Advertisement
Related Articles
Advertisement
ಇದನ್ನೂ ಓದಿ : ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ
ಅದೇ ರೀತಿ, ಸ್ಮಾರ್ಟ್‌ಸಿಟಿ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಿವಾಜಿನಗರದ ನಿವಾಸಿ ಅಕ್ರಂ ಪಾಷಾ, ಈಗಾಗಲೇ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ಕೆಲಸ ಆರಂಭವಾಗಿದೆ. ಈ ಕಾಮಗಾರಿಯಿಂದ ಈಗಾಗಲೇ ಇಲ್ಲಿನ ನಿವಾಸಿಗಳು ದೂಳಿನಲ್ಲೇ ಬದುಕು ಸಾಗಿಸುತ್ತಿದ್ದಾರೆ. ಜತೆಗೆ ಸ್ಮಾರ್ಟ್ ಸಿಟಿಯೋಜನೆಯಡಿಕಾಮಗಾರಿ ಶುರುವಾಗಿದ್ದು, ಮತ್ತಷ್ಟುದೂಳಿಗೆ ಕಾರಣವಾಗಿದೆ. ದೂಳು ಕಡಿಮೆ ಮಾಡಲು ನೀರನ್ನು ಹಾಕಬೇಕು. ಆದರೆ ನೀರು ಹಾಕುವ ಕಾರ್ಯ ನಡೆಯುತ್ತಿಲ್ಲ ಎಂದರು.
ಇನ್‌ಫೆಂಟ್ರಿ ರಸ್ತೆಯ ವುಡ್ ಉತ್ಪನ್ನಗಳನ್ನು ಮಾರಾಟ ವ್ಯಾಪಾರಿ ಬಾಷಾ ಪ್ರತಿಕ್ರಿಯಿಸಿ, ಅಂಗಡಿಗಳ ಮುಂಭಾಗ ನೆಲದಿಂದ ಪಿಲ್ಲರ್ ಅಳವಡಿಕೆಕಾರ್ಯ ನಡೆಯುತ್ತಿದ್ದುಸಿಬ್ಬಂದಿಯಾವುದೇರೀತಿಯ ಮುಂಜಾಗ್ರತೆ ನಿರ್ವಹಿಸದೆ,ಪಿಲ್ಲರ್‌ಗಳನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ರಾತ್ರಿ ವೇಳೆ ಇದು ಅಪಾಯಕ್ಕೆ ಕಾರಣವಾ ಗುತ್ತದೆ. ಈ ಬಗ್ಗೆ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಕುಂಟುತ್ತಾ ಸಾಗಲು ಕಾರಣವೇನು? : ಸ್ಮಾರ್ಟಿ ಸಿಟಿ ಯೋಜನೆಯ ಕಾಮಗಾರಿಗಳು ಕುಂಟುತ್ತಾ ಸಾಗಲು ಹಲವು ರೀತಿಯ ಕಾರಣಗಳಿವೆ. ಅದರಲ್ಲಿ ಕೋವಿಡ್-19 ಕೂಡ ಒಂದು. ಕೋವಿಡ್‌ಗೂ ಮೊದಲು ಸ್ಮಾರ್ಟಿ ಸಿಟಿ ಯೋಜನೆಯ ಕಾಮಗಾರಿಗಳು ಪ್ರಗತಿಯತ್ತ ಸಾಗಿತ್ತು. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರ ಇದರಲ್ಲಿ ತೊಡಗಿಕೊಂಡಿದ್ದರು. ಆದರೆ, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಲೌಕ್‌ಡೌನ್ ಆದಾಗ ಕಾರ್ಮಿಕರು ಊರು ಸೇರಿದರು. ಹೀಗಾಗಿ ಕಾರ್ಮಿಕರ ಕೊರತೆ ಉಂಟಾಗಿ ಸ್ಮಾರ್ಟಿ ಸಿಟಿ ಯೋಜನೆ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು ಹೇಳುತ್ತಾರೆ. ಇದರ ಜತೆಗೆ ಯೋಜನೆ ಪ್ರಗತಿಗೆ ಗುತ್ತಿಗೆದಾರರೂ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ದೂರು ಇದೆ. ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು ಗುತ್ತಿಗೆದಾರರು ಯೋಜನೆ ಪ್ರಗತಿಗೆ ಉತ್ಸಾಹ ತೋರುತ್ತಿಲ್ಲ ಎಂಬುದನ್ನು ನಗರಾಭಿವೃದ್ಧಿ ಇಲಾಖೆ ಸಚಿವರ ಗಮನಕ್ಕೂ ತಂದಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆ ಸಾರ್ವಜನಿಕ ಯೋಜನೆ ಆಗಿದ್ದು ಇದಕ್ಕೆ ಸ್ಪಂದಿಸಿದ ಗುತ್ತಿಗೆದಾದರ ವಿರುದ್ಧ ಕ್ರಮಕ್ಕೆ ಈಗಾಗಲೇ ಸಚಿವ ಬೈರತಿ ಬಸವರಾಜ್ ಸೂಚಿಸಿದ್ದಾರೆ. ಇವೆಲ್ಲವುಗಳ ಜತೆಗೆ ಯೋಜನೆ ಅಧಿಕಾರಿಗಳನ್ನು ಸರ್ಕಾರ ಪದೇ ಪದೆ ಬದಲಾವಣೆ ಮಾಡುತ್ತಿರುವ ಬಗ್ಗೆಸಾರ್ವಜನಿಕ ವಲಯದಿಂದ ಅಪಸ್ವರಗಳು ಕೇಳಿಬಂದಿವೆ.
