Advertisement
ಒಣಗುತ್ತಿರುವ ಬೆಳೆ: ಜಿಲ್ಲೆಯಾದ್ಯಂತ ಆಗಸ್ಟ್ ತಿಂಗಳು ಕಳೆದು ಸೆಪ್ಟೆಂಬರ್ ತಿಂಗಳು ಕೊನೆಯಾಗುತ್ತಾ ಅಕ್ಟೋಬರ್ ತಿಂಗಳು ಬರುತ್ತಿದೆ ಆದರೆ ಆದ ಮಳೆ ಬೀಜ ಬಿತ್ತುವ, ಬೆಳೆ ಬೆಳೆಯುವ ಸಮಯದಲ್ಲಿ ಕೈ ಕೊಟ್ಟಿದೆಈಗಾಗಲೇ ಬರಗಾಲಆರಂಭವಾಗಿದೆ ಬೆಳೆ ಒಣಗುತ್ತಿದೆ.
ಜಾನುವಾರುಗಳಿಗೆ ಮಾರಕ: ರೈತರ ಬೆನ್ನೆಲು ಬಾಗಿರುವ ದನ ಕರುಗಳನ್ನು ಸಂರಕ್ಷಿಸಬೇಕು ಆದರೆ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಿಲ್ಲೆಯಲ್ಲೂ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಜಾನುವಾರುಗಳ ಕಡಿಮೆಯಾಗುತ್ತಿದೆ. ಮುಂದೆ ಈ ಬರಗಾಲ ಪರಿಸ್ಥಿತಿ ಮುಂದುವರಿದರೆ ಇರುವ ಜಾನುವಾರುಗಳ ಸಂಖ್ಯೆಯೂ ಇನ್ನು ಕಡಿಮೆಯಾಗಲಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
Related Articles
ಗೋಚರವಾಗುತ್ತದೆ. ಉಳಿದಂತೆ ಜಿಲ್ಲೆಯಲ್ಲಿ ಕುರಿಗಳು-10,67,719, ಮೇಕೆಗಳು-5,17,761 ಇವೆ ರಾಜ್ಯದಲ್ಲಿ ಕುರಿ ಮೇಕೆ ಸಾಕಾಣಿಕೆಯಲ್ಲಿ ಜಿಲ್ಲೆ ಸ್ಥಾನದಲ್ಲಿದೆ.
Advertisement
ರಾಸುಗಳಿಗೆ ನೀರೊದೆಗಿಸುವುದೇ ಸವಾಲು: ಈ ಜಾನುವಾರುಗಳಿಗೆ ಮೇವು, ನೀರು ಒದಗಿಸುವುದೇ ರೈತರಿಗೆ ಸವಾಲಾಗಿದೆ. ಈ ವರ್ಷ ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ, ಜಿವನ ನಡೆಸುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ತಾವು ಸಾಕಿರುವ ಜಾನುವಾರುಗಳ ಮಾಡುವುದು ಇನ್ನೂ ಕಷ್ಟವಾಗುತ್ತಿದ್ದು, ಹಲವು ರೈತರು ಚಿ.ನಾ.ಹಳ್ಳಿ ತಾಲೂಕಿನ ಬೋರನಕಣಿವೆ ಸಮೀಪದ ಕಾರೇಹಳ್ಳಿ ಸಂತೆ, ತಿಪಟೂರು ತಾಲೂಕಿನ ಕರಡಾಳುಗಳಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗುತ್ತಿದೆ.
ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಆಹಾರವನ್ನು ತಂದು ಹಸಿವು ನೀಗಿಸಿಕೊಳ್ಳಬಹುದು, ಆದರೆ ಜಾನುವಾರುಗಳಿಗೆ ಇಂದು ಮೇವು, ನೀರು ದೊರಕುವುದು ಕಷ್ಟವಾಗಿದೆ, ಸೆಪ್ಟೆಂಬರ್ ತಿಂಗಳು ಕೊನೆಯಾಗತ್ತಿದ್ದರೂ ಮಳೆ ಬಂದಿಲ್ಲ ಹಸಿರಾಗಿದ್ದ ಹುಲ್ಲೆಲ್ಲಾ ಒಣಗುತ್ತಿದೆ ಮಳೆ ಬರದಿದ್ದರೆ ರೈತರ ಆತಂಕವಿದೆ.
