ಪಣಜಿ: ಪ್ರತಿ ವರ್ಷದಂತೆಯೇ ಜೂನ್ 1 ರಿಂದ ರಾಜ್ಯದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತಿರುವುದರಿಂದ 61 ದಿನಗಳ ಕಾಲ ರಾಜ್ಯದಲ್ಲಿ ಮೀನುಗಾರಿಕೆ ಬಂದ್ ಆಗಲಿದೆ. ಇದರಿಂದಾಗಿ ಮುಂಬರುವ ಎರಡು ತಿಂಗಳುಗಳ ಕಾಲ ಗೋವಾದ ಜನತೆ ತಾಜಾ ಮೀನುಗಳಿಲ್ಲದೆಯೇ ದಿನ ಮುಂದೂಡಬೇಕಾಗಿದೆ.
ಮೀನುಗಳ ಪ್ರಜನನ ಕಾಲವಾಗಿರುವುದರಿಂದ ಗೋವಾದಲ್ಲಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ 61 ದಿನಗಳ ಕಾಲ ಮೀನುಗಾರಿಕೆಗೆ ನಿರ್ಬಂದ ಹೇರಲಾಗುತ್ತದೆ.
ಮೀನು ಇದು ಗೋವಾ ರಾಜ್ಯದ ಜನತೆಯ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಮೀನು ಗೋವನ್ನರ ವೀಕ್ ಪಾಯಿಂಟ್ ಆಗಿದೆ. ಬೆಳಗಾವಿಯಿಂದ ಗೋವಾಕ್ಕೆ ಪೂರೈಕೆಯಾಗುತ್ತಿದ್ದ ಚಿಕನ್ ಮಠನ್ ಬಂದ್ ಆಗಿದೆ. ಇದರಿಂದಾಗಿ ಇನ್ನೂ ಎರಡು ತಿಂಗಳುಗಳ ಕಾಲ ಗೋವನ್ನರು ಸಸ್ಯಹಾರಿಗಳಾಗಿಯೇ ಬದುಕುವ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ : ಚಂದನವನದ ಹಿರಿಯ ನಟ ಕೃಷ್ಣೇಗೌಡ ನಿಧನ
ಕೋಳಿ ಮೊಟ್ಟೆ ಕೂಡ ಬೆಳಗಾವಿಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಗೋವಾಕ್ಕೆ ಪೂರೈಕೆಯಾಗುತ್ತದೆ. ಆದರೆ ಸದ್ಯ ಮೊಟ್ಟೆಯ ದರ ಕೂಡ ಏರಿಕೆಯಾಗಿದೆ. ಹೀಗೆ ಹಲವು ರೀತಿಯಲ್ಲಿ ಮಾಂಸಾಹಾರಿಗಳು ಸದ್ಯ ತಮ್ಮ ಇಷ್ಟವಾದ ಊಟ ಸವಿಯಲು ಅಸಾಧ್ಯ ಎಂಬಂತಾಗಿದೆ.