Advertisement

ಗೆಲುವಿನ ಅಹಂ ಬೇಡ: ಸಿ.ಟಿ.ರವಿ

12:06 AM Jun 30, 2019 | sudhir |

ಮಡಿಕೇರಿ: ನಿರಂತರ ಗೆಲುವಿನ ಅಹಂನಿಂದ ಮೈಮರೆಯದೆ ಕಾರ್ಯ ಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಸಂಘಟಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

Advertisement

ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಜು.6ರಿಂದ ಆ.11ರವರೆಗೆ ದೇಶಾದ್ಯಂತ ಸಾಥ್‌ ಆಯೇ-ದೇಶ್‌ ಬನಾಯೇ ಎಂಬ ಘೋಷ ವಾಕ್ಯದೊಂದಿಗೆ ಸಂಘಟನ್‌ ಪರ್ವ ಸದಸ್ಯತ್ವ ಅಭಿಯಾನ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗಾಗಿ ಕಾರ್ಯಾಗಾರ ನಡೆಯಿತು.

ನಗರದ ಜಿಲ್ಲಾ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಿ.ಟಿ.ರವಿ, ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ 25 ಸಾವಿರ ನೂತನ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ 48 ಸಾವಿರ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿರುವುದು ಶ್ಲಾಘನೀಯ ಎಂದರು. ಬಿಜೆಪಿ ಒಂದೇ ಒಂದು ಸ್ಥಾನ ಗಳಿಸದ ಕೇರಳ, ತಮಿಳುನಾಡು ಸೇರಿದಂತೆ 3 ರಾಜ್ಯಗಳಲ್ಲಿ ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಪಡೆಯುವಂತೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದೂ ರವಿ ತಿಳಿಸಿದರು.

ಕರ್ನಾಟಕದಲ್ಲಿ 50 ಲಕ್ಷ ಹೊಸ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ ಎಂದೂ ರವಿ ಇದೇ ಸಂದರ್ಭ ತಿಳಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ 6 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ ಎಂದು ಸರ್ಕಾರ ವೆಚ್ಚ ತೋರಿಸಿದೆ. ಆದರೆ, ಬಹುತೇಕ ದಾನಿಗಳೇ ಎಲ್ಲಾ ವಸ್ತು, ಪರಿಕರಗಳನ್ನು ಸಂತ್ರಸ್ತರಿಗೆ ನೀಡಿರುವಾಗ ಇಷ್ಟೊಂದು ಕೋಟಿ ರೂ. ವೆಚ್ಚವಾಗಿರುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಈ ದುರು ಪಯೋಗದ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.

Advertisement

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸೋಲಿನ ಹತಾಶೆಯಿಂದ ಬೇಕಾಬಿಟ್ಟಿ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಿ ದ್ದಾರೆ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ.ಸುನೀಲ್ ಸುಬ್ರಹ್ಮಣಿ ಮಾತನಾಡಿ, ವಾರಣಾಸಿಯಲ್ಲಿ ಜಾರಿಗೊಳಿಸಿದಂತೆ ವೈನಾಡ್‌ ನಲ್ಲಿಯೂ ಸಾಕಷ್ಟು ಯೋಜನೆ ಜಾರಿಗೊಳಿಸುವುದಾಗಿ ಪ್ರಧಾನಿ ಹೇಳಿದ್ದಾರೆ. ಕೇರಳದಲ್ಲಿ ಬಿಜೆಪಿಗೆ 1 ಸ್ಥಾನ ಬಾರದೇ ಇದ್ದರೂ ಕ್ಷೇತ್ರದ ಪ್ರಗತಿ ಮುಖ್ಯ ಎಂಬ ಮೋದಿ ಧೋರಣೆಯೆಲ್ಲಿ, ಮೋದಿಗೆ ವೋಟ್ ಹಾಕ್ತೀರಾ ಎಂದು ಬೊಬ್ಬಿಡುತ್ತಿರುವ ಮೈತ್ರಿ ಪಕ್ಷಗಳ ಮುಖಂಡರ ಮನಸ್ಥಿತಿಯೆಲ್ಲಿ ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್‌, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮನುಮುತ್ತಪ್ಪ, ರಾಜ್ಯ ಕಾರ್ಯದರ್ಶಿ ರಾಬಿನ್‌ ದೇವಯ್ಯ, ಮೈಸೂರಿನ ರಾಜೇಂದ್ರ, ಕಾಂತಿ ಸತೀಶ್‌, ರೀನಾ ಪ್ರಕಾಶ್‌, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುಜಾಕುಶಾಲಪ್ಪ, ವಿಧಾನಪರಿಷತ್‌ ಮಾಜಿ ಸದಸ್ಯ ಎಸ್‌.ಜಿ.ಮೇದಪ್ಪ, ಸದಸ್ಯತ್ವ ಅಭಿಯಾನದ ಸಂಚಾಲಕ ಶಾಂತೆಯಂಡ ರವಿಕುಶಾಲಪ್ಪ, ಜಿಲ್ಲಾ ಉಸ್ತುವಾರಿ ಉದಯಕುಮಾರ್‌ ಶೆಟ್ಟಿ, ಮಡಿಕೇರಿ ಬಿಜೆಪಿ ಅಧ್ಯಕ್ಷ ಮಹೇಶ್‌ ಜೈನಿ, ಕಾರ್ಯದರ್ಶಿ ಬಿ.ಕೆ.ಅರುಣ್‌, ಮಡಿಕೇರಿ ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ, ಜಿ.ಪಂ. ಸದಸ್ಯರಾದ ಮುರಳಿ ಕರಂಬಯ್ಯ ಕಿರಣ್‌ ಕಾರ್ಯಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next