Advertisement

ಪಾರದರ್ಶಕ ಚುನಾವಣೆಗೆ ಅಗತ್ಯಕ್ರಮ 

08:15 AM Mar 11, 2018 | Team Udayavani |

ಬೆಂಗಳೂರು: ಇವಿಎಂಗಳ ದುರ್ಬಳಕೆ ಬಗ್ಗೆ ಯಾವ ಪಕ್ಷಗಳಿಗೂ ಅನುಮಾನ ಬೇಡ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಕೇಂದ್ರ ಚುನಾವಣೆ ಆಯೋಗ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.

Advertisement

ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ) ವಿಶ್ವಾಸಾರ್ಹತೆ ಪ್ರಶ್ನಿಸುವ ಯಾವುದೇ ಅಂಶಗಳನ್ನು ಕೇಂದ್ರ ಚುನಾವಣಾ ಆಯೋಗ ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದು ರಾವತ್‌ ಸ್ಪಷ್ಟಪಡಿಸಿದರು. ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್
ಮ್ಯಾನೇಜ್‌ಮೆಂಟ್‌ ಬೆಂಗಳೂರು (ಐಐಎಂಬಿ) ಆವರಣದಲ್ಲಿ ಶನಿವಾರ ಎಡಿಆರ್‌ (ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌
ರಿಫಾಮ್ಸ್‌ì) ಚುನಾವಣೆ ಮತ್ತು ರಾಜಕೀಯ ಸುಧಾರಣೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನೆ ಬಂದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಲಾಗುವುದು. ವದಂತಿಗಳು ಸೃಷ್ಟಿಸುವ
ಒತ್ತಡಗಳಿಂದ ಸುಧಾರಣೆಗಳು ಸಾಧ್ಯವಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಇದಕ್ಕೂ ಮುನ್ನ “ಚುನಾವಣೆ ಮೇಲೆ ತೋಳ್ಬಲ ಮತ್ತು ಹಣಬಲದ ಪ್ರಭಾವ’ ಕುರಿತ ಗೋಷ್ಠಿಯಲ್ಲಿ ಕಾಂಗ್ರೆಸ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ಮಾತನಾಡಿ, “ಇವಿಎಂ ಬಗ್ಗೆ ಹಲವು ಅನುಮಾನಗಳಿವೆ. ಶಾಸಕರು ಸೇರಿ ಅಭ್ಯರ್ಥಿಗಳು ಆತಂಕದಲ್ಲಿ ಚುನಾವಣೆ
ಎದುರಿಸುತ್ತಿದ್ದಾರೆ. ಆದ್ದರಿಂದ ಕೇಂದ್ರ ಚುನಾವಣಾ ಆಯೋಗವು ಇವಿಎಂ ಬದಲಿಗೆ ಈ ಹಿಂದಿನಂತೆ ಬ್ಯಾಲೆಟ್‌ ಪೇಪರ್‌ ಸೂಕ್ತ. ಇಸ್ರೇಲ್‌, ಜರ್ಮನಿ ಮತ್ತಿತರ ದೇಶಗಳು ಕೂಡ ಇವಿಎಂನಿಂದ ಬ್ಯಾಲೆಟ್‌ ಪೇಪರ್‌ಗೆ ವರ್ಗಾವಣೆಗೊಂಡಿವೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಚುನಾವಣೆಯಲ್ಲಿ ಹಣಬಲ ಮತ್ತು ತೋಳ್ಬಲದ ಬಗ್ಗೆ ಚರ್ಚೆ ಮಾಡಿ’ ಎಂದರು. ನಂತರ ಬ್ರಿಜೇಶ್‌ ಕಾಳಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಓಂಪ್ರಕಾಶ್‌ ರಾವತ್‌, “ಇವಿಎಂ ಬಗೆಗಿನ ಯಾವುದೇ ಅನುಮಾನಗಳಿಗೂ ಆಯೋಗದ ವೆಬ್‌ಸೈಟ್‌ನಲ್ಲಿ ನಿಮಗೆ ಉತ್ತರ ಸಿಗುತ್ತದೆ. ವದಂತಿಗಳು ಸೃಷ್ಟಿಸುವ ಒತ್ತಡಗಳಿಂದ ಸುಧಾರಣೆ ಸಾಧ್ಯವಿಲ್ಲ’ ಎಂದು ತಿಳಿಸಿದರು.

