Advertisement

ಮಂಗಳೂರು ವಿವಿ ಕ್ಯಾಂಪಸ್‌ನೊಳಗೆ ವಾಹನಗಳಿಗೆ ನೋ ಎಂಟ್ರಿ!

02:12 AM Jun 17, 2019 | sudhir |

ಮಹಾನಗರ: ಪರಿಸರ ಮಾಲಿನ್ಯ ಕಡಿಮೆಗೊಳಿಸುವ ಉದ್ದೇಶದಿಂದ ಶೀಘ್ರದಲ್ಲೇ ಮಂಗಳೂರು ವಿವಿ ಕ್ಯಾಂಪಸ್‌ನೊಳಗೆ ಎಲ್ಲ ರೀತಿಯ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲು ಉದ್ದೇಶಿಸಲಾಗಿದೆ. ಆ ಮೂಲಕ ಕ್ಯಾಂಪಸ್‌ನೊಳಗೆ ಸಂಚಾರಕ್ಕೆ ಕೇವಲ ಬ್ಯಾಟರಿ ಚಾಲಿತ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

Advertisement

ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಮಂಗಳೂರು ವಿವಿ ಈ ಮೂಲಕ ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದು, ತನ್ನ ಕ್ಯಾಂಪಸ್‌ ಅನ್ನು ಪರಿಸರ ಸ್ನೇಹಿ ಮಾಡಲು ನಿರ್ಧರಿಸಿದೆ.

ಹೆಚ್ಚುತ್ತಿರುವ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಸುಮಾರು 330 ಎಕ್ರೆ ಜಾಗದಲ್ಲಿರುವ ವಿವಿ ಕ್ಯಾಂಪಸ್‌ನಲ್ಲಿ ಯಾವುದೇ ವಾಹನ ಸಂಚರಿಸಲು ಆವಕಾಶ ನೀಡದೆ ಕೇವಲ ಬ್ಯಾಟರಿ ಚಾಲಿತ ಬಗ್ಗಿಸ್‌ಗಳ ಬಳಸಿ ಇಕೋ ಫ್ರೆಂಡ್ಲಿ ಕ್ಯಾಂಪಸ್‌ನ್ನಾಗಿಸಲು ಮಂಗಳೂರು ವಿವಿ ನೂತನ ಕುಲಪತಿ ಪ್ರೊ| ಪಿ.ಎಸ್‌. ಎಡಿಪಡಿತ್ತಾಯ ಚಿಂತನೆ ಮಾಡಿದ್ದಾರೆ. ಅದಕ್ಕಾಗಿ ಹಂತ ಹಂತವಾಗಿ ಯೋಜನೆ ರೂಪುಗೊಳ್ಳುತ್ತಿದ್ದು, ವಿವಿ ಸಿಂಡಿಕೇಟ್ ಸದಸ್ಯರ ಒಪ್ಪಿಗೆ, ಅನುದಾನ ಮಂಜೂರಾದರೆ ಇನ್ನೂ ಕೆಲವೇ ಸಮಯಗಳಲ್ಲಿ ವಿವಿ ಕ್ಯಾಂಪಸ್‌ ಇಕೋ ಫ್ರೆಂಡ್ಲಿ ಆಗಲಿದೆ.

ಅನುದಾನದ ಆವಶ್ಯಕತೆ

ಮಾದರಿ ವಿವಿಯನ್ನಾಗಿಸುವ ನಿಟ್ಟಿನಲ್ಲಿ ಹಲವು ವಿನೂತನ ಯೋಜನೆಗಳನ್ನು ರೂಪಿಸುತ್ತಿರುವ ನೂತನ ಕುಲಪತಿಗಳು ಮಂಗಳೂರು ವಿವಿ ಕ್ಯಾಂಪಸ್‌ನ್ನು ಇಕೋ ಫ್ರೆಂಡ್ಲಿಯಾಗಿ ಮಾಡಲು ಕ್ಯಾಂಪಸ್‌ ಆವರಣದಲ್ಲಿ ವಾಹನ ಸಂಚಾರವನ್ನು ನಿಲ್ಲಿಸಿ ಬಗ್ಗಿಸ್‌ ಅಳವಡಿಸಲು ಯೋಜನೆ ರೂಪಿಸಿದ್ದಾರೆ. ಇದರ ಅನುಷ್ಠಾನಕ್ಕಾಗಿ 2ರಿಂದ ಮೂರು ಕೋಟಿ ರೂ. ವರೆಗೆ ಅನುದಾನದ ಆವಶ್ಯಕತೆ ಇದ್ದು, ಇದಕ್ಕಾಗಿ ಕೇಂದ್ರದ ಸ್ವಚ್ಛಭಾರತ ಅಥವಾ ಇನ್ನಿತರ ಯೋಜನೆಗಳಲ್ಲಿ ಅನುದಾನ ದೊರೆತರೆ ಶೀಘ್ರ ಅನುಷ್ಠಾನಕ್ಕೆ ಚಿಂತನೆ ನಡೆಸಿದ್ದಾರೆ.

