Advertisement

ವಿಶ್ವಕಪ್‌ ಫೈನಲ್‌: ಫಾಲೋಆನ್‌ ನಿಯಮದಲ್ಲಿ ಬದಲಾವಣೆ ಇಲ್ಲ

10:35 PM Jun 07, 2021 | Team Udayavani |

ದುಬಾೖ: ಭಾರತ- ನ್ಯೂಜಿಲ್ಯಾಂಡ್‌ ನಡುವಿನ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ನಿಯಮಗಳನ್ನು ಈಗಾಗಲೇ ರೂಪಿಸಲಾಗಿದೆ. ಆದರೆ ಆಗ ಫಾಲೋಆನ್‌ ನಿಯಮವನ್ನು ಸೂಚಿಸಿರಲಿಲ್ಲ. ಇದನ್ನೀಗ ಐಸಿಸಿ ಸ್ಪಷ್ಟಪಡಿಸಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.

Advertisement

ಐಸಿಸಿಯ 14.1.1 ನಿಯಮಾವಳಿ ಯಂತೆ, ಪಂದ್ಯಕ್ಕೆ ಯಾವುದೇ ಆಡಚಣೆಯಾಗದೇ ಇದ್ದಲ್ಲಿ, ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 200 ರನ್ನುಗಳ ಅಂತರವಿದ್ದಾಗ ಫಾಲೋಆನ್‌ ಹೇರ ಬಹುದು.

ಕೆಲವು ವಿಶೇಷ ಸಂದರ್ಭಗಳಿ ಗೆಂದು ಐಸಿಸಿ 14.1.2 ನಿಯಮಾವಳಿ ಅನ್ವಯವಾಗುತ್ತದೆ. ಪಂದ್ಯ 3-4 ದಿನಗಳ ಕಾಲವಷ್ಟೇ ನಡೆಯುವ ಸಂದರ್ಭ ಎದುರಾದರೆ ಆಗ 150 ರನ್‌ ಅಂತರ ಫಾಲೋಆನ್‌ಗೆ ಮಾನದಂಡ ವಾಗುತ್ತದೆ. ಪಂದ್ಯ ಕೇವಲ ಎರಡೇ ದಿನಗಳಲ್ಲಿ ನಡೆಯುವುದಾದರೆ ಫಾಲೋಆನ್‌ ವಿಧಿಸಲು 100 ರನ್‌ ಅಂತರ ಸಾಕು. ಅಕಸ್ಮಾತ್‌ ಒಂದೇ ದಿನ ನಡೆಯುವ ಸಂದರ್ಭ ಎದುರಾದರೆ 75 ರನ್‌ ಅಂತರದಲ್ಲಿ ಫಾಲೋಆನ್‌ ನೀಡಬಹುದಾಗಿದೆ.

ಈ ನಿಯಮವೇ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗ‌ೂ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next