೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪುನೀತ್‌ ಕೆರೆಹಳ್ಳಿ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸು ತ್ತಾರೆ ಎಂಬ ಆರೋಪವಿದೆ. ಈ ಬಗ್ಗೆ ಸದನದಲ್ಲೂ ಚರ್ಚೆಯಾಗಿದೆ. ನಾಗರಿಕರ ಹಕ್ಕಿನ ದಮನ ಮಾಡಬಾ ರದು ಅನ್ನುವುದಾಗಿ ನಾನು ಗೃಹ ಸಚಿವರನ್ನು ಒತ್ತಾಯಿಸುತ್ತಿದ್ದೇನೆ ಎಂದ ಅವರು, ಸದಾನಂದ ಗೌಡರು ನಮ್ಮ ಪಕ್ಷದ ಹಿರಿಯ ನಾಯಕರು. ರಾಜ್ಯಾಧ್ಯಕ್ಷರಾಗಿದ್ದವರು. ಮೋದಿಯವರ ಸಂಪುಟದಲ್ಲಿಯೂ ಸಚಿವರಾಗಿದ್ದರು. ಪಕ್ಷದ ವಿಚಾರಕ್ಕೆ ಸಂಬಂಧಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವುದಾಗಿ ಹೇಳಿರಬಹುದು ಅಷ್ಟೇ. ಅಸಮಾಧಾನ ಏನಿಲ್ಲ ಎಂದರು.

Advertisement

ಕೆರಾಡಿಯಲ್ಲಿರುವ “ಹರೆಯ’ ಸಮುದಾಯದವರು ಆಯೋಗಕ್ಕೆ ಈಗಾಗಲೇ ಜಾತಿ ಪ್ರಮಾಣಪತ್ರ ಕೊಡಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next