Advertisement

Anna Bhagya Scheme; ಹೆಚ್ಚುವರಿ ಪಡಿತರ ಅಕ್ಕಿ ಸದ್ಯಕ್ಕಿಲ್ಲ: ಸಚಿವ ಕೆ.ಎಚ್‌.ಮುನಿಯಪ್ಪ

12:39 AM Jan 09, 2024 | Team Udayavani |

ದೊಡ್ಡಬಳ್ಳಾಪುರ: ಅನ್ನಭಾಗ್ಯ ಯೋಜನೆಯಡಿ ಘೋಷಣೆ ಮಾಡಿದಂತೆ ಹೆಚ್ಚುವರಿ ಅಕ್ಕಿ ವಿತರಿಸಲು ಸದ್ಯಕ್ಕೆ ಅಕ್ಕಿ ಸಿಗುತ್ತಿಲ್ಲ. ಅಕ್ಕಿ ಖರೀದಿಗೆ ಆಂಧ್ರಪ್ರದೇಶದೊಂದಿಗೆ ಮಾತುಕತೆ ನಡೆಸಲಾಗಿದೆ. ಅಲ್ಲಿಯೂ ಅಕ್ಕಿ ಕೊರತೆ ಇದೆ. ಅಕ್ಕಿ ಖರೀದಿ ಮಾತುಕತೆ ಇನ್ನೂ ಅಂತಿಮವಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

Advertisement

ತಾಲೂಕಿನ ಹೆಗ್ಗಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೂಳ್ಯ ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ಶಾಲಾ ಕಟ್ಟಡ ಉದ್ಘಾಟನೆ, ಜಿಕೆವಿಕೆ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಸಮಾರೋಪದಲ್ಲಿ ಮಾತನಾಡಿದರು.

ರಫ್ತು ಮಾಡುವ ಹಂತ ಎಲ್ಲ ವಿದ್ಯಾವಂತರಿಗೂ ಸರಕಾರವೇ ಉದ್ಯೋಗ ನೀಡಲು ಸಾಧ್ಯವಿಲ್ಲ. ಹೀಗಾಗಿ ಕೃಷಿಯಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಆಧುನಿಕ ವಿಧಾನಗಳ ಮೂಲಕ ಕೃಷಿ ಸಾಧನೆ ಮಾಡಬೇಕು. ನೆಹರೂ, ಇಂದಿರಾ ಗಾಂಧಿ ಮುಂತಾದವರ ದೂರದೃಷ್ಟಿಯ ಯೋಜನೆಗಳಿಂದಾಗಿ ನಮ್ಮ ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಬೇರೆ ದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆದಿದೆ ಎಂದು ಹೇಳಿದರು.

ಮಳೆ ಇಲ್ಲದೇ ಬರದ ಸ್ಥಿತಿ
ರಾಜ್ಯದಲ್ಲಿ ಮಳೆ ಕೊರತೆ ಬಳಿಕ ಪಡಿತರ ವ್ಯವಸ್ಥೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಫಲಾನುಭವಿಗಳಿಗೆ 5 ಕೆ.ಜಿ.ಅಕ್ಕಿ ಬದಲಿಗೆ ಈಗ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಆದರೆ ಸಾಕಷ್ಟು ಜನ ಅಕ್ಕಿಯನ್ನೇ ನೀಡುವಂತೆ ಕೇಳುತ್ತಿ¨ªಾರೆ. ನಮ್ಮ ರಾಜ್ಯ ಸಹಿತ ಬಹುತೇಕ ರಾಜ್ಯಗಳಲ್ಲಿ ಈ ವರ್ಷದ ಮುಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಸದ್ಯಕ್ಕೆ ಅಕ್ಕಿ ವಿತರಿಸುವುದು ಕಷ್ಟವಾಗಲಿದೆ ಎಂದು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next