ಎರಡು ಹಂತ: 36 ರಸ್ತೆಗಳು : ಸ್ಮಾರ್ಟ್ ಸಿಟಿ ಯೋಜನೆಕೇಂದ್ರ-ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ500ಕೋಟಿ.ರೂ. ಮತ್ತು ರಾಜ್ಯ ಸರ್ಕಾರ 500ಕೋಟಿ ರೂ. ನೀಡಲಿದೆ. ನಗರದ ಹೃದಯಭಾಗದಲ್ಲಿನ ರಸ್ತೆಗಳು, ಉದ್ಯಾನ, ಮಾರುಕಟ್ಟೆ, ಬಸ್ ನಿಲ್ದಾಣಕ್ಕೆ ನವರೂಪ ನೀಡುವ ಯೋಜನೆಗಳೂ ಇದರಲ್ಲಿವೆ. ಒಟ್ಟು36 ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.29.49 ಕಿ.ಮೀ. ಉದ್ದದ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕಾಗಿ 481.65ಕೋಟಿ ರೂ. ವ್ಯಯಿಸಲಾಗುತ್ತಿದೆ. ಒಟ್ಟು13 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಗುತ್ತಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ7 ಗುತ್ತಿಗೆ ಪ್ಯಾಕೇಜ್‌ಗಳ ಮೂಲಕ20 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ16.89ಕಿ.ಮೀ.ಉದ್ದದ ರಸ್ತೆಕಾಮಗಾರಿ ಸೇರಿದೆ. ಸುಮಾರು 243.75ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಹಾಗೆಯೇ, 2ನೇ ಹಂತದ ಪ್ಯಾಕೇಜ್‌ಗೆ6 ಗುತ್ತಿಗೆ ಪ್ಯಾಕೇಜ್‌ಗಳು ಬರಲಿವೆ. ಇದರಲ್ಲಿ16 ರಸ್ತೆಗಳನ್ನುಕೈಗೆತ್ತಿಕೊಳ್ಳಲಾಗುತ್ತಿದೆ.12.6ಕಿ.ಮೀ ಉದ್ಧದ ರಸ್ತೆ ಇದಾಗಿದೆ. ಇದಕ್ಕಾಗಿ 191.3ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ.
ಎಲ್ಲೆಲ್ಲಿ ಕಾಮಗಾರಿ? : ರಾಜಭವನ, ವಿಧಾನಸೌಧ, ರೇಸ್‌ಕೋರ್ಸ್ ರಸ್ತೆ,ಕಮರ್ಷಿಯಲ್ ಸ್ಟ್ರೀಟ್,ಕಾಮರಾಜ್ ರಸ್ತೆ, ಹಲಸೂರು ರಸ್ತೆ, ಡಿಕೆನ್ಸನ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಮಿಲ್ಲರ್ಸ್ ರಸ್ತೆ,ಕ್ವಿನ್ಸ್ ರಸ್ತೆ, ಕಸ್ತೂರಬಾ ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿದೆ.
ಇಲಾಖೆಗಳ ಸಮನ್ವಯ ಕೊರತೆ? : ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿಯಲ್ಲಿ ಬೆಂಗಳೂರು ಜಲ ಮಂಡಳಿ, ಬೆಸ್ಕಾಂ ಮತ್ತು ಪೊಲೀಸ್ ಇಲಾಖೆಯ ಸಹಕಾರ ಅಗತ್ಯ. ಆದರೆ, ಇಲ್ಲಿ ಪೊಲೀಸ್ ಇಲಾಖೆ ಬಿಟ್ಟರೆ ಉಳಿದ ಇಲಾಖೆಗಳು ಅಷ್ಟೊಂದು ಮಹತ್ವ ನೀಡುತ್ತಿಲ್ಲ. ಇಲಾಖೆ ನಡುವೆ ಸಮನ್ವಯತೆ ಕೊರತೆ ಎದುರಾಗಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.
ಮಾರುಕಟ್ಟೆಗೆ ಹೊಸರೂಪ : ಈ ಕಾಮಗಾರಿಗಳು ಮುಗಿದ ತಕ್ಷಣ ಮುಂದಿನ ದಿನಗಳಲ್ಲಿ “ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’ ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್‌ಪಾರ್ಕ್ ಅಭಿವೃದ್ಧಿ, ಜವಾಹರಲಾಲ್ ನೆಹರುತಾರಾಲಯದಲ್ಲಿ ಆಡಿಟೋರಿಯಂ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ “ಸ್ಮಾರ್ಟ್’ ರೂಪ ನೀಡಲಿದೆ. ಹಾಗೆಯೇ 1928ರಲ್ಲಿ ನಿರ್ಮಾಣವಾಗಿರುವ ಕೆ.ಆರ್. ಮಾರುಕಟ್ಟೆಯನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. 3ನೇ ಹಂತದ ಯೋಜನೆಯಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ರಾಜಭವನ ಮತ್ತುವಿಧಾನ ಸೌಧ ವ್ಯಾಪ್ತಿಯ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿವಿಧಾನ ಮಂಡಲದ ಅಧಿವೇಶನ ಆರಂಭಕ್ಕೂ ಮುನ್ನ ಪೂರ್ಣಗೊಳ್ಳಲಿದೆ. ಉಳಿದ ಕಾಮಗಾರಿಗಳು ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿವೆ.ಈ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತು ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. – ಬೈರತಿ ಬಸವರಾಜ್, ನಗರಾಭಿವೃದ್ಧಿ ಸಚಿವ
– ದೇವೇಶ ಸೂರುಗುಪ್ಪ