21 ವಾರಕ್ಕೆ ಆಗುವಷ್ಟು ಮಾತ್ರ ಮೇವು: ಜಿಲ್ಲೆಯಲ್ಲಿ ಮಳೆ ಬರದೆ ಬೆಳೆ ಒಣಗುತ್ತಿದೆ ಒಂದು ದಿನಕ್ಕೆ ಸರ್ಕಾರದ ನಿಯಮದ ಪ್ರಕಾರ ಎತ್ತು ಅಥವಾ ಎಮ್ಮೆಗೆ ಕನಿಷ್ಠ 5 ಕೇಜಿ ಮೇವು ನೀಡಬೇಕು ಈಗಿರುವ ಒಂದು ದಿನಕ್ಕೆ 3,542 ಮೆಟ್ರಿಕ್ ಟನ್ ಮೇವು ಬೇಕು. ಜಿಲ್ಲೆಯಲ್ಲಿ 5,24,748 ಮೆಟ್ರಿಕ್‌ಟನ್ ಮೇವು ರೈತರ ಬಳಿ ಸಂಗ್ರಹಣೆಯಲ್ಲಿದೆ ಇದು 21 ವಾರಗಳ ಕಾಲ ಮಾತ್ರ ಬರಲಿದೆ. ಆ ನಂತರ ಮೇವಿನ ಸಮಸ್ಯೆ ಉಂಟಾಗಲಿದೆ ಎನ್ನುತ್ತಾರೆ ಪಶು ಇಲಾಖೆ ಉಪನಿರ್ದೇಶಕ ಡಾ. ಪ್ರಕಾಶ್. ಜಿಲ್ಲೆಯಲ್ಲಿ ಇರುವ ಜಾನುವಾರುಗಳಿಗೆ ಮೇವಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇವಿನ ಬೀಜಗಳನ್ನು ರೈತರಿಗೆ ನೀಡಿ ಮೇವು ಬೆಳೆಯಲು ಪ್ರರೇಪಿಸಬೇಕು. ಬರ ಪರಿಸ್ಥಿತಿಯಲ್ಲಿ ಜಾನುವಾರುಗಳ ಮೇವು ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.ಅನೀಸ್ ಕಣ್ಮಣಿ ಜಾಯ್ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ.
ಜಿಲ್ಲೆಯಲ್ಲಿ ಕಳೆದ ಬಾರಿಯೂ ಸಮರ್ಪಕ ರೀತಿಯಲ್ಲಿ ಮಳೆ ಬಂದಿಲ್ಲ. ಬಂದ ಮಳೆಯೂ ಬೆಳೆಯಾಗುವ ಸಮಯದಲ್ಲಿ
ಕೈಕೊಟ್ಟಿತ್ತು. ದನಕರು ಕಟ್ಟಿರುವ ರೈತರು ಮೇವಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ 21 ವಾರ ಮೇವು ಬರುತ್ತದೆ ಎಂದು ಹೇಳುತ್ತಾರೆ. ಎಲ್ಲಿದೆ ಮೇವು ಸರ್ಕಾರ ಈ ಕೂಡಲೇ ಜಿಲ್ಲೆಯ ಕಡೆ ಗಮನಹರಿಸಬೇಕು ಜಾನುವಾರು ಜನರ ರಕ್ಷಣೆಗೆ ನಿಲ್ಲಬೇಕು. ಈಗ ಮಳೆ ಬಂದರೆ ಮೇವು ಬಿಟ್ಟರೆ ಬೇರೆನೂ ಬೆಳೆಯಲು ಸಾಧ್ಯವಿಲ್ಲ. ಮೇವಿನ ಬೀಜ ನೀಡಿ ರೈತರಿಗೆ ಪ್ರೋತ್ಸಾಹಕವಾಗಿ ಹಣ ನೀಡಿ ಮೇವು ಬೆಳೆಸಲು ಉತ್ತೇಜನ ನೀಡಲಿ.
ಬಿ.ಎನ್. ಲೋಕೇಶ್ ಅಧ್ಯಕ್ಷರು ಜಿಲ್ಲಾ ಕೃಷಿಕ ಸಮಾಜ. ಚಿ.ನಿ. ಪುರುಷೋತ್ತಮ್