ತಂತ್ರಜ್ಞಾನದ ಫ‌ಲ: “ಸಿ-ವೋಟರ್‌’ ಸಂಸ್ಥಾಪಕ ಯಶವಂತ್‌ ದೇಶಮುಖ್‌ ಮಾತನಾಡಿ, 1998ರ ಮುನ್ನ ಬ್ಯಾಲೆಟ್‌ ಪೇಪರ್‌ ಇತ್ತು. ಆಗ ಆಡಳಿತದಲ್ಲಿರುವ ಪಕ್ಷಗಳೇ ಪದೇಪದೆ ಅಧಿಕಾರಕ್ಕೆ ಬರುತ್ತಿದ್ದವು. ಆದರೆ, ಇವಿಎಂ ಪರಿಚಯಿಸಿದ ನಂತರ ಇದರ ಚಿತ್ರಣ ಬದಲಾಯಿತು. ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷಗಳು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇ ಇಲ್ಲ. ಇದು ತಂತ್ರಜ್ಞಾನದ ಫ‌ಲಶ್ರುತಿ ಎಂದು ಹೇಳಿದರು.

Advertisement

ಇವಿಎಂನಲ್ಲಿರುವ ತಾಂತ್ರಿಕ ದೋಷಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಆ ತಂತ್ರಜ್ಞಾನದಿಂದಾದ ಬದಲಾವಣೆಯನ್ನು
ಉಲ್ಲೇಖೀಸುತ್ತಿದ್ದೇನೆ. ಈ ನಿಟ್ಟಿನಲ್ಲಿ ದೇಶದ ಚುನಾವಣಾ ಇತಿಹಾಸವನ್ನು ಇವಿಎಂ ಪೂರ್ವ ಮತ್ತು ನಂತರದ ಚುನಾವಣೆ ಎಂದು
ವಿಶ್ಲೇಷಿಸಬೇಕಾಗುತ್ತದೆ ಎಂದೂ ದೇಶಮುಖ್‌ ತಿಳಿಸಿದರು.

ಆಧಾರ್‌ ಜೋಡಣೆಗೆ ಮರುಚಾಲನೆ?: ಇದಕ್ಕೂ ಮುನ್ನ ಸಂವಾದದಲ್ಲಿ ಮಾತನಾಡಿದ ಓಂಪ್ರಕಾಶ್‌ ರಾವತ್‌, ಮತದಾರರ ಗುರುತಿನ ಚೀಟಿಯೊಂದಿಗೆ “ಆಧಾರ್‌’ ಜೋಡಣೆಗೆ ಶೀಘ್ರ ಮರುಚಾಲನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2015ರಲ್ಲಿ “ಆಧಾರ್‌’ ಜೋಡಣೆ ಕಾರ್ಯ ನಡೆದಿದೆ. ಆದರೆ, ನಂತರದಲ್ಲಿ ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. ಈ
ಸಂಬಂಧದ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ. ದೇಶದಲ್ಲಿ ಒಟ್ಟಾರೆ 87.50 ಕೋಟಿ ಮತದಾರರಿದ್ದು, ಈ ಪೈಕಿ 32 ಕೋಟಿ ಮತದಾರರ ಗುರುತಿನ ಚೀಟಿ ಆಧಾರ್‌ನೊಂದಿಗೆ ಜೋಡಣೆ ಆಗಿದೆ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಘೋಷಣೆ: ಕಾದುನೋಡಿ
“ಚುನಾವಣೆ ದಿನಾಂಕ ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು. ಅಲ್ಲಿಯವರೆಗೆ ಕಾಯಿರಿ…’ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಬೆಂಗಳೂರು (ಐಐಎಂಬಿ) ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೇಂದ್ರ ಮುಖ್ಯ
ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌, ರಾಜ್ಯ ಮುಖ್ಯ ಚುನಾವಣಾ ಆಯಕ್ತ ಸಂಜೀವ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next