Advertisement

ಮತ ಹಾಕದವರಿಗೆ ಪ್ರವೇಶವಿಲ್ಲ ! ರಾಜ್ಯದ ಕೆಲವು ಪ್ರವಾಸಿ ತಾಣಗಳಲ್ಲಿ  ನಿರ್ಧಾರ

01:12 AM May 10, 2023 | Team Udayavani |

ಬೆಂಗಳೂರು: ಎಲ್ಲರೂ ಮತದಾನದಲ್ಲಿ ಭಾಗಿಯಾಗಬೇಕು, ಇದನ್ನು ಒಂದು ರಜೆ ರೀತಿ ಪರಿಗಣಿಸಬಾರದು ಎಂಬ ಉದ್ದೇಶದಿಂದ ಮತದಾನ ಜಾಗೃತಿಗಾಗಿ ಕೇಂದ್ರ ಚುನಾವಣ ಆಯೋಗ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ

Advertisement

ನಡುವೆ ರಾಜ್ಯದ ಕೆಲವು ಪ್ರವಾಸಿ ತಾಣಗಳಲ್ಲಿ ಮತದಾನ ಮಾಡದ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಮತದಾನ ದಿನದ ಮೊದಲೇ ಕೆಲವು ಸ್ಥಳ ಗಳಲ್ಲಿ “ಮೇ 10ರಂದು ಪ್ರವೇಶವಿಲ್ಲ’ ಎಂಬ ಬೋರ್ಡ್‌ ಲಗತ್ತಿಸಲಾಗಿದೆ. ಈ ಮೂಲಕ ಮತದಾನ ಹೆಚ್ಚಳಕ್ಕಾಗಿ ತಮ್ಮದೇ ರೀತಿಯಲ್ಲಿ ಕೈಜೋಡಿಸಿವೆ.

ಪ್ರಮುಖವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಬೆಳಗ್ಗೆಯಿಂದಲೇ ಇಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಕುಪ್ಪಳ್ಳಿ ಯಲ್ಲಿರುವ ಕವಿಮನೆ, ಕುವೆಂಪು ಜನ್ಮಸ್ಥಳ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ಬಂದ್‌ ಮಾಡಲಾಗಿದೆ. ಸಿಂಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬರಬೇಡಿ ಎಂದು ದೇಗುಲದ ಆಡಳಿತ ಮಂಡಳಿ ಕೇಳಿಕೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿಸಾಗರ (ಸೂಳೆಕೆರೆ)ಯಲ್ಲಿ ಬೋಟಿಂಗ್‌ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಮತದಾನ ಮಾಡದವರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.

Advertisement

ಮತ ಹಾಕದವರಿಗೆ ನಿರ್ಬಂಧ

ಮಂಡ್ಯ ಜಿಲ್ಲೆಯಲ್ಲಿ ಬೇರೆಯದೇ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿ ಮತದಾನ ಮಾಡಿ ಬಂದವರಿಗಷ್ಟೇ ಪ್ರವಾಸಿ ತಾಣಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಶ್ರೀರಂಗಪಟ್ಟಣ, ಕೆಆರ್‌ ಎಸ್‌ ಬೃಂದಾವನ, ಬಲಮುರಿ, ಎಡಮುರಿ, ಗಗನಚುಕ್ಕಿ, ರಂಗನತಿಟ್ಟು ಪಕ್ಷಿಧಾಮ, ಮುತ್ತತ್ತಿಗಳಿಗೆ ಈ ನಿರ್ಧಾರ ಅನ್ವಯಲಾಗಲಿದೆ. ಬೀದರ್‌ ಜಿಲ್ಲೆಯಲ್ಲೂ ಇಂಥದ್ದೇ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮತದಾನ ಮಾಡಿ ಬಂದವರಿಗೆ ಮಾತ್ರ ಪ್ರವೇಶ ನೀಡುವಂತೆ ಸೂಚಿಸಲಾಗಿದೆ. ಹಾಗೆಯೇ ಮತದಾನ ಮಾಡದವರಲ್ಲಿ ಜಾಗೃತಿ ಮೂಡಿಸುವಂತೆ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next