Advertisement
ಅ. 3ರಂದು ಚಾಮುಂಡಿಬೆಟ್ಟದಲ್ಲಿ ದೇವಿಯ ಅಗ್ರಪೂಜೆಯೊಂದಿಗೆ ಆರಂಭವಾಗಿ ಅ. 12ರಂದು ಅಭಿಮನ್ಯು ನೇತೃತ್ವದಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆಯವರೆಗೆ ರಾಜ್ಯದ ವಿವಿಧ ಮೂಲೆಗಳಿಂದಷ್ಟೇ ಅಲ್ಲದೆ ದೇಶ, ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿ ನವರಾತ್ರಿ ಉತ್ಸವವನ್ನು ವೀಕ್ಷಿಸಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಿದೆ.
ಈ ಬಾರಿಯ ದಸರಾ ಉತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶೇ. 80ರಷ್ಟು ಪ್ರವಾಸಿಗರು ಆಗಮಿಸಿದ್ದರೆ, ಹೊರ ರಾಜ್ಯ ಮತ್ತು ವಿದೇಶಗಳಿಂದ ಶೇ. 20ರಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ. ಅ. 3ರಿಂದ 8ರವರೆಗೆ ಅಂದಾಜು 6 ಲಕ್ಷ ಮಂದಿ ಮೈಸೂರಿಗೆ ಭೇಟಿ ನೀಡಿದ್ದರೆ, ಅ. 9ರಿಂದ 13ರ ವರೆಗೆ 10 ಲಕ್ಷ ಮಂದಿ ಆಗಮಿಸಿದ್ದಾರೆ. ಈ ಮೂಲಕ ದಸರಾ ಇತಿಹಾಸ
ದಲ್ಲೇ 16 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು ವಿಶೇಷ. 500 ಕೋಟಿಗೂ ಅಧಿಕ ವಹಿವಾಟು
ಈ ಬಾರಿ ದಾಖಲೆ ಪ್ರಮಾಣದಲ್ಲಿ ಮೈಸೂರಿಗೆ ಪ್ರವಾಸಿಗರು ಭೇಟಿ ನೀಡಿರುವುದು ಸಾರಿಗೆ, ಹೊಟೇಲ್ ಉದ್ಯಮ, ಪ್ರವಾಸಿ ಕೇಂದ್ರ, ವ್ಯಾಪಾರ ಚಟುವಟಿಕೆಗೆ ಶುಕ್ರದೆಸೆ ತಂದಿದೆ. ಈ ಎಲ್ಲ ವಲಯಗಳಿಂದ ಅಂದಾಜು 500 ಕೋಟಿ ರೂ.ಗಳಿಗೂ ಮೀರಿದ ವಹಿವಾಟು ನಡೆದಿದೆ ಎನ್ನಲಾಗಿದೆ. ಹೊಟೇಲ್ ಉದ್ಯಮವೊಂದರಲ್ಲೇ 110 ಕೋಟಿ ರೂ. ವಹಿವಾಟು ನಡೆದಿದೆ