Advertisement

ಸದ್ಯ ಮಂಗಳೂರು ವಿವಿ ಕ್ಯಾಂಪಸ್‌ ಒಳಗೆ ಕೆಲವು ಪ್ರದೇಶಗಳಿಗೆ ಸಂಪರ್ಕ ರಸ್ತೆ ಹಾದುಹೋಗುತ್ತಿದ್ದು, ಇದಕ್ಕೆ ಪರ್ಯಾಯ ರಸ್ತೆ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಆ ಬಗ್ಗೆಯೂ ರೂಪುರೇಷೆಗಳನ್ನು ಸಿದ್ಧಗೊಳಿಸಲಾಗುತ್ತದೆ ಎಂದು ಅವರು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.

– ಹಲವು ವಿನೂತನ ಯೋಜನೆ

– ಇಕೋ ಫ್ರೆಂಡ್ಲಿ ಕ್ಯಾಂಪಸ್‌

– ಶೀಘ್ರ ಅನುಷ್ಠಾನಕ್ಕೆ ಚಿಂತನೆ

ವಿವಿ ಕ್ಯಾಂಪಸ್‌ 330 ಎಕ್ರೆ ಇದ್ದು, ಇಲ್ಲಿ ಸಂಚರಿಸಲು ಸುಮಾರು 10 ಬಗ್ಗಿಸ್‌ಗಳ ಆವಶ್ಯಕತೆ ಇದೆ. ವಿವಿ ಆವರಣದ ಮುಖ್ಯದ್ವಾರದಲ್ಲೇ ವಾಹನ ಪಾರ್ಕಿಂಗ್‌ಗಳಿಗೆ ವ್ಯವಸ್ಥೆ ಮಾಡಿ ಅಲ್ಲಿಂದ ಬಗ್ಗಿಸ್‌ ಮೂಲಕ ವಿವಿ ಆವರಣದಲ್ಲಿ ಸುತ್ತಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದ ವಾಯುಮಾಲಿನ್ಯವಾಗದೆ ಕ್ಯಾಂಪಸ್‌ ಇಕೋ ಫ್ರೆಂಡ್ಲಿಯಾಗಿರುತ್ತದೆ. ಇದರಿಂದ ವಿವಿ ಸಂಯೋಜಿತ ಸುಮಾರು 210 ಕಾಲೇಜುಗಳಿಗೆ ಮಾದರಿಯಾಗಬಲ್ಲದು ಎಂಬುದು ವಿವಿ ನೂತನ ಕುಲಪತಿ ಪ್ರೊ| ಪಿ.ಎಸ್‌. ಎಡಿಪಡಿತ್ತಾಯ ಅವರ ಆಶಯ.

ಮಂಗಳೂರು ವಿವಿ ಕ್ಯಾಂಪಸ್‌ನ ವಿವಿಧ ವಿಭಾಗ ಸಹಿತ ವಿದ್ಯಾರ್ಥಿ ನಿಲಯ, ಅತಿಥಿ ಗೃಹ, ಲ್ಯಾಬ್‌ಗಳಲ್ಲಿ ಬಳಸಲಾಗುತ್ತಿರುವ ನೀರುಗಳನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ವೇಸ್ಟ್‌ ವಾಟರ್‌ ಟ್ರಿಟ್ಮೆಂಟ್ ಫ್ಲಾಂಟ್ ರಚಿಸಲು ಮಂಗಳೂರು ವಿವಿ ನೂತನ ಉಪಕುಲಪತಿಗಳು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ 5 ಕೋಟಿ ರೂ. ಅಂದಾಜು ಪಟ್ಟಿ ರಚಿಸಲಾಗಿದ್ದು, ಪ್ಲಾನ್‌ ಸಿದ್ಧಗೊಂಡಿದೆ. ಜೂ. 19ರಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಕ್ಯಾಂಪಸ್‌ ಆವರಣದಲ್ಲಿರುವ ಉದ್ಯಾನವನಗಳಿಗೆ ಶುದ್ಧ ನೀರು ಬಿಡಲಾಗುತ್ತಿದ್ದು, ಇದರಿಂದ ನೀರು ಪೋಲಾಗುತ್ತಿದೆ. ಎಪ್ರಿಲ್, ಮೇ ತಿಂಗಳಲ್ಲಿ ವಿವಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಬಳಸಿದ ನೀರನ್ನು ಶುದ್ಧಿಕರಿಸಿ ಉದ್ಯಾನವನಗಳಿಗೆ ಬಿಡಲು ಚಿಂತನೆ ನಡೆಸಲಾಗಿದೆ. ಸಿಂಡಿಕೇಟ್ ಸಭೆಯಲ್ಲಿ ಈ ಪ್ರಸ್ತಾವನೆಗೆ ಸಮ್ಮತಿ ದೊರೆತರೆ ಮಂಗಳೂರು ವಿವಿ ಕ್ಯಾಂಪಸ್‌ ರಾಜ್ಯದ ಎಲ್ಲ ವಿವಿಗಳಿಗೆ ಮಾದರಿಯಾಗಬಲ್ಲದು.

ವ್ಯರ್ಥ ನೀರು ಮರುಬಳಕೆಗೆ ಸಿದ್ಧತೆ

– ಪ್ರಜ್ಞಾ ಶೆಟ್ಟಿ
Advertisement

Udayavani is now on Telegram. Click here to join our channel and stay updated with the latest news.

Next