Advertisement

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

01:00 AM Apr 20, 2024 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಚುನಾವಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿಲ್ಲ. ಇ.ವಿ.ಎಂ. ವಿವಿಪ್ಯಾಟ್‌ ನಿರ್ವಹಣೆ ಯಲ್ಲಿ ಯಾವುದೇ ದೋಷಗಳಿಲ್ಲದಿರು ವುದರಿಂದ ಆತಂಕ ಬೇಡವೆಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಿಳಿಸಿದ್ದಾರೆ.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಲ ಅಭ್ಯರ್ಥಿಗಳಿಗೂ, ಏಜಂಟರಿಗೂ ಮಾಹಿತಿ ನೀಡಿದ ಬಳಿಕವೇ ಅವರ ಉಪಸ್ಥಿತಿಯಲ್ಲಿ ಕಮೀಷನಿಂಗ್‌ ಮಾಡಲಾಗಿದೆ. ಪ್ರತ್ಯೇಕ ಅಭ್ಯರ್ಥಿಯ ಸ್ಲಿಪ್‌ ಮಾತ್ರ ಮತದಾನ ಮಾಡದೆ ವಿವಿಪ್ಯಾಟ್‌ನಲ್ಲಿ ಬರುತ್ತಿದೆ ಎಂಬ ಇಬ್ಬರು ಅಭ್ಯರ್ಥಿಗಳ ಏಜೆಂಟರು ಆರೋಪಿಸಿದ ಹಿನ್ನೆಲೆಯಲ್ಲಿ ತತ್‌ಕ್ಷಣ ಪರಿಶೀಲಿಸಿ ಎಲ್ಲ ತಪ್ಪು ತಿಳಿವಳಿಕೆಯನ್ನು ನಿವಾರಿಸಲಾಗಿದೆ. ಹಾಗಾಗಿ ಯಾವುದೇ ಶಂಕೆ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಿಪಿಎಂ ನೇತಾರನಿಂದ
ನಕಲಿ ಮತದಾನ: ಚುನಾವಣ ಸಿಬಂದಿ ಅಮಾನತು
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಕಲ್ಯಾಶೆÏàರಿ ವಿಧಾನಸಭಾ ಕ್ಷೇತ್ರದಲ್ಲಿ 92ರ ಹರೆಯದ ವೃದ್ಧೆಯ ಪರವಾಗಿ ಸಿಪಿಎಂ ನೇತಾರನೋರ್ವ ಮತ ಚಲಾಯಿಸಿದ್ದಾಗಿ ದೂರು ನೀಡಲಾಗಿದೆ.
ಹಿರಿಯ ಜೀವಿಗಳಿಗೆ ಅವರ ಮನೆಯಲ್ಲೇ ಮತ ಚಲಾಯಿಸುವ ಪ್ರಕ್ರಿಯೆಯಡಿ ಎ. 18 ರಂದು ಚುನಾವಣಾ ಸಿಬಂದಿ ಪಾರಕಡವಿನ ದೇವಿ(92) ಅವರ ಮನೆಗೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿದ್ದರು. ಆಗ ಸ್ಥಳೀಯ ಸಿಪಿಎಂನ ಮಾಜಿ ಬ್ರಾಂಚ್‌ ಕಾರ್ಯದರ್ಶಿ ಗಣೇಶನ್‌, ದೇವಿಯವರ ಮತ ಚಲಾಯಿಸಿದರೆಂದು ದೂರಲಾಗಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳೂ ಬಹಿರಂಗಗೊಂಡಿದ್ದು, ನಕಲಿ ಮತದಾನ ಆರೋಪದ ಹಿನ್ನೆಲೆಯಲ್ಲಿ ಸ್ಪೆಷಲ್‌ ಪೋಲಿಂಗ್‌ ಆಫೀಸರ್‌, ಪೋಲಿಂಗ್‌ ಅಸಿಸ್ಟೆಂಟ್‌ ಮೈಕ್ರೋ ಅಬ್ಸರ್ವರ್‌, ಸ್ಪೆಷಲ್‌ ಪೊಲೀಸ್‌ ಆಫೀಸರ್‌ ಮತ್ತು ವೀಡಿಯೋಗ್ರಾಫರ್‌ನನ್ನು ಕಣ್ಣೂರು ಜಿಲ್ಲಾಧಿಕಾರಿ ಅರುಣ್‌ ಕೆ.ವಿಜಯನ್‌ ಅಮಾನತುಗೊಳಿಸಿದ್ದು, ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next